ತಿಪಟೂರು: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವು ಫೆ.೪ರಿಂದ ೧೨ರವರೆಗೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಜರುಗಲಿದ್ದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಂಪ್ರದಾಯಿಕ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಶ್ರೀಮಠವು ಅನೇಕ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದ್ದು ಆಸಕ್ತರು ಭಾಗವಹಿಸಬಹುದು ಎಂದು ಶ್ರೀಮಠವು ಪತ್ರಿಕಾ ಪ್ರಕಟಣೆಯನ್ನು ತಿಳಿಸಿದೆ.ಫೆ.೫ರ ಬುಧವಾರ ವಚನನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಗಳು, ಗುರುವಾರ ಕೃಷಿ ಮತ್ತು ಜಲ ಸಂರಕ್ಷಣೆ ಭಾಷಣ ಸ್ಪರ್ಧೆ, ಶುಕ್ರವಾರ ಭಜನಾ ಮೇಳ, ಶನಿವಾರ ವಿಜ್ಞಾನ ಮೇಳ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ, ಭಾನುವಾರ ಪ್ರತಿಭಾನ್ವೇಷಣೆ, ಸೋಮವಾರ ಕೋಲಾಟ ಮತ್ತು ಸೋಬಾನೆ ಸ್ಪರ್ಧೆ, ಮಂಗಳವಾರ ಕೃಷಿ ಮೇಳ ಮತ್ತು ರೈತರ ಸಂವಾದ, ಬುಧವಾರ ಕರ್ನಾಟಕ ವಿವಿಧ ಜಾನಪದ ಕಲಾತಂಡÀಗಳಿAದ ಕಲಾಪ್ರದರ್ಶನ ಜರುಗಲಿದೆ. ಫೆ.೫ರ ಬೆಳಗ್ಗೆ ೧೦ ಗಂಟೆಗೆ ಜರುಗುವ ವಚನನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಗಳಲ್ಲಿ ಜಗಳೂರು, ಹರಪನಹಳ್ಳಿ, ದಾವಣಗೆರೆ ಹಾಗೂ ಚಿತ್ರದುರ್ಗ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಿದ್ದು, ವಿಜೇತರಾದ ತಂಡಗಳಿಗೆ ಪ್ರಥಮ ೧೦,೦೦೦, ದ್ವಿತೀಯ ೭,೦೦೦, ತೃತೀಯ ೫,೦೦೦ಗಳನ್ನ ನಗದು ಬಹುಮಾನ ಜೊತೆಗೆ ಆಕರ್ಷಕ ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು. ವಚನನೃತ್ಯದಲ್ಲಿ ೧೨ನೇ ಶತಮಾನದ ಶಿವಶರಣರ ವಚನಗಳಿಗೆ ಮಾತ್ರ ನೃತ್ಯ ಮಾಡಲು ಅವಕಾಶ ಕಲ್ಪಿಸಿದ್ದು, ಜನಪದ ನೃತ್ಯಗಳಲ್ಲಿ ರಿಮಿಕ್ಸ್ ಹಾಡಿಗೆ ಅವಕಾಶ ಇರುವುದಿಲ್ಲ. ಆಸಕ್ತರು ಜ.೩೧ರ ಒಳಗೆ ೯೯೧೬೮೧೯೫೩೮, ೯೯೧೬೮೧೯೫೩೬ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಫೆ.೬ರ ಬೆಳಗ್ಗೆ ೯.೩೦ಕ್ಕೆ ಕೃಷಿ ಮತ್ತು ಜಲ ಸಂರಕ್ಷಣೆ ವಿಷಯಕ್ಕೆ ಸಂಬAಧಿಸಿದAತೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ತರಳಬಾಳು ವಿದ್ಯಾಸಂಸ್ಥೆಯ ಸಿರಿಗೆರೆ, ಚಿತ್ರದುರ್ಗ, ಹೊಳಲ್ಕೆರೆ, ದಾವಣಗೆರೆ, ಹರಪ್ಪನಹಳ್ಳಿ ಹಾಗೂ ಭರಮಸಾಗರ ಹೋಬಳಿ ಎಲ್ಲಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಿದ್ದು, ಪ್ರಥಮ ೩೦೦೦, ದ್ವಿತೀಯ ೨೦೦೦, ತೃತೀಯ ೧೦೦೦ ನಗದು ಬಹುಮಾನಗಳನ್ನ ನೀಡಲಾಗುವುದು. ಆಸಕ್ತರು ಜ.೩೧ರ ಒಳಗೆ ೯೮೪೫೩೪೪೭೮೮, ೯೪೮೧೧೧೮೯೧೪ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಫೆ.೭ರ ಬೆಳಗ್ಗೆ ೯:೩೦ಕ್ಕೆ ಭಜನಾ ಮೇಳ ಏರ್ಪಡಿಸಿದ್ದು, ಜಗಳೂರು, ಹರಪನಹಳ್ಳಿ, ದಾವಣಗೆರೆ ಹಾಗೂ ಚಿತ್ರದುರ್ಗ ತಾಲೂಕಿನ ಆಸಕ್ತರೂ ಭಾಗವಹಿಸಬಹುದಾಗಿದೆ. ಪ್ರಥಮ ೮೦೦೦, ದ್ವಿತೀಯ, ೬,೦೦೦, ತೃತೀಯ ೪೦೦೦ ರೂಗಳ ಬಹುಮಾನದ ಜೊತೆಗೆ ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತರು ಜ.೩೧ರ ಒಳಗೆ ೯೯೭೨೫೩೧೫೦೪, ೯೭೪೧೬೬೪೮೧೨ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಫೆ.೧೦ರ ಬೆಳಗ್ಗೆ ೯:೩೦ಕ್ಕೆ ಕೋಲಾಟ ಸ್ಪರ್ಧೆ ಏರ್ಪಡಿಸಿದ್ದು, ಜಾನಪದ ಸೊಗಡಿನ ಕಲೆಯ ಜೊತೆಗೆ ಪ್ರತಿ ತಂಡದಲ್ಲಿ ೮ ರಿಂದ ೧೦ ಕಲಾವಿದರಿಗೆ ಮಾತ್ರ ಅವಕಾಶ ಇರಲಿದೆ. ಸ್ಪರ್ಧೆಯಲ್ಲಿ ವಿಜೇತರಾÀದ ತಂಡದವರಿಗೆ ಪ್ರಥಮ ೮೦೦೦, ದ್ವಿತೀಯ ೬,೦೦೦, ತೃತೀಯ ೪೦೦೦ ರಂತೆ ಬಹುಮಾನದ ಜೊತೆಗೆ ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತರು ಜ.೩೧ರ ಒಳಗೆ ೯೪೪೮೪೧೫೨೮೭, ೯೯೪೫೨೭೨೭೩೮ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಫೆ.೧೧ರ ಬೆಳಗ್ಗೆ ೯.೩೦ಕ್ಕೆ ಕೃಷಿ ಮೇಳ ಮತ್ತು ರೈತರ ಸಂವಾದ ಕಾರ್ಯಕ್ರಮ ಇರಲಿದ್ದು, ರಾಜ್ಯದ ಸಮಸ್ತ ರೈತ ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸಿ ಆಧುನಿಕ ರೀತಿಯ ಕೃಷಿಗೆ ಸಂಬAಧಿಸಿದAತಹ ಯಂತ್ರೋಪಕರಣಗಳನ್ನು ಅದರ ಉಪಯೋಗ ಬಗ್ಗೆ ವಿಶೇಷ ಕೃಷಿ ತಜ್ಞರಿಂದ ಮಾಹಿತಿ ಪಡೆಯಬಹುದಾಗಿದೆ.ಬಾಕ್ಸ್ – ಪ್ರತಿಭಾನ್ವಿತರಿಗೆ ಸುವರ್ಣ ಆಹ್ವಾನ. ತರಳಬಾಳು ಹುಣ್ಣಿಮೆಯಲ್ಲಿ ಫೆ. ೯ರ ಭಾನುವಾರ ಬೆಳಿಗ್ಗೆ ೧೦ ಗಂಟೆಯ ಪ್ರತಿಭಾನ್ವೇಷಣಾ ಸ್ಪರ್ಧೆಗಳು ಸಂಗೀತ, ನೃತ್ಯ, ಅಭಿನಯ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿವೆ. ಪ್ರತಿ ಭಾಗದಲ್ಲಿ ಕಿರಿಯರ ಹಂತ, ವಯಸ್ಕರಹಂತ, ಹಿರಿಯರ ಹಂತ ಎಂದು ನಿಗದಿಪಡಿಸಿದ್ದು, ಒಬ್ಬ ಸ್ಪರ್ಧಿಯು ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಪ್ರತಿಸ್ಪರ್ಧಿಗೆ ೫ ನಿಮಿಷಗಳ ಸಮಯ ನಿಗದಿ ಮಾಡಲಾಗಿದೆ. ವಿಜೇತರಿಗೆ ಪ್ರಥಮ ೩೦೦೦, ದ್ವಿತೀಯ ೨೦೦೦, ತೃತೀಯ ೧೦೦೦ ರೂಗಳ ನಗದು ಬಹುಮಾನಗಳ ಜೊತೆಗೆ ಆಕರ್ಷಕ ಪ್ರಶಸ್ತಿ ಫಲಕವನ್ನ ನೀಡಲಾಗುವುದು. ಜೊತೆಗೆ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ. ಸಂಗೀತ ಸ್ಪರ್ಧೆಯಲ್ಲಿ ರೆಕಾರ್ಡೆಡ್ ಮ್ಯೂಸಿಕ್ ಅಥವಾ ಕರೋಕೆಗೆ ಅವಕಾಶ ಇರುವುದಿಲ್ಲ. ಇತರ ಎಲ್ಲಾ ವಾದ್ಯಗಳನ್ನು ಸ್ಪರ್ಧೆಯೇ ನುಡಿಸಿ ಗಾಯನವನ್ನ ಹಾಡಬಹುದು. ೧೨ನೇ ಶತಮಾನದ ವಚನಗಳು ಜನಪದ ಗೀತೆಗಳು, ಭಾವಗೀತೆಗಳು, ದೇಶಭಕ್ತಿ ಗೀತೆಗಳು, ತತ್ವಪದಗಳು, ಕೀರ್ತನೆಗಳನ್ನು ಹಾಡಬಹುದು. ನೃತ್ಯ ಸ್ಪರ್ಧೆಯಲ್ಲಿ ರೆಕಾರ್ಡೆಡ್ ಮ್ಯೂಸಿಕ್ಅನ್ನು ಮಾತ್ರ ಬಳಸಬೇಕು. ಅಭಿನಯ ಸ್ಪರ್ಧೆಯಲ್ಲಿ ಐತಿಹಾಸಿಕ, ಸಾಮಾಜಿಕ, ಪೌರಾಣಿಕ, ಧಾರ್ಮಿಕ, ವಿಚಾರಗಳಿಗೆ ಸಂಬAಧಿಸಿದ ವಿಷಯಗಳಿಗೆ ಅಭಿನಯಿಸಲು ಮಾತ್ರ ಅವಕಾಶ ನೀಡಲಾಗಿದ್ದು, ಆಸಕ್ತರು ಜ.೩೧ರ ಒಳಗೆ ೯೬೬೩೯೫೬೨೭೫, ೯೮೮೦೦೨೪೩೭೩, ೮೮೬೧೨೭೪೯೭೩, ೮೭೪೭೯೫೩೫೬೬ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.
ವರದಿ: ಸಂತೋಷ್ ಓಬಳ . ಗುಬ್ಬಿ










Leave a Reply