ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಘಟಕಿನಕೆರೆ ಜಾತ್ರೆಯಲ್ಲಿ ಪೊಲೀಸ್ ಇಲಾಖೆಯಿಂದ ಜೂಜು ಆಡಿಸಲು ಅನುಮತಿ ಪಡೆದಿದ್ದೇವೆ ಅಂದು ಊರಿನಾಚೆ ತೋಟದಲ್ಲಿ ಇಸ್ಪೀಟ್ ಆಡಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನವಳ್ಳಿ ಪೊಲೀಸರು ದಾಳಿ ನಡೆಸಿದ್ದು, ಪೊಲೀಸರನ್ನ ಕಂಡ ತಕ್ಷಣ ನಮ್ಮ ಊರಿನ ಜಾತ್ರೆ ನಮ್ಮ ಇಷ್ಟವೆಂದು ಗಲಾಟೆ ಮಾಡಿದ್ದು, ಮಪ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಸೇರಿದಂತೆ ಪೊಲೀಸರ ಮೇಲೆ ಗಲಾಟೆ ಮಾಡಿ, ಹಲ್ಲೇ ನಡೆಸಿದ್ದಾರೆ

.ತಕ್ಷಣ ಹೊನ್ನವಳ್ಳಿ ಸಬ್ ಇಸ್ಪೆಕ್ಟರ್ ರಾಜೇಶ್ ಹಾಗೂ ಸಿಬ್ಬಂದಿ ಗಾಯಗೊಂಡ ಸಿಬ್ಬಂದಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ, ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, 13ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.










Leave a Reply