Spread the love

ತಿಪಟೂರು : ಆದಿ ಶಂಕರಾಚಾರ್ಯರ ಜಯಂತಿ ಆಂಗವಾಗಿ ನಗರದ ಶ್ರೀ ಶಂಕರ ಮಠದಲ್ಲಿ ಶ್ರೀ ಶಾರದಾಂಬ ಹಾಗೂ ಶ್ರೀ ಚಂದ್ರಮೌಳೇಶ್ಚರ ಹಾಗೂ ಆದಿ ಶಂಕರಾಚಾರ್ಯರಿಗೆ ರುದ್ರಾಭಿಷೇಕ.ವಿಶೇಷ ಪೂಜೆ ಅಲಂಕಾರ ,ಶಂಕರಾಚಾರ್ಯರ ಆಷ್ಟೋತ್ತರ,ನೆರವೇರಿಸಲಾಯಿತು.


ಸಂಜೆ ಶ್ರೀ ಶಂಕರ ಮಠದಿಂದ ಶ್ರೀ ಆದಿಶಂಕರಾಚಾರ್ಯರ ಭಾವಚಿತ್ರವನ್ನ ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು.ಶಾಸಕ ಕೆ.ಷಡಕ್ಷರಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆಸಲ್ಲಿಸಿದರು.
ಬ್ರಹ್ಮಣ ಗೆಳೆಯರ ಬಳಗದ ಆಧ್ಯಕ್ಷರಾದ ಮೋಹನ್ ಹೊಯ್ಸಳ ಕರ್ನಾಟಕ ಬ್ರಹ್ಮಣ ಸಂಘದ ಅಧ್ಯಕ್ಷರಾದ ರವಿಶಾಸ್ತ್ರಿ. ತ್ರಿಮತಸ್ಥ ಬ್ರಹ್ಮಣ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಸೇರಿದಂತೆ ಅನೇಕರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!