ಜಾತಿಗಣತಿ ವರದಿಯನ್ನ ಸರ್ಕಾರ ಸ್ವೀಕಾರ ಮಾಡಿದ್ದು, ವರದಿಯ ಅಂಕಿ ಅಂಶಗಳು ಸಾಧಕ ಬಾದಕಗಳನ್ನ ಪರಿಶೀಲನೆ ಮಾಡಿ ಮುಂದಿನ ಸದನದಲ್ಲಿ ಚರ್ಚೆ ಮಾಡಲಾಗುವುದು:ಗೃಹ ಸಚಿವ ಡಾ//ಜಿ ಪರಮೇಶ್ವರ್.

Spread the love

ರಾಜ್ಯಸರ್ಕಾರ ಕಾಂತರಾಜು ರವರು ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ ಅವಧಿಯಲ್ಲಿ ಗಣತಿ ಮಾಡಿರುವ ಜಾತಿಗಣತಿ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದು,ಸರ್ಕಾರ ವರದಿ ಸ್ವೀಕಾರ ಮಾಡಿದೆ, ನಮ್ಮ ಸರ್ಕಾರದ ಎಲ್ಲಾ ಸಚಿವರುವ ಒಂದೊಂದು ಪ್ರತಿ ನೀಡಿದ್ದೇವೆ,

ವರದಿಯಲ್ಲಿ ಇರುವಂತಹ ಅಂಶಗಳನ್ನ ಓದಿ,ಪರಿಶೀಲನೆ ಮಾಡಿ ನಂತರ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗುವುದು,ಎಂದು ಗೃಹ ಸಚಿವ ಡಾ//ಜಿ ಪರಮೇಶ್ವರ್ ತಿಳಿಸಿದರು
ತಿಪಟೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಾತಿಗಣತಿ ವರದಿಯನ್ನ ಆಯೋಗದಿಂದ ಪಡೆಯಲಾಗಿದೆ ವರದಿಯನ್ನ ಸಂಪೂರ್ಣವಾಗಿ ಓದಿಸಂಪುಟ ಸಭೆಯಲ್ಲಿ ಕೂಲಂಕುಷವಾಗಿ ಚರ್ಚೆ ಮಾಡಿ,ನಂತರ ವರದಿ ಅನುಷ್ಠಾನದ ಬಗ್ಗೆ ಚರ್ಚೆ ಮಾಡಲಾಗುವುದು, ಸವಲತ್ತುಗಳಿಂದನಿ ವಂಚಿತರಾದ ಜಾತಿಗಳಿಗೆ ಮೀಸಲಾತಿ ಸೌಲಭ್ಯ ನೀಡಲು ಜಾತಿಗಣತಿ ಅಗತ್ಯವಿದೆ, ನಮ್ಮ ಹಿಂದೆನ ಸರ್ಕಾರ ಜಾತಿಗಣತಿ ಮಾಡಿಸಿ 10ವರ್ಷ ಕಳೆಯುತ್ತಿದ್ದು,ಅನಾಗತ್ಯ ಕಾರಣ ನೀಡಿ,ವರದಿ ಸ್ವೀಕಾರ ಮಾಡದಿದ್ದರೇ ಹೇಗೆ, ವರದಿಯನ್ನ ಪಡೆದು, ಗಣತಿವೇಳೆ ಸಂಗ್ರಹ ಮಾಡಿರುವ ಅಂಶಗಳ ಬಗ್ಗೆ ಚರ್ಚೆ ಮಾಡೋಣ,ವರದಿ ನೋಡದೆ ಮಾತಾಡುವುದು ಸರಿಯಲ್ಲಿ, ಕಳೆದ ಸರ್ಕಾರದ ಅವದಿಯಲ್ಲಿ ಜಾತಿಗಣತಿ ಮಾಡುವಾಗ ಪ್ರತಿಮನೆಗೆ ಭೇಟಿ ನೀಡಿ ಅಂಕಿಅಂಶ ಕಲೆಹಾಕಲಾಗಿದೆ,ಒಂದು ವೇಳೆ ಯಾರಾದರೂ ಗಣತಿಯಲ್ಲಿ ಕೈಬಿಟ್ಟಿದರೇ ನಂತರ ನೋಡೋಣ,ಮೆಲ್ನೋಟಕ್ಕೆ ವರದಿಯಲ್ಲಿನ ಸುಮಾರು 80ರಷ್ಟು ಮಾಹಿತಿ ಸರಿಯಾಗಿದೆ ಎನಿಸುತ್ತಿದೆ,ವರದಿ ಪರಾಮರ್ಷೆ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!