ಕಲ್ಪತರು ವಿದ್ಯಾಸಂಸ್ಥೆ ಹಾಗೂ ನಗರಸಭೆ ತಿಪಟೂರು ಸಹಯೋಗದಲ್ಲಿ ತ್ಯಾಜ್ಯ ಸಂಸ್ಕರಣೆ ಜಾಗೃತಿ ಜಾಥ ಕಾರ್ಯಕ್ರಮ

Spread the love

ಕಲ್ಪತರು ವಿದ್ಯಾಸಂಸ್ಥೆ ಹಾಗೂ ತಿಪಟೂರು ನಗರಸಭೆ ಸಹಯೋಗದಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಜಾಥ ನಡೆಸಲಾಯಿತು, ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು

ಜಾಗೃತಿ ಜಾಥಕ್ಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್ ಮಾತನಾಡಿ ನಗರದ ಪ್ರತಿಯೊಬ್ಬ ನಾಗರೀಕರಿಗೆ ಸ್ವಚ್ಚತೆ ಹಾಗೂ ಸ್ವಚ್ಚ ಪರಿಸರದ ಅರಿವು ಇರಬೇಕಾಗುತ್ತದೆ, ನಮ್ಮ ಪರಿಸರ ಶುಚಿಯಾಗಿ ಇಟ್ಟುಕೊಂಡರೆ ರೋಗಗಳಿಂದ ದೂರವಿರಲು ಸಾಧ್ಯ,ನಗರದಲ್ಲಿ ಸ್ವಚ್ಚತೆ ಕಾಪಾಡಲು ನಗರಸಭೆ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ವ್ಯಯಮಾಡುತ್ತಿದೆ, ಸ್ವಚ್ಚಭಾರತ್ ಯೋಜನೆ ಅಡಿ, ನಗರದಲ್ಲಿ ಸ್ವಚ್ಚತಾ ಕೆಲಸಗಾರರು ಹಾಗೂ ವಾಹನಗಳು ಒಡಾಡುತ್ತಿವೆ, ನಾಗರೀಕರು ಎಲ್ಲಂದರಲ್ಲಿ ತ್ಯಾಜ್ಯ ಎಸೆಯದೆ .ಕಸ ಸಂಗ್ರಹ ಮಾಡಿ, ನಮ್ಮ ವಾಹನಗಳಿಗೆ ನೀಡಿದರೆ ನಿಮ್ಮ ಸುತ್ತಮುತ್ತಲ ವಾತಾವರಣವೂ ಶುಚಿಯಾಗುತ್ತದೆ, ನಗರದ ನಾಗರೀಕರು ಜಾಗೃತರಾಗಿ ನಮ್ಮ ಸುತ್ತಮುತ್ತಲ ಜನರಿಗೆ ಅರಿವು ಮೂಡಿಸಿ. ಸ್ವಚ್ಚ ಪರಿಸರಕ್ಕಾಗಿ ನಗರಸಭೆಯೊಂದಿಗೆ ಕೈ ಜೋಡಿಸಿ ಎಂದು ತಿಳಿಸಿದರು

ಕಲ್ಪತರು ವಿದ್ಯಾ ಕಲ್ಪತರು ವಿದ್ಯಾಸಂಸ್ಥೆ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜ್ ಮಾತನಾಡಿ ಸ್ವಚ್ಚ ಹಾಗೂ ಸುಂದರ ಪರಿಸರದಿಂದ ಮನುಷ್ಯ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದು, ಉತ್ತಮ ಹಾಗೂ ಸ್ವಚ್ಚ ಪರಿಸರ ಕಾಪಾಡಲು ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿದರೆ ಸಾಲದು, ವಯುಕ್ತಿಕ ಸ್ವಚ್ಚತೆ ಹಾಗೂ ನಮ್ಮ ಸುತ್ತ ಮುತ್ತಲ ಪರಿಸರ ಸ್ವಚ್ಚವಾಗಿರಲಿ ಅನುವ ಜಾಗೃತಿ ಸಾರ್ವಜನಿಕರಲ್ಲಿ ಮೂಡಬೇಕು.ಸ್ವಚ್ಚ ಪರಿಸರವಿದರೆ ಆರೋಗ್ಯವಂತ ವಾತವರಣವಿರುತ್ತದೆ, ದೇಶದಲ್ಲಿ ಸ್ವಚ್ಚ ಭಾರತ್ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮವಾಗಿದ್ದು ನಗರದ ಪರಿಸರ ಸ್ವಚ್ಚವಾಗಿಡಲು ನಗರಸಭೆಯೊಂದಿಗೆ ನಾಗರೀಕರು ಕೈಜೋಡಿಸ ಬೇಕು, ಒಣಕಸ ಹಾಗೂ ಹಸಿ ಕಸ ಬೇರ್ಪಡಿಸಿದರೆ, ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲು ಸಾಧ್ಯವಾಗುತ್ತದೆ, ಎಂದು ತಿಳಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!