Spread the love

ಶ್ರೀಮಠದ ಶ್ರೀಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಲಿರುವ ಜಾತ್ರೆ.

.ತಿಪಟೂರು: ನಾಡಿನ ಧಾರ್ಮಿಕ ಪವಾಡ ಕ್ಷೇತ್ರ ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಈ ವರ್ಷದ 233ನೇ ಅಜ್ಜಯ್ಯನ ಜಾತ್ರಾ ಮಹೋತ್ಸವ ಹಾಗೂ ಕರಿಬಸವ ದೇಶಿ ಕೇಂದ್ರ ಮಹಾಸ್ವಾಮಿಗಳ 18ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ ದಿನಾಂಕ 11.12.13ರವರೆಗೆ ಮಠದ ಆವರಣದಲ್ಲಿ ಅದ್ದೂರಿಯಾಗಿ ನಡೆಯಲಿದೆ, ಎಂದು ಶ್ರೀ ಕಾಡಸಿದ್ದೇಶ್ವರ ಮಠದ ವ್ಯವಸ್ಥಾಪಕ ಶಂಭೂಜಿ ಮಠ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


11ನೇ ತಾರೀಖು ಬುಧವಾರ ಬೆಳಿಗ್ಗೆ 8ಗಂಟೆಗೆ ಷಟ್ ಸ್ಥಲ ಧ್ವಜಾರೋಹಣ ನಡೆಯಲಿದ್ದು ದಿವ್ಯ ಸಾನಿಧ್ಯವನ್ನು ಹಿರಿಯ ಶ್ರೀಗಳಾದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು ಧ್ವಜಾರೋಹಣವನ್ನು ಗೋಸಲ ಶ್ರೀ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ತೆವಡಿಹಳ್ಳಿ ನೆರವೇರಿಸಲಿದ್ದಾರೆ, ದಿವ್ಯಸಾನಿದ್ಯವನ್ನು ದೊಡ್ಡಮೇಟಿಕುರ್ಕೆ ಬೂದಿಹಾಳ ವಿರಕ್ತಮಠದ ಶಶಿ ಶೇಖರ ಸಿದ್ಧಬಸವ ಸ್ವಾಮೀಜಿ ವಹಿಸಲಿದ್ದಾರೆ, ಬೆಳಿಗ್ಗೆ 11 ಗಂಟೆಗೆ ಅಕ್ಕಮಹಾದೇವಿ ಮಹಿಳಾ ಸಮಾಜದ ಸದಸ್ಯರಿಂದ ಲಲಿತಾ ಸಹಸ್ರನಾಮ 108 ಮುತ್ತೈದೆಯರಿಗೆ ಬಾಗಿನ ಸೇವೆ ನಡೆಯಲಿದ್ದು, ಎಸ್ ಕೆ ಇಂಟರ್ನ್ಯಾಷನಲ್ ಶಾಲೆ ವಿದ್ಯಾರ್ಥಿಗಳಿಂದ ಚಿಣ್ಣರ ಸಂತೆ ನಡೆಯಲಿದೆ ಸಂಜೆ 5ಗಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ವಾರ್ಷಿಕೋತ್ಸವ ನಡೆಯಲಿದ್ದು, ರಾತ್ರಿ 7 ಗಂಟೆಗೆ ಹೂನಲು ಬೆಳಕಿನವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದ ಬುರುಡೆಘಟ್ಟದ ನಾಗರಾಜ ಶಾಸ್ತ್ರಿ ನೇತೃತ್ವದಲ್ಲಿ ನಡೆಯಲಿದ್ದು ಶ್ರೀಗಳ ದಿವ್ಯಸಾನಿಧ್ಯದಲ್ಲಿ ಉದ್ಘಾಟನೆಯನ್ನು ನಿವೃತ್ತ ಪೊಲೀಸ್ ಎಸಿಪಿ ಲೋಕೇಶ್ವರ್ ನಡೆಸಲಿದ್ದಾರೆ 12ನೇ ಗುರುವಾರ ಬೆಳಿಗ್ಗೆ 9ಗಂಟೆಗೆ ಗಜ ಪಡೆಗಳೊಂದಿಗೆ ಶ್ರೀ ಕಾಡಸಿದ್ದೇಶ್ವರ ಸ್ವಾಮಿಯವರ ಅಡ್ಡ ಪಲ್ಲಕ್ಕಿ ಉತ್ಸವ ನೊಣವಿನಕೆರೆ ರಾಜಭೀದಿಗಳಲ್ಲಿ ಸಕಲ ಬಿರುದಾವಳಿಗಳಾದ ವೀರಭದ್ರನ ನೃತ್ಯ ಡೊಳ್ಳು ಕುಣಿತ, ಗೊಂಬೆ, ಜಾನಪದ ಕಲಾತಂಡಗಳೊಂದಿಗೆ ನಡೆಯಲಿದ್ದು ಚಾಲನೆಯನ್ನು ಕಿರಿಯ ಶ್ರೀಗಳಾದ ಶ್ರೀ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ನಿಡಲಿದ್ದಾರೆ ಸಂಜೆ 5ಗಂಟೆಗೆ ಶ್ರೀ ಕಾಡ ಸಿದ್ದೇಶ್ವರ ಸ್ವಾಮಿಗಳ ರಥೋತ್ಸವ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ವಾದ್ಯ ವೈಭವ ಜಾನಪದ ಕಲಾತಂಡಗಳೊಂದಿಗೆ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಲಿದೆ ಸಂಜೆ 6ಗಂಟೆಗೆ ಸಾಂಸ್ಕೃತಿಕ ಸೊಬಗು ಹಬ್ಬ ತಡೆಯಲಿದ್ದು ಕಾರ್ಯಕ್ರಮದಲ್ಲಿ ಸಮಾಜ ಸೇವಕರನ್ನು ಸನ್ಮಾನಿಸಲಾಗುತ್ತದೆ, ಕಾರ್ಯಕ್ರಮಕ್ಕೆ ದಿವ್ಯಸಾನಿದ್ಯವನ್ನು ಡಾ. ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು ಉದ್ಘಾಟನೆಯನ್ನು ಕೆಪೆಕ್ ತೆಂಗು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್ ಉದ್ಘಾಟನೆ ನೆರವೇರಿಸಲಿದ್ದು ಹರ ಗುರು ಚರಮೂರ್ತಿಗಳು ಉಪಸ್ಥಿತರಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ಸಿ. ನಾಗೇಶ್, ಮಾಜಿ ಶಾಸಕ ನಂಜಾಮರಿ, ಪ್ರಭು ಕುಮಾರ್, ಲಕ್ಷ್ಮೀನಾರಾಯಣ್, ಜೆಡಿಎಸ್ ಮುಖಂಡ ಎನ್.ಅರ್, ಸಂತೋಷ್, ಹಾಸನ ವೀರಶೈವ ಮಹಾಸಭಾ ಅಧ್ಯಕ್ಷ ನವಿಲೆ ಪರಮೇಶ್, ಟಿ.ಎನ್ ಷಡಕ್ಷರಿ, ಎನ್, ಎನ್ ಯುವರಾಜ್ ಸಿ.ಎ. ನಿವೃತ್ತ ಐಎಎಸ್ ಅಧಿಕಾರಿ ವಿಶ್ವನಾಥ ರೆಡ್ಡಿ, ಕೆ ಟಿ ಶಾಂತಕುಮಾರ್, ಕೆ ಪಿ ನಂಜುಂಡಿ, ಸುದ್ದಿ ವಾಚಕ ಅಜಿತ್ ಹನುಮಕ್ಕನವರ್, ಕೊಬ್ಬರಿ ವರ್ತಕ ಕೆವಿ ನಿರ್ವಾಣ ಸ್ವಾಮಿ, ಇಂದು ಜಾಗೃತ ಸೇನೆಯ ವಿನಯ ಗೌಡ, ಮೃತ್ಯುಂಜಯ ಸ್ವಾಮಿ ವಹಿಸಲಿದ್ದು, ಸಮಾಜ ಸೇವಕರಾದ ನಾರಾಯಣ ನಾಯಕ್, ವಿಶ್ವಚೇತನ ಅಂಧ ಮಕ್ಕಳ ವಸತಿಶಾಲೆ, ಸಂಸ್ಥಾಪಕಿ ಗಾಯಕಿ ಭೂಮಿಕಾ ಗಡಾದ. ಹಾಗೂ ತಿಪಟೂರಿನ ಕುಮಾರ್ ಆಸ್ಪತ್ರೆ ವೈದ್ಯ ಶ್ರೀಧರ್ ರವರನ್ನು ಸನ್ಮಾನಿಸಲಾಗುವುದು ನಂತರ ದಾಮೋದರ ಶರ್ಮ ರವರಿಂದ ಉಪನ್ಯಾಸ ಕಾರ್ಯಕ್ರಮ ಮತ್ತು ಸಂಗೀತ ಸುದೆ ಕಾರ್ಯಕ್ರಮ ನಡೆಯಲಿದೆ 13ನೇ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶ್ರೀ ಚನ್ನಬಸವ ಮಹಾಸ್ವಾಮಿಗಳು ಕನಕಪುರ ಸಮ್ಮುಖದಲ್ಲಿ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಲಿದ್ದು ದಿವ್ಯ ಸಾನಿಧ್ಯವನ್ನು ಡಾ. ಕರಿವೃಷಭ ದೇಶಿ ಕೇಂದ್ರ ಶಿವಯೋಗಿಶ್ವರ ಸ್ವಾಮಿಗಳು ವಯ್ಸಲಿದ್ದು ಉದ್ಘಾಟನೆಯನ್ನು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ನಡೆಸಲಿದ್ದು ಅಧ್ಯಕ್ಷತೆಯನ್ನು ಶಾಸಕ ಕೆ ಷಡಕ್ಷರಿ, ಪ್ರಾಸ್ತಾವಿಕ ನುಡಿ ಕೇಂದ್ರ ಜಲ ಶಕ್ತಿ ಹಾಗೂ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ನೆರವೆರಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಸಚಿವ ಸಂಪುಟದ ಸಚಿವರು, ಶಾಸಕರು, ಸಮಾಜ ಸೇವಕರು, ಶ್ರೀಮಠದ ಸದ್ಭಕ್ತರು ಆಗಮಿಸಲಿದ್ದಾರೆ. ಎಂದು ತಿಳಿಸಿದರು.

ಶ್ರೀಮಠದ ಐತಿಹಾಸಿಕ ಹಿನ್ನೆಲೆ :

ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಇತಿಹಾಸ 800 ವರ್ಷಗಳ ಹಿಂದೆ ಪುಲಿಗೆರೆ ಲಕ್ಷೇಶ್ವರರ ಶ್ರೀ ಸೋಮನಾಥ ಅನುಗ್ರಹ ಆಶೀರ್ವಾದ ಹೊಂದಿದ ಕಾಡು ಸಿದ್ದೇಶ್ವರರು ನಂದಿಯ ಮೇಲೆ ಸಂಚಾರ ಮಾಡುತ್ತ ತಿಪಟೂರು ತಾಲೂಕು ನೊಣವಿನಕೆರೆಯ ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ನೆಲೆಸಿ ಪೂಜೆ ಅನುಷ್ಠಾನ ಮಾಡುತ್ತಾ ಗವಿಯನ್ನು ನಿರ್ಮಿಸಿಕೊಂಡು ಶಿವಯೋಗ ಸಂದಾನದಲ್ಲಿರುವಾಗ ಬೇಟೆಗಾಗಿ ಬಂದಿದ್ದ ಅಗಲವಾಡಿ ಪಾಳೇಗಾರರಾದ ಮುದಿಯಪ್ಪ ನಾಯಕನು ಸ್ವಾಮಿಗಳನ್ನು ಮೃಗವೆಂದು ಭಾವಿಸಿ ಬಾಣವರೆದಾಗ ಅವರನ್ನು ಚೇದಿಸಿಕೊಂಡು ಹೋಗಲು ನಾಯಕ ಬಂದು ನೋಡಿ ವ್ಯಥೆಪಟ್ಟು ಶ್ರೀಗಳ ಪಾದಕಮಲಗಳಲ್ಲಿ ಬಿದ್ದು ಗೋಳಾಡಿ ಕ್ಷಮೆ ಬೇಡದನು ಶ್ರೀಗಳನ್ನು ರಾಜಗುರುವಾಗಿ ಸ್ವೀಕರಿಸಿ ಶ್ರೀ ಮಠಕ್ಕೆ ಗಜ ಶ್ವೇತಾಶ್ವ ರಥ ಮೀನನ್ನು ಹಾಗೂ ದಾನದತ್ತಿಗಳನ್ನು ನೀಡಿ ಶ್ರೀಗಳ ಅನುಗ್ರಹ ಪಡೆದನು ತನ್ನ ಧನ್ಯತೆಗಾಗಿ ಶ್ರೀಗಳನ್ನು