ಗೋರಕ್ಷಕ ಪುನೀತ್ ಕೆರೆಹಳ್ಳಿ ಗೆ ತಿಪಟೂರಿ ಪ್ರವೇಶಿಸದಂತೆ ಬಂಧನ ವಾಪಾಸ್ ಕಳಿಸಿದ ಪೊಲೀಸರು.
ತಿಪಟೂರು: ಮಾರ್ಚ್ 21ರಂದು ರಂಜಾನ್ ಹಬ್ಬದ ದಿನ ಅಕ್ರಮವಾಗಿ ಖಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ವೇಳೆ ಅನ್ಯಕೋಮಿನ ಗುಂಪೊಂದು ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಇದಲ್ಲದೆ, ಮಾವಿನ ತೋಪಿನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ಭಾರತೀಯ ಜನತಾ ಪಕ್ಷ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತಿಪಟೂರು ಬಂದ್ಗೆ ಕರೆ ನೀಡಲಾಗಿದೆ.

ಬಂದ್ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಶೋಕ್ ಅವರ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಭದ್ರತೆಗಾಗಿ 1 ಅಡಿಷನಲ್ ಎಸ್ಪಿ, 2 ಡಿವೈಎಸ್ಪಿ, 3 ಸರ್ಕಲ್ ಇನ್ಸ್ಪೆಕ್ಟರ್, 11 ಸಬ್ ಇನ್ಸ್ಪೆಕ್ಟರ್, 36 ಎಎಸ್ಐ, 44 ಹೆಡ್ ಕಾನ್ಸ್ಟೇಬಲ್ ಸೇರಿ ಒಟ್ಟು 360 ಪೊಲೀಸ್ ಸಿಬ್ಬಂದಿ ಹಾಗೂ 12 ಡಿಆರ್ ಮತ್ತು ಕೆಎಸ್ಆರ್ಪಿ ತುಕ್ಕಡಿಗಳನ್ನು ನಿಯೋಜಿಸಲಾಗಿದೆ. ವಿವಾದಿತ ವ್ಯಕ್ತಿಳು ತಿಪಟೂರಿಗೆ ಪ್ರವೇಶಮಾಡಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದ್ದು.

ಹಿಂದೂ ಗೋರಕ್ಷಕ ಪುನೀತ್ ಕೆರೆಹಳ್ಳಿ ತಿಪಟೂರಿಗೆ ಆಗಮಿಸಲು ಯತ್ನಿಸಿದ್ದು.ಖಚಿತ ಮಾಹಿತಿ ಪಡೆದ ಪೊಲೀಸರು ತಾಲ್ಲೋಕಿನ ಗಡಿಯಲ್ಲಿ ಬಂಧನ ಮಾಡಿ ವಾಪಾಸ್ ಕಳಿಸಿದ್ದಾರೆ ಎನ್ನಲಾಗಿದೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ವರದಿ :ಮಂಜುನಾಥ್ ಹಾಲ್ಕುರಿಕೆ





