ತಿಪಟೂರು ವಿರುಪಾಕ್ಷಿಪುರ ಗೇಟ್ ಬಳಿ ಭೀಕರ ಅಪಘಾತ ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ಮಹಿಳೆ ಅಪಘಾತದಲ್ಲಿ ಅಸ್ವಸ್ಥ

Spread the love

ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ತಿಪಟೂರು ಹಾಲ್ಕುರಿಕೆ ರಸ್ತೆಯ ವಿರುಪಾಕ್ಷಿಪುರ ಗೇಟ್ ಬಳಿ KA 44 8018 ಮಾರುತಿಸ್ವಿಪ್ಟ್ ಡಿಜೇರೋಹಾಗೂ KA 16 N5260 ಸಂಖ್ಯೆಯ. ಮಾರುತಿ ಬ್ರಿಜಾ ಕಾರುಗಳ ನಡುವೇ ಮುಖಾಮುಖಿ ಡಿಕ್ಕಿಯಾಗಿದ್ದು ಬ್ರೀಜಾ ಕಾರಿನಲ್ಲಿ ಪ್ರಯಾಣಿಸುತ್ತದ್ದ, ತಿಪಟೂರು ನಗರದ ಗೋವಿನಪುರ ವಾಸಿಯಾದ ಸುಮಾರು 65ವರ್ಷ ವಯಸ್ಸಿನ ಭಾಗ್ಯಮ್ಮ ಎಂಬುವವರಿಗೆ ಅಪಘಾತದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದು, ರಮೇಶ್ ಎಂಬುವವರಿಗೆ ಅಪಘಾತದಲ್ಲಿ ಗಾಯಗಾಳಾಗುರುತ್ತದೆ.ಗಾಯಾಳುಗಳನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.


ಕಾಲು ನೋವಿನಿಂದ ಬಳಲುತ್ತಿದ್ದ ಭಾಗ್ಯಮ್ಮ ನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಚಿಕಿತ್ಸೆ ಮುಗಿಸಿ ವಾಪಾಸ್ ಬರುವಾಗ ವಿರುಪಾಕ್ಷಿಪುರ ಗೇಟ್ ಬಳಿ ಅಪಘಾತ ಸಂಭವಿಸಿದೆ.
ಕಾರುಗಳು ಡಿಕ್ಕಿಯಾದ ರಭಸಕ್ಕೆ ಸ್ವಿಪ್ಟ್ ಡಿಜೇರ್ ಕಾರಿನ ಚಕ್ರ ಹಾಗೂ ಆಕ್ಸೆಲ್ ಕಿತ್ತುಕೊಂಡು ಸುಮಾರು 15 ಮೀಟರ್ ದೂರ ಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಮಾರುತಿ ಬ್ರಿಜಾ ಕಾರು ಸಹ ಸಂಪೂರ್ಣ ಜಖಂಗೊಂಡಿದ್ದು, ಏರ್ ಬ್ಯಾಗ್ ಓಪನ್ ಆದಕಾರಣ ಭಾರೀ ಅಪಾಯ ತಪ್ಪಿದಂತ್ತಾಗಿದ್ದು ಹಿಂಬದಿಯಲ್ಲಿ ಕುಳಿತ್ತಿದ್ದ ಭಾಗ್ಯಮ್ಮ ಎಂಬುವವರಿಗೆ ತೀವ್ರಗಾಯಗಳಾಗಿ ಅಸ್ಪಸ್ಥಗೊಂಡಿರುತ್ತಾರೆ
ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿರುತ್ತಾರೆ.

ವರದಿ: ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!