ತಿಪಟೂರು ಪೊಲೀಸ್ ಉಪಾಧೀಕ್ಷಕರ ವಿರುದ್ದ ಭೀಮ್ ಆರ್ಮಿ ಪ್ರತಿಭಟನೆ,ದಲಿತ ಮಹಿಳೆಗೆ ನ್ಯಾಯದೊರಕಿಸಲು ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ದೂರು

Spread the love

ತಿಪಟೂರು ನಗರದ ದೊಡ್ಡಯ್ಯನಪಾಳ್ಯ ಗ್ರಾಮದ ದಲಿತ ಮಹಿಳೆ ಮೇಲೆ ದೌರ್ಜನ್ಯವಾಗಿದ್ದು ನೊಂದವರ ಪರ ಕೆಲಸ ಮಾಡಬೇಕಾದ ಪೊಲೀಸ್ ಇಲಾಖೆ ದೌರ್ಜನ್ಯ ನಡೆಸಿದ ವ್ಯಕ್ತಿಗಳ ಪರ ಶಾಮಿಲಾಗಿ ದಲಿತ ಮಹಿಳೆಗೆ ಅನ್ಯಾಯ ಮಾಡಲಾಗಿದೆ, ತಿಪಟೂರು ಪೊಲೀಸ್ ಉಪ ಅಧೀಕ್ಷಕರು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಸಮ್ಮತ ತನಿಖೆ ನಡೆಸಿಲ್ಲ. ಪ್ರಕರಣದ ಮರುತನಿಖೆ ನಡೆಸಬೇಕು, ನೊಂದ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಭೀಮ್ ಆರ್ಮಿಯಿಂದ ತಿಪಟೂರು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರು ಹಾಗೂ ಗೃಹಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನಾ ನಿರತರನ್ನ ಉದೇಶಿಸಿ ಕರ್ನಾಟಕ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಮತೀನ್ ಕುಮಾರ್ ಮಾತನಾಡಿ ತಿಪಟೂರು ನಗರದ ದೊಡ್ಡಯ್ಯನಪಾಳ್ಯ ಗ್ರಾಮದ ಮಂಜುಳಮ್ಮ ಕೋಂ ಬಸವರಾಜು ಎಂಬುವವರಿಂದ ಹಣಕಾಸಿನ ಸಹಾಯಪಡೆದ ಅದೇ ಗ್ರಾಮದ ರಾಜೇಶ್ ಬಿನ್ ಜಯರಾಮಯ್ಯ ಎಂಬುವವರು ದಲಿತ ಮಹಿಳೆ ಮಂಜುಳಮ್ಮನ ಮೇಲೆ ಜಾತಿದೌರ್ಜನ್ಯ ನಡೆಸಿ,ಕೊಲೆ ಬೆದರಿಕೆ ಹಾಕಿದರು,ನೊಂದ ಮಹಿಳೆ ತಿಪಟೂರು ನಗರಪೊಲೀಸ್ ಠಾಣೆಗೆ ದೂರು ನೀಡಿದರೆ, ಪ್ರಕರಣದ ತನಿಖೆನಡೆಸಿ ಪ್ರಕರಣ ದಾಖಲಿಸದೇ,ದೌರ್ಜನ್ಯ ನಡೆಸಿದ ರಾಜೇಶ್ ಪರವಾಗಿ ವಕಾಲತ್ತು ವಹಿಸಿದ ಪೊಲೀಸರು, ಪ್ರಕರಣ ದಾಖಲಿಸದೆ, ವಾಪಾಸ್ ಕಳಿಸಿದರು.ದೌರ್ಜನ್ಯದಿಂದ ನೊಂದಮಹಿಳೆ ತುಮಕೂರು ಜಿಲ್ಲಾಪೊಲೀಸ್ ವರೀಷ್ಠಾಧಿಕಾರಿಗಳಿಗೆ ದೂರು ನೀಡಿ ಎಸ್ಪಿ ಯವರ ಸೂಚನೆ ಮೇರೆಗೆ ಅಟ್ರಾಸಿಟಿ ಕೇಸ್ ದಾಖಲಿಸಲಾಗಿತ್ತು, ಆದರೆ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ತಿಪಟೂರು ಪೊಲೀಸ್ ಉಪ ಅಧೀಕ್ಷಕರು ,ದಲಿತರ ಮೇಲೆ ದೌರ್ಜನ್ಯ ನಡೆಸಿದ ರಾಜೇಶ್ ಪ್ರಭಾವಕ್ಕೆ ಒಳಗಾಗಿ ಪರಿಶಿಷ್ಠ ದೌರ್ಜನ್ಯ ಪ್ರಕರಣ ನ್ಯಾಯಸಮ್ಮತವಾಗಿ ನಡೆಸದೆ ಅನ್ಯಾಯ ಮಾಡಿದ್ದಾರೆ,ಪ್ರಕರಣದ ಸಾಕ್ಷಿಗಳನ್ನ ಬೆದರಿಸಿ ತಮ್ಮ ಇಚ್ಚೆಯಂತೆ ಹೇಳಿಕೆ ಪಡೆದಿದ್ದಾರೆ, ತಿಪಟೂರು ಡಿವೈಎಸ್ಪಿ ಹಾಗೂ ಅವರ ಕಚೇರಿ ಸಿಬ್ಬಂದಿ ದಲಿತ ವಿರೋಧಿಗಳಾಗಿ ವರ್ತಿಸುತ್ತಿದ್ದು,ಇವರಿಂದ ದಲಿತರು ನ್ಯಾಯ ನಿರೀಕ್ಷೆ ಮಾಡುವುದು,ಕಷ್ಟವಾಗಿದ್ದು, ಡಿವೈಎಸ್ಪಿ ಯವರು ಸಲ್ಲಿಸಿರುವ ದೋಷಾರೋಪಪಟ್ಟಿ ರದ್ದುಗೊಳ್ಳಿ ಬೇರೆ ಅಧಿಕಾರಿಗಳಿಂದ ಪ್ರಕರಣದ ಮರುತನಿಖೆ ನಡೆಸಬೇಕು, ನೊಂದ ದಲಿತ ಮಹಿಳೆ ಮಂಜುಳಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಹಾಗೂ ನ್ಯಾಯದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಕರ್ನಾಟಕ ಭೀಮ್ ಆರ್ಮಿ,ಮುಖಂಡರಾದ ಪ್ರದೀಪ್,ಕಾನೂನು ಸಲಹೆಗಾರ ರಾಜೀವ್ ಶಾಂಬು,ದರ್ಶನ್ ಪಂಡಿತ್ ಸಿಂಹ, ಭೀಮ್ ಆರ್ಮಿ ಯುವ ಮುಖಂಡ ಮೋಹನ್ ಬಾಬು,ಹರೀಶ್ ಯಗಚೀಕಟ್ಟೆ .ನಾಗ್ತೀಹಳ್ಳಿ ಶಶಿಕುಮಾರ್ .ಕವಿತ ,ಮಂಜುಳ, ಬಸವರಾಜು,ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!