ತಿಪಟೂರು ಕೊಬ್ಬರಿ ಮಾರುಕಟ್ಟೆ ದರೋಡೆ ಪ್ರಕರಣ ಭೇದಿಸಿದ ತಿಪಟೂರು ಪೊಲೀಸರು .ಕುಖ್ಯಾತ ಕಳ್ಳರ ಬಂಧನ.

Spread the love

ತಿಪಟೂರು ನಗರಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳ ಗೂಡ್ಸ್ ವಾಹನ, ಆಟೋ ರೀಕ್ಷಾ ವಾಹನ, ಕೊಬ್ಬರಿ, ಗುಜರಿ ವಸ್ತುಗಳು,ತೆಂಗಿನಕಾಯಿ ಮತ್ತು ಪಡಿತರ ಅಕ್ಕಿಯ ಕಳ್ಳತನ ಮಾಡಿದ ಕುಖ್ಯಾತ ಕಳ್ಳರ ಬಂಧನ ಮಾಡುವಲ್ಲಿ ತಿಪಟೂರು ಪೊಲೀಸರು ಯಶಸ್ವಿಯಾಗಿದ್ದಾರೆ.


05:27.01.2025 ರಂದು ರಾತ್ರಿ ತಿಪಟೂರುಟೌನಿನ ಪ್ರತಿಷ್ಟಿತ ಕೃಷಿ ಉತ್ಪನ್ನ ಕೊಬ್ಬರಿ
ಮಾರುಕಟ್ಟೆಯಲ್ಲಿರುವ ಶ್ರೀಗಂಗಾ ಟೇಡರ್ಸ್‌ ಕೊಬ್ಬರಿ ಅಂಗಡಿಯ ಬಾಗಿಲು ಮುರಿದು ಕೊಬ್ಬರಿ ತುಂಬಿರುವ,ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಅಂಗಡಿಯ ಮಾಲೀಕರಾದ ಲಕ್ಷಣ ತಂದೆ ನಾಗರಾಜು,ವಿದ್ಯಾನಗರ, ತಿಪಟೂರುಟೌನ್ ರವರು ನೀಡಿದ ದೂರಿನ ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣಾ ಮೊಕದ್ದಮೆ
ಸಂಖ್ಯೆ 19/2025 ಕಲಂ 331(4), 305 BNS ರೀತ್ಯ ಪ್ರಕರಣ ದಾಖಲಿಸಿರುತ್ತೆ.
ಮೇಲ್ಕಂಡ ಪ್ರಕರಣವನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಅಶೋಕ್ ಕೆ.ವಿ.
ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ವಿ.ಮರಿಯಪ್ಪ ಹಾಗೂಬಿ.ಎಸ್.ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ವಿನಾಯಕ ಶೆಟಗೇರಿ ರವರ ಮಾರ್ಗಸೂಚನೆ ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣೆಯ ವೆಂಕಟೇಶ್ ಸಿ,ಪೊಲೀಸ್ ಇನ್ಸ್‌ಪೆಕ್ಟರ್, ಡಿ.ಕೃಷ್ಣಪ್ಪ, ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದಚಿಕ್ಕಲಕ್ಕೇಗೌಡ ಎನ್.ಡಿ & ಉಸ್ಮಾನ್ ಸಾಬ್ ಮತ್ತು ಸಿಬ್ಬಂದಿಯವರಾದ ಮೋಹನ್ ಕುಮಾರ್ ಜಿ.ಎಂ,ಲೋಕೇಶ್ ಜಿ.ಆರ್, ಕಿರಣ್ ಕುಮಾರ್ ಎ.ಪಿ, ಯತೀಶ್ ಕುಮಾರ್ ಕೆ.ಎಸ್, ಕಿರಣ್ ಕುಮಾರ್ ಎನ್.ಬಿ, ಸಾಗರ್
ಅಂಬಿಗೇರ್, ಮಂಜುನಾಥ ಎಂ ಕುಪ್ಪಾಡ, ಚಾಲಕರಾದ ಮನೋಜ್ ರವರು ಹಾಗೂ ವೈರ್‌ಲೆಸ್ ಪೊಲೀಸ್ಇನ್ಸ್‌ಪೆಕ್ಟರ್ ರಮೇಶ್ ಮತ್ತು ಜಿಲ್ಲಾಪೊಲೀಸ್ ಕಛೇರಿಯ ನರಸಿಂಹರಾಜು ಹಾಗೂ ಜಗದೀಶ್‌ರವರುಗಳುಕಾರ್ಯಾಚರಣೆ ಮಾಡಿ ದಿನಾಂಕ 09.03.2025 ರಂದು
ಆರೋಪಿಗಳಾದ 1) ಸದ್ದಾಂ ಹುಸೇನ್ @ ಜೀಶಾನ್ ಬಿನ್ ರಫೀಕ್ ಅಹಮದ್, 24 ವರ್ಷ, ಲಾರಿಡೈವರ್ ಕೆಲಸ, ವಾಸ: ಸ್ಲಂಬೋರ್ಡ್, ಹಾಲಹಳ್ಳಿ, ಮಂಡ್ಯ ಟೌನ್ ಸ್ವಂತ ಊರು: ದೊಡ್ಡಕವಲಂದೆ, ಕವಲಂದೆ ಹೋಬಳಿ,ನಂಜನಗೂಡು ತಾ, ಮೈಸೂರು ಜಿಲ್ಲೆ.
2) ರಾಹೀಲ್ ಬಿನ್ ಅಜೀಜ್ ಪಾಷ, 22 ವರ್ಷ, ಗಾರೆ ಕೆಲಸ, ವಾಸ: 2 ನೇ ಮೈನ್, 16 ನೇ ಕ್ರಾಸ್,
ಚರ್ಚ ಹತ್ತಿರ, ಬಿ.ಎಂ.ಶ್ರೀ ನಗರ, ಮೈಸೂರು ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಇವರುಗಳನ್ನುಬಂಧಿಸಿರುತ್ತದೆ.

