ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಗೆ ಒಳಪಡುವ ತಾಲ್ಲೂಕಿಗೆ ಚಿಟ್ಟೆ ಮೇಳ ಹಾಗೂ ಅರೆ ವಾದ್ಯ ಕಲೆ ಪರಂಪರೆಯ ಹೆಗ್ಗುರುತಾದ ಹರಗಲದೇವಿ ಗುಡ್ಡದ ಕಾವಲ್ ಗ್ರಾಮದ ಛಲವಾದಿ ಚಾಲುಕ್ಯ ವಂಶದವರ ಆರಾಧ್ಯ ದೇವಿ ಶ್ರೀ ಆದಿಶಕ್ತಿ ಮಾರಮ್ಮ ಮತ್ತು ಕಾಳಘಟಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.04 ರಿಂದ ಮಾ.05 ದರ ವರೆಗೆ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಿತು,ಮೊದಲ ದಿನ ದೇವಿಯನ್ನು ರಾಜ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಮೆರೆಸಿ ಗಂಗಾ ಪೂಜೆ ಸಲ್ಲಿಸಿ ನಂತರ ಛಲವಾದಿ ಕುಟುಂಬಸ್ಥರ ಆರತಿ ಮೆರವಣಿಗೆನ್ನು ಚಿಟ್ಟೆ ಮೇಳದಿಂದ ಮತ್ತು ಅರೆ ವಾದ್ಯದೊಂದಿಗೆ ದೇವಿಯ ಆರಾಧಿಸಿ, ಶ್ರೀ ಕೆಂಚರಾಯ ಮತ್ತು ಶ್ರೀ ವೀರಭದ್ರ ಸ್ವಾಮಿಯ ಸೋಮನ ಕುಣಿತದೊಂದಿಗೆ ವಿಜೃಂಭಣೆಯಿಂದ ಮೆರವಣೆಗೆ ಮಾಡಿ ದೇವಿಯ ಗದ್ದುಗೆ ಮಾಡಲಾಗಿತ್ತದೆ, ನಂತರ ಎಡೆ ಅರ್ಪಣೆ ಮಾಡಿ ಛಲವಾದಿ ಪ್ರತಿ ಕುಟುಂಬಕ್ಕೆ ಸರಗು ಹಾಗೂ ಪದ್ಧತಿ ರೂಢಿಯಲ್ಲಿದೆ ಎರಡನೇ ದಿನ ದೇವಿಗೆ ಮಡಲಕ್ಕಿ ಸೇವೆಯನ್ನು ಮೆರವಣಿಗೆಯೊಂದಿಗೆ ಪಡೆದು ಭಕ್ತರ ಮನಸೂರೆಗೊಳ್ಳುವ ಸೋಮನ ಕುಣಿತ ನಡೆಸಿ ಭಕ್ತರ ಕೋರಿಕೆ ಈಡೇರಿಕೆಗೆ ಕುರುವು ಕೇಳುವ ವಿಶೇಷ ಆಚರಣೆ ಪದ್ಧತಿ ರೂಢಿಯಲ್ಲಿದೆ ಈ ರೀತಿ ಹಲವಾರು ತಮ್ಮ ಕಷ್ಟಗಳ ನಿವಾರಿಸಲು ಕುರುವನ್ನು ದೇವಿಗೆ ಇಟ್ಟು ಫಲವನ್ನು ಪಡೆದಿದ್ದಾರೆ, ನಂತರ ಅಂತಿಮವಾಗಿ ದೇವಿಗೆ ಮತ್ತೊಂದು ವಿಶೇಷ ಆಚರಣೆ ಮಣೆವು ಮಾಡಿ ದೇವಿಯ ಪೂಜಿಸಿ,ಕುಣಿಸಿ, ಆರಾಧಿಸಿ ಅಂತಿಮಗೊಳಿಸಲಾಗುತ್ತದೆ, ಸದರಿ ಗ್ರಾಮದ ಶ್ರೀ ಮಾರಮ್ಮ ದೇವಿಯ ಅರ್ಚಕರಾದ ಶಿವಣ್ಣ ಮಾತನಾಡಿ ನಮ್ಮ ಛಲವಾದಿ ಸಮುದಾಯದ 24 ಮನೆಗಳು ಇದ್ದು ಪ್ರತಿ ವರ್ಷವೂ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲಾಗಿತ್ತದೆ ಅಂತೆಯೇ ಈ ವರ್ಷವೂ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು ನಮ್ಮ ಕುಟುಂಬದ ಮೂರು ತಲೆಮಾರುಗಳಿಂದ ದೇವಿಯ ಅರ್ಚಕರ ವೃತ್ತಿ ಮಾಡುತ್ತಿದ್ದೇವೆ ನಮ್ಮ ಈ ಜಾತ್ರೆಯು ಪ್ರತಿ ಶಿವರಾತ್ರಿ ಹಬ್ಬವಾದ 5 ದಿನಕ್ಕೆ ಪ್ರಾರಂಭವಾಗುತ್ತದೆ ನಮ್ಮ ಗ್ರಾಮದ ಜಾತ್ರೆಗೆ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಬೇರೆ ತಾಲ್ಲೂಕು ಜಿಲ್ಲೆಗಳಿಂದ ನೂರಾರು ಭಕ್ತರು ಆಗಮಿಸುತ್ತಾರೆ ನಮ್ಮ ಸಮುದಾಯವು ಚಿಟ್ಟೆ ಮೇಳ ಹಾಗೂ ಅರೆ ವಾದ್ಯ ಕಲೆ, ಸಂಸ್ಕೃತಿಗೆ ಹೆಸರಾಗಿದೆ ಸರ್ಕಾರದಿಂದ ನಮ್ಮ ಸಮುದಾಯದ ಕಲಾವಿದರಿಗೆ ನೆರವು ದೊರೆತರೆ ಯುವ ಕಲಾವಿದರು ಹೊರಬರಲು ಹಾಗೂ ನಮ್ಮ ಕಲೆಯನ್ನು ನೆಲೆ ಗೊಳಿಸಲು ಅನುವಾಗುತ್ತದೆ ಎಂದರು.
ಸದರಿ ಶ್ರೀ ಆದಿಶಕ್ತಿ ಮಾರಮ್ಮ ದೇವಿ ಮತ್ತು ಶ್ರೀ ಕಾಳಘಟಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಗುಡಿ ಗೌಡರಾದ ಯೋಗೀಶ್, ಬಸವರಾಜು , ಭೀಮರಾಜು, ವಾದ್ಯ ಗೋಷ್ಠಿಗೆ ದಿವಂಗತ ವಾದ್ಯ ಶಂಕರಯ್ಯನವರ ಕುಟುಂಬಸ್ಥರಾದ ಸತೀಶ್ ಕುಮಾರ್ ಮತ್ತು ಕಲಾ ತಂಡ, ಸಮುದಾಯದ ಹಿರಿಯ ಮುಖಂಡರು ಹಾಗೂ ಗ್ರಾಮದ ಭಕ್ತರು ಸೇರಿದಂತೆ ನೆರೆ ಹೊರೆಯ ನೂರಾರು ಭಕ್ತರು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.
ವರದಿ: ಸಂತೋಷ್ ಓಬಳ. ಗುಬ್ಬಿ










Leave a Reply