ಅಜ್ಜಿಯ ಮನೆಯಲ್ಲಿ ರಜೆದಿನ ಕಳೆಯಲು ಬಂದಿದ್ದ ಬಾಲಕಿ ಕೆರೆ ಬಿದ್ದು ಸಾವು.

Spread the love

ತಿಪಟೂರು:ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಗ್ರಾಮದಲ್ಲಿರುವ ಅಜ್ಜಿಯ ಮನೆಗೆ ರಜೆದಿನ ಕಳೆಯಲು ಬಂದಿದ್ದ ಬಾಲಕಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.8ನೇ ತರಗತಿ ವಿದ್ಯಾರ್ಥಿನಿ
11 ವರ್ಷದ ಬಾಲಕಿ ಹೇಮಾಶ್ರೀ ಮೃತ ದುರ್ದೈವಿ

ಮೂಲತಃ ಅರಸಿಕೆರೆ ತಾಲ್ಲೂಕಿನ ಸೊಪ್ಪಿನಹಳ್ಳಿ ಗ್ರಾಮದ ಮೃತ ಬಾಲಕಿ ಹೇಮಶ್ರೀ ಬೇಸಿಗೆ ರಜಾ ದಿನಗಳನ್ನು ಕಳೆಯಲು ತನ್ನ ಅಜ್ಜಿಯ ಮನೆಯ ಸಾರ್ಥವಳ್ಳಿ ಗ್ರಾಮಕ್ಕೆ ಬಂದಿದ್ದಳು,ಮನೆಯಿಂದ ಸೈಕಲ್ ನಲ್ಲಿ ಹೊರಹೋದ ಬಾಲಕಿ ಮನೆಗೆ ಬಾರದೆ ಇರುವುದರಿಂದ ಪೋಷಕರು ಹುಡುಕಾಡಿದ್ದಾಗ ಕೆರೆಬಳಿ ಬಾಲಕಿಯ ಚಪ್ಪಲಿ ಹಾಗೂ ಸೈಕಲ್ ದೊರೆತ್ತಿದ್ದು,ಕೆರೆಯಲ್ಲಿ ಪರಿಶೀಲನೆ ನಡೆಸಿದ್ದಾಗ ಬಾಲಕಿ ನೀರಿನಲ್ಲಿ ಮುಳುಗಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ತಿಪಟೂರು ಗ್ರಾಮಾಂತರ ವೃತ ನಿರೀಕ್ಷಕ ಚಂದ್ರಶೇಖರ್.ಟಿ.ಕೆ. ಹೊನ್ನವಳ್ಳಿ ಸಬ್ ಇನ್ಸ್ಪೆಕ್ಟರ್ ರಾಜೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!