ಇವರಿಂದ ದಿನಾಂಕ:09.03.2025 ರಂದು ಆರೋಪಿಗಳಿಂದ ಮೇಲ್ಕಂಡ ಪ್ರಕರಣದಲ್ಲಿ 38 ಚೀಲಗಳಷ್ಟುಕೊಬ್ಬರಿಯನ್ನು ಮತ್ತು ಹಾಸನ ಜಿಲ್ಲೆ ಗೋರೂರು ಪೊಲೀಸ್ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಕೆಎ-35 ಬಿ-4095 ನೇ ಆಶೋಕ ಲೈಲ್ಯಾಂಡ್ ವಾಹನವನ್ನು ಮತ್ತು ಕಳ್ಳತನ ಮಾಡಲು ಬಳಸಿದ್ದ ಕಬ್ಬಿಣದ ರಾಡು, ಹಗ್ಗ,ಟರ್ಪಾಲ್,ಚಾಕನ್ನು ವಶಕ್ಕೆ ಪಡೆದು ನಂತರ ತಿಪಟೂರು ನಗರ ಬಂಡಿಹಳ್ಳಿ ಗೇಟ್ ನ ಮಸೂದ್ ಇಂಜಿನಿಯರಿಂಗ್ ವರ್ಕ ನಲ್ಲಿ
ಕಳ್ಳತನ ಮಾಡಿದ ಗುಜರಿ ಮಾಲುಗಳನ್ನು ಮಾರಾಟ ಮಾಡಿ ಪಡೆದ 1 ಲಕ್ಷ ರೂ ಹಣ ವಶಕ್ಕೆ ಪಡೆದುಕೊಂಡಿದ್ದು,ಇದರೊಂದಿಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕ್ ಬೆಳ್ಳೂರು ಪೊಲೀಸ್ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದಕೆಎ-02 ಎ.ಎ-2750 ನೇ ಆಟೋ ರೀಕ್ಷಾ ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತದೆ. ಇದಲ್ಲದೇ ಮೈಸೂರು ಜಿಲ್ಲೆ ಕೆ.ಆರ್. ನಗರ ಪೊಲೀಸ್‌ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಗೂಡ್ಸ್ ವಾಹನ ಮತ್ತು ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸ್ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುತ್ತದೆ.
ಹಾಗೂ ರಾಜ್ಯ ವಿವಿಧ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸರ್ಕಾರಿ ಗೋದಾಮುಗಳಲ್ಲಿ ಪಡಿತರ ಆಹಾರ ಧಾನ್ಯವಾದಅಕ್ಕಿಯನ್ನು ಮತ್ತು ತುಮಕೂರು ಜಿಲ್ಲೆ ತುರುವೇರೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ತೆಂಗಿನಕಾಯಿ ಕಳ್ಳತನ ಮಾಡಿರುತ್ತಾರೆ
ಈ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಠಾಣೆಗಳಿಗೆ ಮಾಹಿತಿ ನೀಡಿರುತ್ತದೆ.
ಮೇಲ್ಕಂಡ ಆರೋಪಿಗಳಿಂದ ಕಳ್ಳತನ ಮಾಡಿದ್ದ ಸುಮಾರು 10ಲಕ್ಷ ರೂ ಮೌಲ್ಯದ ಕೊಬ್ಬರಿ, ಗೂಡ್ಸ್ ವಾಹನ,ಆಟೋರೀಕ್ಷಾ ವಾಹನ, 1ಲಕ್ಷ ರೂ ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡು, ಹಗ್ಗ, ಟಾರ್ಪಲ್, ಚಾಕುಗಳನ್ನು ಅಮಾನತ್ತು ಪಡಿಸಿಕೊಂಡು ಘನ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ, ಆರೋಪಿಗಳು ನ್ಯಾಯಾಂಗಬಂಧನದಲ್ಲಿರುತ್ತಾರೆ. ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಮಾನ್ಯ ತುಮಕೂರು ಜಿಲ್ಲಾಪೊಲೀಸ್‌ ಅಧೀಕ್ಷಕರಾದ ಅಶೋಕ್ ಕೆ.ಎ, ಐ.ಪಿ.ಎಸ್ ರವರು ಪ್ರಶಂಶಿಸಿರುತ್ತಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!