Spread the love

ತಿಪಟೂರು: ತಿಪಟೂರು ವಕೀಲರ ಸಂಘದ 2026-2027ನೇ ಸಾಲಿನ ಕಾರ್ಯಕಾರಿ ಮಂಡಳಿ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಸ್. ಜಯಣ್ಣ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಎಸ್. ಜಯಣ್ಣ ಹಾಗೂ ನವೀನ್ ಕುಮಾರ್ ಉಮೇದುವಾರಿಕೆ ಸಲ್ಲಿಸಿದ್ದು, ಎಸ್. ಜಯಣ್ಣ 63 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಕುಮಾರ್ ಎಲ್. ಹಾಗೂ ಫೌಜಿಯಾ ಖಾನಂ ಉಮೇದುವಾರಿಕೆ ಸಲ್ಲಿಸಿದ್ದು, ಪ್ರಸನ್ನ ಕುಮಾರ್ ಎಲ್. 83 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಕಾರ್ಯದರ್ಶಿಯಾಗಿ ಬಿ. ಮಲ್ಲಿಕಾರ್ಜುನಯ್ಯ, ಜಂಟಿ ಕಾರ್ಯದರ್ಶಿಯಾಗಿ ಎಸ್.ಎನ್. ರವಿ ಹಾಗೂ ಖಜಾಂಚಿಯಾಗಿ ಶ್ರೀಮತಿ ಪಿ. ಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದು


ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕೆ.ಆರ್. ಉಮೇಶ್, ಜಿ.ಆರ್. ಶ್ರೀನಿವಾಸ್, ಎನ್.ಸಿ. ಅಶೋಕ್, ಶ್ರೀಮತಿ ಉಮಾದೇವಿ ಕೆ., ಶ್ರೀಮತಿ ಮಮತ ಕೆ.ಎಸ್. ಹಾಗೂ ತಿಪಟೂರು ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಬಸವರಾಜು ಟಿ. ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳನ್ನು ವಕೀಲರು ಹಾಗೂ ಅನೇಕ ಮುಖಂಡರು ಅಭಿನಂದಿಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!