ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಕಲ್ಲಯ್ಯನಪಾಳ್ಯ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 4 ಮನೆಗಳು ಸಂಪೂರ್ಣ ಭಸ್ಮವಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ,

ಕಲ್ಲಯ್ಯನಪಾಳ್ಯ ಗ್ರಾಮದ ಗಂಗಾಧರ ,ಮತ್ತು ಅವರ ತಂಗಿ ರೂಪ,ಗೌರಮ್ಮ ಇವರ ಮನೆಗಳು ಸುಟ್ಟುಹೋಗಿವೆ,ಮನೆಯಲ್ಲಿ ಇಟ್ಟಿದ ಚಿನ್ನಾಭರಣ,ಹಟ್ಟದಲ್ಲಿ ಹಾಕಿದ ಕೊಬ್ಬರಿ ಧವಸ ಧಾನ್ಯ ಸೇರಿ ಲಕ್ಷಾಂತರ ರೂಪಾಯಿ ಬೆಂಕಿಗೆ ಆಹುತಿಯಾಗಿದ್ದು ನಾಲ್ಕು ಕುಟುಂಬಗಳು ಬೀದಿಗೆ ಬಿದ್ದಿವೆ.

ಬದುಕನ್ನೆ ಬೀದಿಗೆ ತಳ್ಳಿದ ಯುಗಾದಿ ಸಂಭ್ರಮ:
ಕಲ್ಲಯ್ಯನಪಾಳ್ಯದ ಗಂಗಾಧರ್ ರವರ ಮನೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಇಡೀ ಕುಟುಂಬ ಒಬಟ್ಟು ಸೇರಿದಂತೆ ಸಿಹಿ ಖ್ಯಾದ್ಯಗಳನ್ನ ಮಾಡಿ ಊಟದ ಸಂಭ್ರಮದಲ್ಲಿ ಇದ್ದರೂ ಅಷ್ಟರಲ್ಲಿ ಅಡುಗೆ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ವಾಸನ ಬರಲು ಆರಂಬಿಸಿದೆ ,ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಮನೆಯಲ್ಲಿಇದ್ದವರೆಲ್ಲ,ಮನೆ ಬಿಟ್ಟು ಹೊರಗೆ ಓಡಿಬಂದಿದ್ದಾರೆ,ಹೊರಗೆ ಬಿಸಿಲಿನ ಧಗೆ ಒಳಗೆ ಗ್ಯಾಸ್ ಆವರಿಸಿ ಬೆಂಕಿ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಮನೆಯನ್ನೆಲ್ಲ ಆವರಿಸಿದ ,ಗ್ರಾಮಸ್ಥರ ನೆರವಿನಿಂದ ಬೆಂಕಿ ನಂದಿಸಲು ಪ್ರಯತ್ನಸಿಸಿದರು ಸಾಧ್ಯವಾಗಿಲ್ಲ ,ಬೆಂಕಿ ಕೆನ್ನಾಲಿಗೆ ಗಂಗಾಧರ್ ಸೋದರಿ ಹಾಗೂ ರೂಪ, ಹಾಗೂ ಪಕ್ಕದ ಮನೆ ಗೌರಮ್ಮನ ಮನೆಗೂ ವ್ಯಾಪಿಸಿದೆ ನೋಡ ನೋಡುವಷ್ಟರಲ್ಲಿ ನಾಲ್ಕು ಮನೆಗಳು ಬೆಂಕಿಗಾಹುತಿಗಾತಿದ್ದು ಇಡೀ ಕುಟುಂಬಗಳು ಬೀದಿಗೆ ಬಿದ್ದಿವೆ ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಭೇಟಿ ನೀಡಿದ್ದು,ತಿಪಟೂರು ಅಗ್ನಿಶಾಮಕ ಠಾಣೆ ಸಿಬ್ಬಂದಿ, ಹಾಗೂ ತುರುವೇಕೆರೆ ಅಗ್ನಿಶಾಮಕ ವಾಹನ ಭೇಟಿ ನೀಡಿದ್ದಾರೆ.
ಕಲ್ಲಯ್ಯನಪಾಳ್ಯ ಗ್ರಾಮದಲ್ಲಿ ಮನೆಗಳಿಗೆ ಬೆಂಕಿಹತ್ತಿಕೊಂಡ ಬಗ್ಗೆ ತಿಪಟೂರು ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ,ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಣ್ಣ ವಾಹನವೇನೊ ಸ್ಥಳಕ್ಕೆ ಹೋಗಿದೆ ಆದರೆ ವಾಹನದಲ್ಲಿ ನೀರಿಲ್ಲ, ಸೂಕ್ತ ಪರಿಕರಗಳಿಲ್ಲದೆ ಸಿಬ್ಬಂದಿ ಅಸಹಾಯಕರಾಗಿ ನಿಲ್ಲ ಬೇಕಾಯಿತು.ಆದರೆ ಗ್ರಾಮಸ್ಥರು ತಾಲ್ಲೋಕು ಆಡಳಿತಕ್ಕೆ ಹಿಡಿಶಾಪಹಾಕುತ್ತಲೇ.ತಮ್ಮ ಮನೆಗಳಲ್ಲಿ ಬಳಕೆಗೆ ಸಂಗ್ರಹಿಸಿದ ನೀರನ್ನೆ ತಂದು, ಬೆಂಕಿನಂದಿಸಲು ಸಹಾಯಮಾಡಿದರು ಅಷ್ಟರಲ್ಲಿ ತುರುವೇಕೆರೆ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದಿದೆ.,ಗ್ರಾಮಸ್ಥರು ಸ್ವಲ್ಪ ಎಚ್ಚರ ತಪ್ಪಿದರೂ ಸುಮಾರು 20ಕ್ಕೂ ಮನೆಗಳಿಗೆ ಬೆಂಕಿತಗುಲುವ ಅಪಾಯವಿತ್ತು ಆದರೆ ಗ್ರಾಮಸ್ಥರ ಮುಂಜಾಗ್ರತೆಯಿಂದ ಅಪಾಯ ತಪ್ಪಿದೆ, ಜಿಲ್ಲಾ ಕೇಂದ್ರವಾಗ ಬೇಕಾದ ತಿಪಟೂರಿನಲ್ಲಿ ಸೂಕ್ತ ಅಗ್ನಿಶಾಮಕವಾಹವನಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


