ತುಮಕೂರು ಜಿಲ್ಲೆ ತಿಪಟೂರು ನಗರದ ಹಾಲ್ಕುರಿಕೆ ರಸ್ತೆಯಲ್ಲಿರುವ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ನ ವಾರ್ಷಿಕೋತ್ಸವ ಸಮಾರಂಭವನ್ನ ಜನವರಿ 3,4 ಮತ್ತು 5ರಂದು 16ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದು ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥಾಪಕರಾದ ಶ್ರೀ ಟಿ.ಆರ್ ಕೇಶವ ಕುಮಾರ್ ತಿಳಿಸಿದರು.
ನಗರದ ಹಾಲ್ಕುರಿಕೆ ರಸ್ತೆ ಶಂಕರನಗರ ಎಸ್.ವಿ.ಐ.ಎಸ್ ಮತ್ತು ಕಿಡ್ಜಿ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಶವಕುಮಾರ್ ರವರು, ಪ್ರತಿವರ್ಷದಂತೆ ಈ ವರ್ಷವೂ ಕೂಡ 2024-25 ಸಾಲಿನ ಜನವರಿ 3,4 ಮತ್ತು 5 ರಂದು ಶಾಲಾ ಉತ್ಸವ,ಮಕ್ಕಳ ಪ್ರತಿಭೆಗಳ ಅನಾವರಣ ಮತ್ತು ಜ್ಞಾನೋದಯ ಎಂಬ ಕಾರ್ಯಕ್ರಮದಡಿ ಶಾಲಾ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿದ್ದು,ಪ್ರತಿದಿನವೂ ನಮ್ಮ ಶಾಲೆಯ ಎಲ್ಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,ಪ್ರತಿಯೊಬ್ಬ ನಮ್ಮ ಶಾಲೆಯ ವಿದ್ಯಾರ್ಥಿಗಳು ವೇದಿಕೆಯನ್ನು ಬಳಸಿಕೊಳ್ಳುವಂತಾಗಲಿ ಎಂಬ ನಿಟ್ಟಿನಲ್ಲಿ, ಕಾರ್ಯಕ್ರಮವನ್ನು ಸತತ 15 ವರ್ಷಗಳಿಂದ ಆಯೋಜನೆ ಮಾಡುತ್ತಿದ್ದೇವೆ. ನಮ್ಮ ಶಾಲೆಯಲ್ಲಿ ಎಸ್.ಎಸ್ ಎಲ್.ಸಿ ಯಲ್ಲಿ 2023-24 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಯಾದ ಡಿ.ಉಲ್ಲಾಸ್ (93.33) ಚಿನ್ನದ ಪದಕ ಹಾಗೂ ದ್ವಿತೀಯ ಸ್ಥಾನಗಳಿಸಿರುವ ವಿದ್ಯಾರ್ಥಿನಿಯಾದ ಎಲ್. ಅಕ್ಷರ (93.00) ಬೆಳ್ಳಿ ಪದಕದೊಂದಿಗೆ ” ವಿವೇಕ ರತ್ನ ” ಎಂಬ ಬಿರುದು ನೀಡಿ, ಗೌರವಿಸಲಾಗುವುದು. ಮೂರು ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 12 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ನಮ್ಮ ಸಂಸ್ಥೆಯ ಮೂಲಕ ಮುಂದೆ ಕಾಲೇಜು ಪ್ರಾರಂಭಿಸುವ ಆಲೋಚನೆಯನ್ನು ವ್ಯಕ್ತಪಡಿಸಿದ ಅವರು, ಈಗಾಗಲೇ ಪಿನ್ ಲ್ಯಾಂಡ್ ಸೇರಿದಂತೆ ಕೆಲವು ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿ,ಅಲ್ಲಿನ ಶಾಲಾ- ಕಾಲೇಜುಗಳ ಗುಣಮಟ್ಟದ ವಿದ್ಯಾಭ್ಯಾಸ,ಶಾಲಾ ಕಾಲೇಜುಗಳಿಗೆ ಬೇಕಾದ ಪೂರಕ ವ್ಯವಸ್ಥೆಗಳನ್ನು ನೋಡಿ ಬಂದು ಅದೇ ರೀತಿ ತಾಲೂಕಿನಲ್ಲಿ ಸುಸಜ್ಜಿತವಾದ ಉತ್ತಮ ಭೋದಕರ ಒಳಗೊಂಡ ಕಾಲೇಜ್ ಪ್ರಾರಂಭಿಸಲು ಚಿಂತಿಸುತ್ತಿದ್ದೇನೆ ಮತ್ತು ಆ ದೇಶದಲ್ಲಿರುವ ಶಿಕ್ಷಣ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಅದೇ ಮಾದರಿಯಲ್ಲಿ ನಾವು ಕೂಡ ಶಿಕ್ಷಣವನ್ನು ಕೊಡಲು ಬಯಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಎಸ್.ವಿ.ಐ.ಎಸ್ ವಿದ್ಯಾ ಸಂಸ್ಥೆ ಮತ್ತು ಕಿಡ್ಜಿ ಶಾಲೆಗೆ ಹೊರ ರಾಜ್ಯಗಳಿಂದ ಮೂರು ಪ್ರಶಸ್ತಿಗಳು ಲಭಿಸಿರುವುದು ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಪ್ರಾಂಶುಪಾಲೆ ಅಜ್ರ ನೂರ್ ಫೌಜಿಯಾ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.
ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಬಸ್ತಿಕಟ್ಟೆ ಅರಣ್ಯ ವ್ಯಾಪ್ತಿಯ ಗುಬ್ಬಿ ಹೆಬ್ಬೂರು ಮಾರ್ಗ ಮಧ್ಯೆ ರಸ್ತೆಯು ಹಲವಾರು ವರ್ಷದ ಹಳೆಯ ಮರವು ಬೀಳುವ ಭೀತಿಯನ್ನು ಬಿತ್ತಿ ರಸ್ತೆ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರಿಗೆ ಆತಂಕ ಉಂಟು ಮಾಡುತ್ತಿದೆ ಸದರಿ ವ್ಯಾಪ್ತಿಯು ಗುಬ್ಬಿ ಅರಣ್ಯ ವಲಯವು ಸೂಕ್ತ ಕ್ರಮ ವಹಿಸಿದೆ ಕೈ ಕಟ್ಟಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಕರಡಿ ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷ ಬೆಂಬಲಿ ಅಭ್ಯಾರ್ಥಿ ಅಣ್ಣೆಮಾರನಹಳ್ಳಿ ಗಾರೇ ಜಯಣ್ಣ ಅವಿರೋಧವಾಗಿ ಆಯ್ಕೆಯಾದರು.
15ಸದಸ್ಯ ಬಲದ ಕರಡಿ ಗ್ರಾಮಪಂಚಾಯ್ತಿಯಲ್ಲಿ ಅಧ್ಯಕ್ಷರಾಗಿದ ಜಯಂತಿ ಗ್ರಾಮದ ಗಂಗಮ್ಮ ನವರ ರಾಜೀನಾಮೆಯಿಂದ ತೆರವಾಗಿದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಅಣ್ಣೇ ಮಾರನಹಳ್ಳಿ ಗಾರೇ ಜಯಣ್ಣ ಅವಿರೋಧವಾಗಿ ಆಯ್ಕೆಯಾದರು
ಚುನಾವಣಾಧಿಕಾರಿಗಳಾಗಿ ತಿಪಟೂರು ತಹಸೀಲ್ದಾರ್ ಪವನ್ ಕುಮಾರ್ ಕರ್ತವ್ಯ ನಿರ್ವಹಿಸಿ, ವಿಜೇತ ಅಭ್ಯಾರ್ಥಿ ಘೋಷಣೆ ಮಾಡಿದರು.
ಮಾಜಿ ತಾಲ್ಲೋಕು ಪಂಚಾಯ್ತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್.ಕರಡಿ ಗ್ರಾಮಪಂಚಾಯ್ತಿ ಸದಸ್ಯ ಮುನಿರಾಜು,ಹರ್ಷ,ಗಂಗಮ್ಮ,ಶ್ರೀನಿವಾಸ್ ಮುಂತ್ತಾದವರು ಉಪಸ್ಥಿತರಿದು, ನೂತನ ಅಧ್ಯಕ್ಷರನ್ನ ಅಭಿನಂದಿಸಿದರು
ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕೆ.ಬಿ ಕ್ರಾಸ್ ಮೂಲಕ ಹಾದುಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ 206ರ ಚತುಷ್ಪತ ಹೆದ್ದಾರಿಗೆ ಕೆ.ಬಿ ಕ್ರಾಸ್ ನಿಂದ 2.3ಕಿ.ಮಿ ಭೂಮಿ ಸ್ವಾಧೀನಕ್ಕೆ ಸರ್ಕಾರ 2018ರಲ್ಲಿ 41 ನೋಟಿಸ್ ಮಾಡಲಾಗಿತ್ತು, ಅಂದಿನಿಂದ ಇಂದಿನ ವರೆಗೂ, ಸರ್ಕಾರದ ಯಾವುದೇ ಸವಲತ್ತು ಪಡೆಯಲು, ಸಾಧ್ಯವಾಗಿರಲ್ಲಿ, ಕೆಲಸವು ಸ್ವತ್ತುಗಳಿಗೆ ಮಾರ್ಕ್ ಮಾಡಿ,ರಸ್ತೆ ಬದಿಯಲ್ಲಿ ಇದ್ದ ಅಲಸಿನಮರ ಸೇರಿದಂತೆ 250 ಕ್ಕೂ ಹೆಚ್ಚು ಮರಕಡಿಯಲಾಗಿದೆ,ರಸ್ತೆ ಮಧ್ಯದಿಂದ 130 ಅಡಿಗೆ ಎಲೆಕ್ಟ್ರಿಕಲ್ ಪೋಲ್ ಸಹ ಹಾಕಲಾಗಿದೆ.ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ,ರೈತರಿಗೆ 41 ನೋಟಿಸ್ ಸಹ ನೀಡಲಾಗಿದೆ. ಕಳೆದ 6 ವರ್ಷದ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಕಾಮಗಾರಿಯನ್ನು ಕೈಗೊಳ್ಳದೇ ಪರಿಹಾರ ನೀಡಿಲ್ಲ. ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯಗಳು ನಡೆಯದೇ ಇರುವ ಕಾರಣದಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ನೀಡಬೇಕೇಂದು ಆಗ್ರಹಿಸಿ ಕೆ.ಬಿ ಕ್ರಾಸ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಕಿಬ್ಬನಹಳ್ಳಿ ಗ್ರಾಮದ ಸರ್ವೇ ನಂ 19/1ಎ1 ರಿಂದ ಪ್ರಾರಂಭವಾಗಿ ಸುಮಾರು 122 ಮಂದಿಯ 5.67 ಹೆಕ್ಟೆರ್ 2.3 ಕಿ.ಮೀ ಭೂಮಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ತುಮಕೂರಿನಿಂದ ಶಿವಮೊಗ್ಗದ ವರಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು 2018 ರಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿ ನೋಟಿಸ್ ನೀಡಿದ್ದರು. ಆದರೆ ಇಲ್ಲಿಯವರೆವಿಗೂ ಯಾವುದೇ ಕಾರ್ಯಗಳು ಆಗದೇ ಪರಿಹಾರವನ್ನು ನೀಡಿದೇ ಇರುವುದು ಜನರಿಗೆ ತೊಂದರೆ ಆಗಿದ್ದು ಕೂಡಲೇ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಹಿಂದಿರುಗಿಸುವಂತೆ ಆಗ್ರಹಿಸಿದ್ದಾರೆ. ಮಾತನಾಡಿ ಕಳೆದ 2017-18ನೇ ಸಾಲಿನಲ್ಲಿ ತುಮಕೂರಿನಿಂದ ಶಿವಮೊಗ್ಗದ ವರಗೆ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸ್ಥಳೀಯರ 122ಕ್ಕೂ ಹೆಚ್ಚು ಮಂದಿಯ ಭೂಮಿ, ನಿವೇಶನ, ಮನೆ ಎಲ್ಲವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರ ಆಗಬೇಕಿದೆ. ಆದರೆ ಕಳೆದ 6 ವರ್ಷದಿಂದಲೂ ಯಾವುದೇ ಅಧಿಕಾರಿಗಳು ಕೆ.ಬಿ.ಕ್ರಾಸ್‍ನಿಂದ ಕಿಬ್ಬನಹಳ್ಳಿ ಗ್ರಾಮದ ಕಡೆಯವರೆಗೆ ಸುಮಾರು 2.3 ಕಿ.ಮೀ. ಉದ್ದಕ್ಕೆ ಇರುವ ರಸ್ತೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡದೇ ನಿಶ್ಕ್ರಿಯವನ್ನಾಗಿಸಿದ್ದಾರೆ. ಇದರಿಂದಾಗಿ ಸ್ಥಳೀಯರು ಭೂಮಿಯನ್ನು ಬಿಡಲು ಸಾಧ್ಯವಾಗದೇ, ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಪರಿಹಾರವು ಇಲ್ಲದೆ ನರಳಾಡುತ್ತಿದ್ದಾರೆ. ಅದ್ದರಿಂದ ಸ್ಥಳೀಯರೆಲ್ಲರೂ ಒಂದು ನಿರ್ಧಾರಕ್ಕೆ ಬಂದಿದ್ದು ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ಸು ನೀಡಬೇಕೇಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಕಳೆದ 6 ವರ್ಷಗಳಲ್ಲಿ ಹಲವು ಬಾರಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲಿನ ಅಧಿಕಾರಿಗಳು ಉಡಾಫೆ ಮಾತುಗಳನ್ನಾಡುತ್ತಾ ಅವಮಾನಿಸುತ್ತಾರೆ. ಈ ಸಂಬಂಧ ಯೋಜನಾ ನಿರ್ದೇಶಕರು, ಪ್ರಾದೇಶಿಕ ಅಧಿಕಾರಿಗಳು, ಭಾರತ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದ್ದರಿಂದ ಸಂತ್ರಸ್ತರಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ಸು ನೀಡುವ ಜೊತೆಗೆ 6 ವರ್ಷಕ್ಕೆ ಪರಿಹಾರದ ಮೊತ್ತವನ್ನು ನೀಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಎಸ್.ಎಲ್ ಎಒ ಧರ್ಮಪಾಲ್ ಮಾತನಾಡಿ ಸರ್ಕಾರದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಪಡಿಸಿಕೊಳ್ಳಲು 41 ನೋಟಿಸ್ ನೀಡಲಾಗಿದ್ದು, ಕೆಲ ರೈತರಿಂದ ಇಲಾಖೆಗೆ ಸೂಕ್ತ ಭೂ ಪರಿವರ್ತನೆ ದಾಖಲೆಗಳು ಬಂದಿರುವುದಿಲ್ಲ,ಮತ್ತು ಭೂ ಸ್ವಾಧೀನ ಪರಿಹಾರ ಹಣ ಸುಮಾರು 130 ಕೋಟಿ ಪರಿಹಾರ ನೀಡಬೇಕಾಗಿದು, ಭೂಸ್ವಾಧೀನ ಪ್ರಾಧಿಕಾರದಿಂದ ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ವರದಿ ನೀಡಲಾಗಿದ್ದು, ವರದಿಯಂತೆ ಯಾವುದೇ ಭೂ ಸ್ವಾಧೀನ ಮಾಡದೆ ಲಭ್ಯವಿರುವ ಪಿಡಬ್ಲೂಡಿ ಭೂಮಿಯಲ್ಲಿ ಎಕ್ಸಟೆಂಡ್ ಕಾರಿಡಾರ್ ರಸ್ತೆ ನಿರ್ಮಾಣ ಮಾಡಲು ಸೂಚನೆ. ಬಂದಿದ್ದು, ಸರ್ಕಾರದಿಂದ ಯಾವುದೇ ಭೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಅಧಿಕಾರಿಗಳ ಉತ್ತರದಿಂದ ಆಕ್ರೋಶಗೊಂಡ ರೈತರು ಭೂ ಸ್ವಾಧೀನ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಾತನಾಡಿ ಕಳೆದ 6 ವರ್ಷದಿಂದ ನಮ್ಮ ಜಮೀನಿನಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಪಂಚಾಯತಿಗೆ ಹೋಗಿ ಯಾವುದಾದರು ಸರ್ಕಾರಿ ಯೋಜನೆ ಫಲಾನುಭವಿ ಆಗಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್, ಸಂಘ-ಸಂಸ್ಥೆಗಳಲ್ಲಿ ಸಾಲ ಸೌಲಭ್ಯವೂ ದೊರಕುತ್ತಿಲ್ಲ. ಇದರಿಂದಾಗಿ ಜೀವನ ನಿರ್ವಹಣೆ ತುಂಬಾ ಕಷ್ಟ ಸಾಧ್ಯವಾಗಿದೆ. ಇನ್ನೂ ಮನೆಗಳಿಗೆ ಸುಣ್ಣ-ಬಣ್ಣ ಕಂಡು ವರ್ಷಗಳೇ ಕಳೆದಿವೆ ರಸ್ತೆಯಿಂದ ನಮ್ಮ ಬದುಕು ಅತಂತ್ರವಾಗಿದೆ. ಯೋಜನೆಯ ಎಲ್ಲರಿಗೂ ಪರಿಹಾರ ಸಿಕ್ಕು ವರ್ಷಗಳೇ ಆಗಿವೆ ಅದರೆ ಕಿಬ್ಬನಹಳ್ಳಿ ಜನರಿಗೆ ಮಾತ್ರ ಏಕೆ ತಾರತಮ್ಯ ಎಂದು ಪ್ರಶ್ನಿಸಿದರು. ಕಳೆದ 6 ವರ್ಷದಿಂದ ಯಾವುದೇ ಕೆಲಸ ಕಾರ್ಯಮಾಡಲು ತೊಡಕಾಗಿದ್ದು, ನಮಗೆ 6 ವರ್ಷದಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೂಸ್ವಾಧೀನ ಅಧಿಕಾರಿಗಳಾದ ಎಸ್ ಎಲ್ ಎ.ಒ ಧರ್ಮಪಾಲ್ ರಾಷ್ಟ್ರೀಯ ಹೆದ್ದಾರಿ ಯೋಜನೆ ಯೋಜನಾ ನಿರ್ದೇಶಕ ಅನುಫ್ ಶರ್ಮ ಭೇಟಿನೀಡಿದರು
ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ ಮಹಿಳೆ ಹೆರಿಗೆ ನಂತರ ಕೆಮ್ಮು ಉಲ್ಬಣಗೊಂಡು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ತಿಪಟೂರು ಗಾಂಧಿನಗರದ ನಿವಾಸಿ ಪಾಷ ಜಾನ್ ಪುತ್ರಿ ಸುಮಾರು 27 ವರ್ಷ ವಯಸ್ಸಿನ ಪಿರ್ದೊಷ್ ಮೃತದುರ್ದೈವಿ ಎನ್ನಲಾಗಿದೆ.
ತಿಪಟೂರು ಮಹಿಳೆಯನ್ನ ಕೆ.ಜೆಹಳ್ಳಿಗೆ ಕೊಟ್ಟು ಮದುವೆ ಮಾಡಲಾಗಿತ್ತು, ಮೃತ ಮಹಿಳೆಗೆ 5ವರ್ಷ ಹೆಣ್ಣು ಮಗುವಿದ್ದು,2ನೇ ಹೆರಿಗೆಗೆ ಬಾಣಂತಿತನಕ್ಕಾಗಿ ತಿಪಟೂರಿಗೆ ಬಂದಿದ ಮಹಿಳೆಯನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಿದರೂ, ಹೊಟ್ಟೆನೋವು ಜಾಸ್ತಿಯಾದ ಕಾರಣ, ಸರ್ಕಾರಿ ವೈದ್ಯರು ಸಿಜರಿಯನ್ ಹೆರಿಗೆ ಮಾಡುವುದಾಗಿ, ಮಹಿಳೆ ಪೋಷಕರಿಗೆ ತಿಳಿಸಿದ್ದಾರೆ, ಪೋಷಕರ ಅನುಮತಿಯಂತೆ,ಮಹಿಳೆಗೆ ಸಿಜರಿಯನ್ ಅಪರೇಷನ್ ಮಾಡಿ ಹೆರಿಗೆ ಮಾಡಿಸಲಾಗಿದ್ದು, ತಾಯಿ ಮಗು ಆರೋಗ್ಯವಾಗಿದರು, ಆದರೇ ರಾತ್ರಿ ಕೆಮ್ಮ ಆರಂಬವಾಗಿ ಶ್ವಾಶಕೋಶದ ತೊಂದರೆಯಿಂದ ಮಹಿಳೆ ಸಾವನ್ನಪಿದ್ದಾರೆ, ಮಗು ಆರೋಗ್ಯವಾಗಿದೆ.
ತಿಪಟೂರು: ನಗರದ ಕಂಚಾಘಟ್ಟ ಬಡಾವಣೆಯಲ್ಲಿರುವ ಶ್ರೀ ಷಡಕ್ಷರ ಮಠದ ಸಭಾಂಗಣದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ 2025 ನೇ ವರ್ಷದ ವಾರ್ಷಿಕ ದಿನದರ್ಶಿಕೆ (ಕ್ಯಾಲೆಂಡರ್) ಅನ್ನು ಶ್ರೀಷಡಕ್ಷರ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ರುದ್ರಮುನಿಸ್ವಾಮೀಜಿ ಬಿಡುಗಡೆಗೊಳಿಸಿದರು.
ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು,ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಬಿ.ಟಿ.ಕುಮಾರ್ ನೇತೃತ್ವದಲ್ಲಿ ಸುಮಾರು 17 ವರ್ಷಗಳಿಂದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿಕೊಂಡು ಬರುತ್ತಿದ್ದು,ತಾಲೂಕಿನಲ್ಲಿ ಜಯಕರ್ನಾಟಕ ಜನಪರ ವೇದಿಕೆ ಸಾಮಾಜಿಕ,ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ತಾಲೂಕಿನಲ್ಲಿ ಸಂಘಟನೆ ನಂಬರ್ ಒನ್ ಸ್ಥಾನಕ್ಕೆ ತಲುಪಿದ್ದು,ಪ್ರತಿಯೊಬ್ಬ ಸಾರ್ವಜನಿಕರಿಗೂ ಹಾಗೂ ಪ್ರತಿಯೊಂದು ಹಳ್ಳಿಗೂ ಸಂಘಟನೆಯ ಕೆಲಸಗಳು ಚಿರಶಾಶ್ವತವಾಗಿ ಉಳಿಯುವ ಕೆಲಸಗಳನ್ನು ಹಮ್ಮಿಕೊಂಡು ಬರುತ್ತಿದ್ದು ತುಂಬಾ ಸಂತೋಷಕರವಾಗಿದೆ ಎಂದು ತಿಳಿಸಿದರು.
ಎಸ್.ವಿ.ಪಿ ಶಾಲೆಯ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಮಾತನಾಡಿ, ಕ್ಯಾಲೆಂಡರ್ ಗಳು ಪ್ರತಿಯೊಬ್ಬರಿಗೂ ಒಂದಲ್ಲ, ಒಂದು ರೀತಿಯಲ್ಲಿ ಅನುಕೂಲವಾಗುತ್ತಿವೆ. ಕ್ಯಾಲೆಂಡರ್ ಗಳಿಂದ ಹಬ್ಬಗಳು,ವಿಶೇಷ ದಿನಗಳು ಮತ್ತು ಮಹಾನ್ ವ್ಯಕ್ತಿಗಳ ಜಯಂತಿ ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿಗಳು ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ಯಾಲೆಂಡರ್ ಅನ್ನು ಬಳಕೆ ಮಾಡಿಕೊಳ್ಳಬೇಕೆಂದು ಹಾಗೂ ಸಂಘಟನೆ ವತಿಯಿಂದ ಗ್ರಾಮೀಣ ಭಾಗದ ಜನರಿಗೆ ಕ್ರೀಡಾ ಚಟುವಟಿಕೆ ಆಯೋಜಿಸಿ,ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಎಂ.ಆರ್. ಸೋಮಶೇಖರ್ ಮಾತನಾಡಿ, ಸುಮಾರು 17 ವರ್ಷಗಳಿಂದ ನಾನು ಈ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿದ್ದು, ತುಂಬಾ ಸಂತೋಷವಾಗಿದೆ. ಜಯಕರ್ನಾಟಕ ಜನಪರ ವೇದಿಕೆ ಈಗಾಗಲೇ ತಾಲೂಕಿನಲ್ಲಿ ಎಲ್ಲಾ ಗ್ರಾಮಗಳಲ್ಲಿ ಮಾಡಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಸಾರ್ವಜನಿಕರು ನೆನೆಯುತ್ತಿದ್ದಾರೆ.ಆರೋಗ್ಯ ಶಿಬಿರ,ನೋಟ್ ಬುಕ್ ವಿತರಣೆ,ಗ್ರಾಮಗಳಲ್ಲಿ ಆಟೋಟ ಸ್ಪರ್ಧೆ ಏರ್ಪಡಿಸುವುದರ ಮೂಲಕ ಇನ್ನು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿರುವುದರಿಂದ ತಾಲೂಕಿನಲ್ಲಿ ತನ್ನದೇ ಹೆಸರನ್ನು ಸಂಘಟನೆ ಹೊಂದಿದ್ದು,ಮುಂದೆ ಕೂಡ ಸಂಘಟನೆಯ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಸಂಘಟನೆ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದರು.
ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ. ಕುಮಾರ್,ಜಿಲ್ಲಾ ಉಪಾಧ್ಯಕ್ಷ, ಹುಚ್ಚಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಬಿ.ಬಸವರಾಜ್ ಯುವ ಮುಖಂಡ ತಿಲಕ್ ಕುಮಾರ್,ನಗರಸಭಾ ಸದಸ್ಯ ಲೋಕನಾಥ್ ಸಿಂಗ್,ನಗರ ಸಂಚಾಲಕ ರೋಹನ್ ರಾಜ್, ಪತ್ರಕರ್ತರಾದ ಸಿದ್ದೇಶ್, ಭಾನುಪ್ರಕಾಶ್,ಪ್ರಕಾಶ್ ಮತ್ತು ಕಿರಣ್ ಕುಮಾರ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.
ಕುಣಿಗಲ್ : ಚಾಲಕನ ನಿಯಂತ್ರಣ ತಪ್ಪಿ.ಕಾರು ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿ ಬೆಸ್ಕಾಂ ನೌಕರರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆ ತಾಲೂಕಿನ ಕುಣಿಗಲ್ ತಾಲ್ಲೋಕಿನ ದೊಡ್ಡಮಾವತ್ತೂರು ಬಳಿ ಶನಿವಾರ ಸಂಬವಿಸಿದೆ,
ತುಮಕೂರು ಜಿಲ್ಲೆ ತಿಪಟೂರು ನಗರ ಸ್ಟೆಲ್ಲಾ ಮೇರಿಸ್ ಸ್ಕೂಲ್ ವಿದ್ಯಾನಗರ ವಾಸಿ ಸಿ.ಎನ್ ಹರೀಶ್ (37) ಮೃತ ಕಾರು ಚಾಲಕ , ಬೆಸ್ಕಾಂ ನೌಕರರ ಹರೀಶ್ ಕಾರು ಚಾಲನೆ ಮಾಡಿಕೋಂಡು ತಿಪಟೂರಿನಿಂದ ಕುಣಿಗಲ್ ಮಾರ್ಗವಾಗಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು, ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ನಂತರ ತೆಂಗಿನ ಮರಕ್ಕೆ ರಸಭವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಚಾಲಕ ಹರೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಘಟನೆ ಸ್ಥಳಕ್ಕೆ ಅಮೃತ್ತೂರು ವೃತ್ತ ನಿರೀಕ್ಷಕ ಮಾದ್ಯಾನಾಯಕ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ತಿಪಟೂರು :ನಗರದ ಕಲ್ಲೇಶ್ವರ ಸ್ವಾಮಿದೇವಾಲದ ಆವರಣದಲ್ಲಿದ್ದ ಅಯ್ಯಪ್ಪ ಸ್ವಾಮಿ ಶೆಡ್‌ಗೆ ತಾಲ್ಲೂಕು ಆಡಳಿತದಿಂದ ಬೀಗ ಮುದ್ರೆ ಹಾಕಿತ್ತು ಆದರೆ, ರಾತ್ರೋ ರಾತ್ರಿ ಅಯ್ಯಪ್ಪ ಸ್ವಾಮಿ ದೇವಾಲಯದ ಬೀಗ ತೆಗೆದು ಅಯ್ಯಪ್ಪ ಸ್ವಾಮಿ ವಿಗ್ರಹ ಹೊತೊಯ್ದಾ ಘಟನೆ ತಿಪಟೂರು ನಗರದಲ್ಲಿ ನಡೆದಿದೆ,
ಗುರುವಾರ ರಾತ್ರಿ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಯ ಸಮಯದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಅಯ್ಯಪ್ಪ ಸ್ವಾಮಿ ದೇವಾಸ್ಥಾನ ಬೀಗ ತೆಗೆದ ಕಸಬಾ ಕಂದಾಯ ತನಿಖಾಧಿಕಾರಿ ಹಾಗೂ ಗ್ರಾಮಾಡಳಿತಾಧಿಕಾರಿಗಳ ಅಯ್ಯಪ್ಪಸ್ವಾಮಿ ವಿಗ್ರಹ ತೆಗೆದುಕೊಂಡು ಹೋಗಿರುವುದು ಸಾರ್ವಜನಿಕರಲ್ಲಿ ಅನುಮಾನ ಹಾಗೂ ಗೊಂದಲಕ್ಕೆ ಕಾರಣವಾಗಿದೆ.
ತಿಪಟೂರು ನಗರದ ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಹಲವು ದಶಕಗಳ ಹಿಂದೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಿಸಿಕೊಂಡು,ಅಯ್ಯಪ್ಪ ಭಕ್ತರು, ಮಾಲಾಧಾರಣೆ ಮಾಡಿಕೊಂಡು, ಪೂಜೆ ಪುನಸ್ಕಾರ ನೆರವೇರಿಸಲಾಗುತ್ತಿತ್ತು. ಆದರೆ ಶ್ರೀಕಲ್ಲೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣ ಮಾಡಿಕೊಳ್ಳಲು ಸ್ಥಳಾವಕಾಶ ಕೇಳಿದು ಒಂದು ಗುಂಟೆಯ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ ಗದ್ದಲಗಳು ಉಂಟಾದ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆಯಿಂದ ತಾಲ್ಲೂಕು ಆಡಳಿತದ ಮೂಲಕ ತಾತ್ಕಾಲಿಕ ಅಯ್ಯಪ್ಪ ಸ್ವಾಮಿ ಶೆಡ್‌ನ ಟೆಂಟ್‌ಗೆ ಬೀಗ ಮುದ್ರೆಯನ್ನು ಹಾಕಲಾಗಿತ್ತು . ಆದರೆ ಕಳೆದ ಒಂದೆರಡು ದಿನಗಳಲ್ಲಿ ಅಯ್ಯಪ್ಪ ಸ್ವಾಮಿ ವಿಗ್ರಹ ಕಳವಾಗಿದೆ ಎಂದು ದೂರು ನೀಡಲು ಕಸಬಾ ಕಂದಾಯ ನಿರೀಕ್ಷಕ ರಂಗಪ್ಪ ಪೋಲೀಸ್‌ಗೆ ದೂರು ನೀಡಲು ಸಹ ಮುಂದಾಗಿದ್ದರು ಎನ್ನಲಾಗಿದೆ. ಆದರೆ ಶುಕ್ರವಾರ ಬೆಳಗಿನ ಸಮಯದಲ್ಲಿ 3 ರಿಂದ 4 ಗಂಟೆಯ ಸಮಯದಲ್ಲಿ ಕಸಬಾ ಹೋಬಳಿಯ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕ ರಂಗಪ್ಪ ಮತ್ತು ಪೋಲೀಸ್ ಸಹಕಾರದಲ್ಲಿ ರಾತ್ರೋ ರಾತ್ರಿ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಶೆಡ್‌ನಿಂದ ಸ್ಥಳಾಂತರ ಮಾಡಿರುತ್ತಾರೆ ಆದರೆ ರಾತ್ರೋ ರಾತ್ರಿ ದೇವರ ವಿಗ್ರಹವನ್ನು ಸ್ಥಳಾಂತರ ಮಾಡಿರುವುದು, ಸಾರ್ವಜನಿಕರಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದ್ದು, ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘ ತಿಪಟೂರು ವತಿಯಿಂದ ನೂತನ ವರ್ಷ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ತಿಪಟೂರು ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ಡಾ//ಎಸ್.ಕೆ ಮಂಜುನಾಥ್ ಉದ್ಘಾಟಿಸಿದರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕಾ ವೃತ್ತಿ ಪವಿತ್ರವಾದ ವೃತ್ತಿ, ಸಮಾಜದ ಅಂಕುಡೊಂಕುಗಳನ್ನ ತಿದ್ದಿ ಸರಿದಾರಿಗೆ ತರುವ ಕೆಲಸ ಪತ್ರಕರ್ತರದು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಯನ್ನ ಗುರ್ತಿಸಿ ಆಳುವ ವರ್ಗದ ಗಮನಕ್ಕೆ ತಂದು ನೆರವು ನೀಡುವಂತಹ ಶಕ್ತಿ ಪತ್ರಿಕಾ ಮಾಧ್ಯಮಕ್ಕಿದೆ,ಪತ್ರಿಕಾ ವೃತ್ತಿಯ ಗೌರವ ಉಳಿಸಿ, ಬೆಳಸುವ ಕೆಲಸವನ್ನ ವೃತ್ತಿ ನಿರತಪತ್ರಕರ್ತರು ಮಾಡಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಉಪನ್ಯಾಸಕರಾದ ಡಾ//ಎಲ್ ಎಂ ವೆಂಕಟೇಶ್ ಮಾತನಾಡಿ ಪತ್ರಿಕಾ ವೃತ್ತಿ ಪವಿತ್ರವಾದ ವೃತ್ತಿ ಸಮಾಜದ ,ಓರೆಕೋರೆಗಳ ತಿದ್ದಿತೀಡುವ ಕ್ಷೇತ್ರದ ಮೇಲೂ ಅಪಾದನೆಗಳು ತಪ್ಪಿದಲ್ಲ,ಪತ್ರಕರ್ತರದವರು ಆತ್ಮ ಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು,ಪತ್ರಿಕಾ ರಂಗ ಬದಲಾವಣೆಯ ಕಾಲಘಟ್ಟದ ಸುಳಿಯಲ್ಲಿ ಸಿಲುಕಿ, ಉದ್ಯಮವಾಗಿ ಬದಲಾದ ಪರಿಣಾಮ, ಹಲವು ಏರಿಳಿತಗಳನ್ನ ಕಾಣುತ್ತಿದ್ದೇವೆ,ಪತ್ರಿಕಾ ರಂಗ ಉದ್ಯಮವಾಗಿ ಬದಲಾದ ಕಾರಣ ಪತ್ರಕರ್ತರ ವೃತ್ತಿ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು,ವೃತ್ತಿ ಅಭದ್ರತೆ ಎದುರಿಸುವಂತ್ತಾಗಿದೆ, ಪತ್ರಕರ್ತರು ವೃತ್ತಿ ಮೌಲ್ಯವನ್ನ ಯಾವದೇ ಕಾರಣಕ್ಕೂ ಕಳೆದುಕೊಳ್ಳ ಬಾರದುಎಂದು ತಿಳಿಸಿದರು ಪತ್ರಕರ್ತರ ನವೀನ್ ಕುಮಾರ್ ಮಾತನಾಡಿ ಸಮಾಜದಲ್ಲಿ ಬದಲಾವಣೆ ಜಗದ ನಿಯಮ, ಬದಲಾವಣೆ ಕಾರಣದಿಂದ ಪತ್ರಿಕಾ ರಂಗದಲ್ಲೂ ಬದಲಾವಣೆ ಆರಂಭವಾಗಿದ್ದು, ಶಕ್ತಿಯುತವಾದ ಮುದ್ರಣ ಮಾಧ್ಯಮಕ್ಕೆ ಪೈಪೋಟಿಯಾಗಿ ಇಂದು ಡಿಜಿಟಲ್ ಮಾಧ್ಯಮ ವೇಗವಾಗಿ ಬೆಳೆಯುತ್ತಿದೆ,ಮನುಷ್ಯನ ತಂತ್ರಜ್ಞಾನದ ನಾಗಲೋಟದಲ್ಲಿ ಮಾಧ್ಯಮಕ್ಷೇತ್ರವೂ ಹೊಸ ಹೊಸ ಸೃಜನಾತ್ಮಕ ಕ್ಷೇತ್ರವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಸದಸ್ಯ ನಿಜಗುಣ.ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಸ್ ಸೋಮಶೇಖರ್ , ನಿವೃತ್ತ ಶಿಕ್ಷಕ ಸೋಮಶೇಖರ್.ಪುಟ್ಟರಾಜು. ನಾಗ್ತಿಹಳ್ಳಿ ಕೃಷ್ಣಮೂರ್ತಿ.ಸಂಘದ ಗೌರಾವಾಧ್ಯಕ್ಷ ಭಾಸ್ಕರಾ ಚಾರ್. ಅಧ್ಯಕ್ಷ ಗಣೇಶ್ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು.ಉಪಾಧ್ಯಕ್ಷ ಶಂಕರಪ್ಪ ಬಳ್ಳೆಕಟ್ಟೆ, ಮುಂತ್ತಾದವರು ಉಪಸ್ಥಿತರಿದರು