ತಿಪಟೂರು:ಬೆಳಂ ಬೆಳಗ್ಗೆ ವಯೋವೃದ್ದನೋರ್ವ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬೆಳಗ್ಗೆ ಪುಶ್ ಬಲ್ ಪ್ಯಾಸೆಂಜರ್ ರೈಲಿಗೆ ಅಪರೀಚಿತ ವ್ಯಕ್ತಿ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರ ಗುರುತು ಪತ್ತೆಯಾಗಿಲ್ಲ. ಸರಿ ಸುಮಾರು 80ವರ್ಷ ಮೆಲ್ಪಟ್ಟು ವಯಸ್ಸಾಗಿದ್ದು. ಬಿಳಿ ಪಂಚೆ.ಶರ್ಟ್ ಧರಿಸಿದ್ದು. ಬಿಳಿ ಕುರುಚಲು ಗಡ್ಡ.ಬಿಳಿ ಮುಖಚರ್ಯೆ ಹೊಂದಿದ್ದು. ಮೃತ ವಿಳಾಸ ಪತ್ತೆಯಲ್ಲಿ ಪೊಲೀಸರು ತೊಡಗಿದ್ದಾರೆ. ಸ್ಥಳಕ್ಕೆ ಅರಸೀಕೆರೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ :ಮಂಜುನಾಥ್ ಹಾಲ್ಕುರಿಕೆ






