ತಿಪಟೂರು: ನಗರದ ಬಿ.ಹೆಚ್. ರಸ್ತೆಯ ಎಸ್.ಬಿ.ಐ ಬ್ಯಾಂಕ್ ಹಿಂಭಾಗದಲ್ಲಿರುವ ಕಲ್ಪತರು ಮಕ್ಕಳ ಸೇವಾಶ್ರಮದ ವಿದ್ಯಾರ್ಥಿಗಳಿಗೆ, ತಿಪಟೂರಿನ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರಾಗಿ ಕಾರ್ಯ ನಿರ್ವಹಿಸುತ್ತಿದ್ದ ದಿ.ಕೆ.ಎಲ್.ಪರಮೇಶ್ವರಯ್ಯನವರ ಸ್ಮರಣಾರ್ಥವಾಗಿ, ಇಂದು ಅಂದರೆ ದಿನಾಂಕ:31/01/2026 ಶನಿವಾರ ಮಧ್ಯಾಹ್ನ 2 ಗಂಟೆಗೆ ತಾ.ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಉಚಿತ ಶಾಲಾ ಬ್ಯಾಗ್, ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಕೆ. ಷಡಕ್ಷರಿ ನೆರೆವೇರಿಸಲಿದ್ದು, ತಹಶೀಲ್ದಾರ್ ಮೋಹನ್ ಕುಮಾರ್, ತಾಪಂ ಇಒ ಸುದರ್ಶನ್, ಕೆಪಿಸಿಸಿ ಸದಸ್ಯ ವಿ. ಯೋಗೇಶ್,ವೈದ್ಯ ಡಾ.ಶ್ರೀಧರ್ ಉದ್ಯಮಿ ಶಿವಪ್ರಸಾದ್, ಮಂಜುಳಾ ಪರಮೇಶ್, ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ, ಕೆಯುಡಬ್ಲ್ಯೂ ಜೆ ರಾಜ್ಯ ಸಮಿತಿ ಸದಸ್ಯ ಪುರುಷೋತ್ತಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಮ್, ಉಜ್ಜಜ್ಜಿ ರಾಜಣ್ಣ,ಭಾನು ಪ್ರಶಾಂತ್, ಜಯನುಡಿ ಜಯಣ್ಣ, ಪರಮೇಶ್, ಹರೀಶ್ ಆಚಾರ್ಯ, ರಂಗಧಾಮಯ್ಯ, ಜಯಣ್ಣ, ಮಾರುತಿ, ಮುಖಂಡರಾದ ಬಸವರಾಜು ಮತ್ತು ಬಜಗೂರು ಮಂಜುನಾಥ್ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಆಯೋಜಕ ಮತ್ತು ಸಂಘಟನೆಯ ಅಧ್ಯಕ್ಷ ಬಿ.ಟಿ.ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ





