ರಾಷ್ಟ್ರೀಯ ಹೆದ್ದಾರಿಕಾಮಗಾರಿಗೆ ಭೂ ಸ್ವಾಧೀನ ವಿಳಂಬಕ್ಕೆ ಕೆ.ಬಿ ಕ್ರಾಸ್ ನಲ್ಲಿ ರೈತರ ಆಕ್ರೋಶ ಪ್ರತಿಭಟನೆ,:ರೈತರ ಭೂಸ್ವಾಧೀನಕ್ಕೆ ಅಧಿಕಾರಿಗಳ ನಕಾರ.

Spread the love

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕೆ.ಬಿ ಕ್ರಾಸ್ ಮೂಲಕ ಹಾದುಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ 206ರ ಚತುಷ್ಪತ ಹೆದ್ದಾರಿಗೆ ಕೆ.ಬಿ ಕ್ರಾಸ್ ನಿಂದ 2.3ಕಿ.ಮಿ ಭೂಮಿ ಸ್ವಾಧೀನಕ್ಕೆ ಸರ್ಕಾರ 2018ರಲ್ಲಿ 41 ನೋಟಿಸ್ ಮಾಡಲಾಗಿತ್ತು, ಅಂದಿನಿಂದ ಇಂದಿನ ವರೆಗೂ, ಸರ್ಕಾರದ ಯಾವುದೇ ಸವಲತ್ತು ಪಡೆಯಲು, ಸಾಧ್ಯವಾಗಿರಲ್ಲಿ, ಕೆಲಸವು ಸ್ವತ್ತುಗಳಿಗೆ ಮಾರ್ಕ್ ಮಾಡಿ,ರಸ್ತೆ ಬದಿಯಲ್ಲಿ ಇದ್ದ ಅಲಸಿನಮರ ಸೇರಿದಂತೆ 250 ಕ್ಕೂ ಹೆಚ್ಚು ಮರಕಡಿಯಲಾಗಿದೆ,ರಸ್ತೆ ಮಧ್ಯದಿಂದ 130 ಅಡಿಗೆ ಎಲೆಕ್ಟ್ರಿಕಲ್ ಪೋಲ್ ಸಹ ಹಾಕಲಾಗಿದೆ.ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ,ರೈತರಿಗೆ 41 ನೋಟಿಸ್ ಸಹ ನೀಡಲಾಗಿದೆ. ಕಳೆದ 6 ವರ್ಷದ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಕಾಮಗಾರಿಯನ್ನು ಕೈಗೊಳ್ಳದೇ ಪರಿಹಾರ ನೀಡಿಲ್ಲ. ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯಗಳು ನಡೆಯದೇ ಇರುವ ಕಾರಣದಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ನೀಡಬೇಕೇಂದು ಆಗ್ರಹಿಸಿ ಕೆ.ಬಿ ಕ್ರಾಸ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಕಿಬ್ಬನಹಳ್ಳಿ ಗ್ರಾಮದ ಸರ್ವೇ ನಂ 19/1ಎ1 ರಿಂದ ಪ್ರಾರಂಭವಾಗಿ ಸುಮಾರು 122 ಮಂದಿಯ 5.67 ಹೆಕ್ಟೆರ್ 2.3 ಕಿ.ಮೀ ಭೂಮಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು.
ತುಮಕೂರಿನಿಂದ ಶಿವಮೊಗ್ಗದ ವರಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು 2018 ರಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿ ನೋಟಿಸ್ ನೀಡಿದ್ದರು. ಆದರೆ ಇಲ್ಲಿಯವರೆವಿಗೂ ಯಾವುದೇ ಕಾರ್ಯಗಳು ಆಗದೇ ಪರಿಹಾರವನ್ನು ನೀಡಿದೇ ಇರುವುದು ಜನರಿಗೆ ತೊಂದರೆ ಆಗಿದ್ದು ಕೂಡಲೇ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಹಿಂದಿರುಗಿಸುವಂತೆ ಆಗ್ರಹಿಸಿದ್ದಾರೆ.
ಮಾತನಾಡಿ
ಕಳೆದ 2017-18ನೇ ಸಾಲಿನಲ್ಲಿ ತುಮಕೂರಿನಿಂದ ಶಿವಮೊಗ್ಗದ ವರಗೆ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸ್ಥಳೀಯರ 122ಕ್ಕೂ ಹೆಚ್ಚು ಮಂದಿಯ ಭೂಮಿ, ನಿವೇಶನ, ಮನೆ ಎಲ್ಲವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರ ಆಗಬೇಕಿದೆ. ಆದರೆ ಕಳೆದ 6 ವರ್ಷದಿಂದಲೂ ಯಾವುದೇ ಅಧಿಕಾರಿಗಳು ಕೆ.ಬಿ.ಕ್ರಾಸ್‍ನಿಂದ ಕಿಬ್ಬನಹಳ್ಳಿ ಗ್ರಾಮದ ಕಡೆಯವರೆಗೆ ಸುಮಾರು 2.3 ಕಿ.ಮೀ. ಉದ್ದಕ್ಕೆ ಇರುವ ರಸ್ತೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡದೇ ನಿಶ್ಕ್ರಿಯವನ್ನಾಗಿಸಿದ್ದಾರೆ. ಇದರಿಂದಾಗಿ ಸ್ಥಳೀಯರು ಭೂಮಿಯನ್ನು ಬಿಡಲು ಸಾಧ್ಯವಾಗದೇ, ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಪರಿಹಾರವು ಇಲ್ಲದೆ ನರಳಾಡುತ್ತಿದ್ದಾರೆ. ಅದ್ದರಿಂದ ಸ್ಥಳೀಯರೆಲ್ಲರೂ ಒಂದು ನಿರ್ಧಾರಕ್ಕೆ ಬಂದಿದ್ದು ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ಸು ನೀಡಬೇಕೇಂದು ಒತ್ತಾಯಿಸುತ್ತಿದ್ದಾರೆ.
ಅಲ್ಲದೇ ಕಳೆದ 6 ವರ್ಷಗಳಲ್ಲಿ ಹಲವು ಬಾರಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲಿನ ಅಧಿಕಾರಿಗಳು ಉಡಾಫೆ ಮಾತುಗಳನ್ನಾಡುತ್ತಾ ಅವಮಾನಿಸುತ್ತಾರೆ. ಈ ಸಂಬಂಧ ಯೋಜನಾ ನಿರ್ದೇಶಕರು, ಪ್ರಾದೇಶಿಕ ಅಧಿಕಾರಿಗಳು, ಭಾರತ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅದ್ದರಿಂದ ಸಂತ್ರಸ್ತರಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ಸು ನೀಡುವ ಜೊತೆಗೆ 6 ವರ್ಷಕ್ಕೆ ಪರಿಹಾರದ ಮೊತ್ತವನ್ನು ನೀಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಎಸ್.ಎಲ್ ಎಒ ಧರ್ಮಪಾಲ್ ಮಾತನಾಡಿ ಸರ್ಕಾರದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಪಡಿಸಿಕೊಳ್ಳಲು 41 ನೋಟಿಸ್ ನೀಡಲಾಗಿದ್ದು, ಕೆಲ ರೈತರಿಂದ ಇಲಾಖೆಗೆ ಸೂಕ್ತ ಭೂ ಪರಿವರ್ತನೆ ದಾಖಲೆಗಳು ಬಂದಿರುವುದಿಲ್ಲ,ಮತ್ತು ಭೂ ಸ್ವಾಧೀನ ಪರಿಹಾರ ಹಣ ಸುಮಾರು 130 ಕೋಟಿ ಪರಿಹಾರ ನೀಡಬೇಕಾಗಿದು, ಭೂಸ್ವಾಧೀನ ಪ್ರಾಧಿಕಾರದಿಂದ ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ವರದಿ ನೀಡಲಾಗಿದ್ದು, ವರದಿಯಂತೆ ಯಾವುದೇ ಭೂ ಸ್ವಾಧೀನ ಮಾಡದೆ ಲಭ್ಯವಿರುವ ಪಿಡಬ್ಲೂಡಿ ಭೂಮಿಯಲ್ಲಿ ಎಕ್ಸಟೆಂಡ್ ಕಾರಿಡಾರ್ ರಸ್ತೆ ನಿರ್ಮಾಣ ಮಾಡಲು ಸೂಚನೆ. ಬಂದಿದ್ದು, ಸರ್ಕಾರದಿಂದ ಯಾವುದೇ ಭೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ಅಧಿಕಾರಿಗಳ ಉತ್ತರದಿಂದ ಆಕ್ರೋಶಗೊಂಡ ರೈತರು ಭೂ ಸ್ವಾಧೀನ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಾತನಾಡಿ ಕಳೆದ 6 ವರ್ಷದಿಂದ ನಮ್ಮ ಜಮೀನಿನಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಪಂಚಾಯತಿಗೆ ಹೋಗಿ ಯಾವುದಾದರು ಸರ್ಕಾರಿ ಯೋಜನೆ ಫಲಾನುಭವಿ ಆಗಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್, ಸಂಘ-ಸಂಸ್ಥೆಗಳಲ್ಲಿ ಸಾಲ ಸೌಲಭ್ಯವೂ ದೊರಕುತ್ತಿಲ್ಲ. ಇದರಿಂದಾಗಿ ಜೀವನ ನಿರ್ವಹಣೆ ತುಂಬಾ ಕಷ್ಟ ಸಾಧ್ಯವಾಗಿದೆ. ಇನ್ನೂ ಮನೆಗಳಿಗೆ ಸುಣ್ಣ-ಬಣ್ಣ ಕಂಡು ವರ್ಷಗಳೇ ಕಳೆದಿವೆ ರಸ್ತೆಯಿಂದ ನಮ್ಮ ಬದುಕು ಅತಂತ್ರವಾಗಿದೆ. ಯೋಜನೆಯ ಎಲ್ಲರಿಗೂ ಪರಿಹಾರ ಸಿಕ್ಕು ವರ್ಷಗಳೇ ಆಗಿವೆ ಅದರೆ ಕಿಬ್ಬನಹಳ್ಳಿ ಜನರಿಗೆ ಮಾತ್ರ ಏಕೆ ತಾರತಮ್ಯ ಎಂದು ಪ್ರಶ್ನಿಸಿದರು.
ಕಳೆದ 6 ವರ್ಷದಿಂದ ಯಾವುದೇ ಕೆಲಸ ಕಾರ್ಯಮಾಡಲು ತೊಡಕಾಗಿದ್ದು, ನಮಗೆ 6 ವರ್ಷದಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೂಸ್ವಾಧೀನ ಅಧಿಕಾರಿಗಳಾದ ಎಸ್ ಎಲ್ ಎ.ಒ ಧರ್ಮಪಾಲ್
ರಾಷ್ಟ್ರೀಯ ಹೆದ್ದಾರಿ ಯೋಜನೆ ಯೋಜನಾ ನಿರ್ದೇಶಕ ಅನುಫ್ ಶರ್ಮ ಭೇಟಿನೀಡಿದರು

ಪ್ರತಿಭಟನೆಯಲ್ಲಿ ತಿಮ್ಲಾಪುರ ದೇವರಾಜು .ಸೌಭಾಗ್ಯ ಕಮಲ, ವೀಣಾ ಜ್ಯೋತಿ
ದೇವರಾಜು ತಿಮ್ಮಲಾಪುರ .ಲೋಕೇಶ್ ,ಬಿಳಿಗೆರೆ ಪಾಳ್ಯ ಸ್ವಾಮಿ. ಶಶಿಧರ್ ಸೀಗೆಪಾಳ್ಯ ಶಶಿಧರ್ ಕೆ.ಬಿ ಕ್ರಾಸ್. ಸ್ವಾಮಿ ಬೆಳಿಗೆರೆ ಪಾಳ್ಯ,ದೇವರಾಜು ಕಿಬ್ಬನಹಳ್ಳಿ. ಹಟ್ನ ರಾಜಣ್ಣ.ಹೊನ್ನಪ್ಪ.ಅರುಣ್ ಕೆ.ಬಿ ಕ್ರಾಸ್ ಜೈ ಶಂಕರ್ ಅಮಿತ್ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು.

ಜಾಹಿರಾತು.

ಜಾಹಿರಾತು.

Leave a Reply

Your email address will not be published. Required fields are marked *

error: Content is protected !!