ಬೇಡಿಕೊಂಡು 20 ಅಂಕದ ಮಠದ ಮುಂಭಾಗದಲ್ಲಿ ಸಣ್ಣ ಗದ್ದುಗೆಯನ್ನು ಕಟ್ಟಿಸಲು ಅರಿಕೆ ಮಾಡಿಕೊಂಡನು ಶ್ರೀಗಳ ಪಡೆಯಂತೆ ಗೊತ್ತಾದ ಒಂದು ದಿನ ರಾತ್ರಿಯಲ್ಲಿ ಕಾದಿರಲು ಮುನಿಗಳು ಸುವರ್ಣ ಪಲ್ಲಕ್ಕಿಯಲ್ಲಿ ಶ್ರೀಗಳನ್ನು ಹೊತ್ತುಕೊಂಡು ಗದ್ದುಗೆ ಬಂದಾಗ ಅಲ್ಲಿ ಕರ್ಪೂರ ಧಗ್ಗನೆ ಹತ್ತಿಕೊಂಡು ಶ್ರೀಗಳು ಅದೃಶ್ಯರಾದರು ಇದೇ ಮಠದ ಕರ್ತೃಗದ್ದುಗೆ ಈಗಲೂ ಸಹ ಇದೆ ಕಾಡಿನಲ್ಲಿ ಶ್ರೀ ಮಠವು ಇದ್ದದರಿಂದ ಕಾಳಸಿದ್ದೇಶ್ವರ ಮಠ ಎಂದು ನಾಮಾಂಕಿತವಾಗಿದೆ, ಹಿರಿಯ ಶ್ರೀಗಳು ಬಿಜಾಪುರ ಜಿಲ್ಲೆ ಇಂಡಿ ತಾಲೂಕು ಸಾಲೋಟಗಿ ಗ್ರಾಮದ ಚರಣೆ ಗುರುಬಸಮ್ಮ ಶರಣ ಬಸವಯ್ಯ ಸಂಸ್ಥಾನ ಮಠ ಇವರ 4ನೇ ಬಹುವಾಗಿ ಜನುಮ ತಾಳಿ ಬಾಲ್ಯಾವಸ್ಥೆಯಲ್ಲಿ ಬಾಳೆಹೊನ್ನೂರು, ಜಗದ್ಗುರು ಶ್ರೀ ವೀರಗಂಗಾಧರ ಶಿವಾಚಾರ್ಯರ ಮಾನಸ ಪುತ್ರರಾಗಿ ಸೇವೆ ಸಲ್ಲಿಸಿ ತರುವಾಯ ದಾವಣಗೆರೆ ಜಿಲ್ಲೆ ಹೊನ್ನಾಳಿ ಹಿರೇಕಲ್ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರ ವಾಣಿಜ್ಯದಲ್ಲಿ ವೇದ ಆಗಮ ಜ್ಯೋತಿಷ್ಯ ಮತ್ತು ಸಂಸ್ಕೃತ ಪಾಂಡಿತ್ಯವನ್ನು ಪಡೆದು 1985ರಲ್ಲಿ ನೊಣವಿನಕೆರೆ ಶ್ರೀಮಠಕ್ಕೆ ಪೀಠಾಧಿಪತಿಯಾಗಿ ವಹಿಸಿಕೊಳ್ಳುತ್ತಾರೆ, ನಂತರ ನಾಡಿನದ್ಯಂತ ಸಂಚರಿಸಿ ನೂರಾರು ದೇವಾಲಯಗಳನ್ನು ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾಪನೆ ನೆರವೇರಿಸಿ, ತುರುವೇಕೆರೆಯಲ್ಲಿ ಭಕ್ತರ ಆಶಯದಂತೆ 1995ರಲ್ಲಿ ಶ್ರೀ ಶಿವಯೋಗಿಶ್ವರ ವಿರಕ್ತ ಮಂದಿರವನ್ನು ಸ್ಥಾಪಿಸುತ್ತಾರೆ ಶ್ರೀ ಕಾಡು ಸಿದ್ದೇಶ್ವರ ಸ್ವಾಮಿಗೆ ಶಿಲಾ ಮಂಟಪ ನೆರವೇರಿಸಿದ ಕೀರ್ತಿ ಶ್ರೀ ಗಳಿಗೆ ಸಲ್ಲುತ್ತದೆ ನಂತರ ನೂಣವಿನಕೆರೆಯಲ್ಲಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ನೆರೆವೇರಿಸುತ್ತಾರೆ, ಸುತ್ತಮುತ್ತ ಹಾಗೂ ರಾಜ್ಯದಾದ್ಯಂತ ಅಪಾರ ಭಕ್ತ ಸಂಕುಲವನ್ನು ಹೊಂದಿರುವ ಶ್ರೀಮಠಕ್ಕೆ ಲಕ್ಷಾಂತರ ಭಕ್ತಾದಿಗಳು ಬಂದು ಅಕ್ಷತೆ ಆಶೀರ್ವಾದ ಪಡೆಯುವುದು ಈಗಲೂ ವೈಶಿಷ್ಟ್ಯ.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!