
ತಿಪಟೂರು :ನಗರದ ಕಲ್ಲೇಶ್ವರ ಸ್ವಾಮಿದೇವಾಲದ ಆವರಣದಲ್ಲಿದ್ದ ಅಯ್ಯಪ್ಪ ಸ್ವಾಮಿ ಶೆಡ್‌ಗೆ ತಾಲ್ಲೂಕು ಆಡಳಿತದಿಂದ ಬೀಗ ಮುದ್ರೆ ಹಾಕಿತ್ತು ಆದರೆ, ರಾತ್ರೋ ರಾತ್ರಿ ಅಯ್ಯಪ್ಪ ಸ್ವಾಮಿ ದೇವಾಲಯದ ಬೀಗ ತೆಗೆದು ಅಯ್ಯಪ್ಪ ಸ್ವಾಮಿ ವಿಗ್ರಹ ಹೊತೊಯ್ದಾ ಘಟನೆ ತಿಪಟೂರು ನಗರದಲ್ಲಿ ನಡೆದಿದೆ,
ಗುರುವಾರ ರಾತ್ರಿ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಯ ಸಮಯದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ
ಅಯ್ಯಪ್ಪ ಸ್ವಾಮಿ ದೇವಾಸ್ಥಾನ ಬೀಗ ತೆಗೆದ ಕಸಬಾ ಕಂದಾಯ ತನಿಖಾಧಿಕಾರಿ ಹಾಗೂ ಗ್ರಾಮಾಡಳಿತಾಧಿಕಾರಿಗಳ ಅಯ್ಯಪ್ಪಸ್ವಾಮಿ ವಿಗ್ರಹ ತೆಗೆದುಕೊಂಡು ಹೋಗಿರುವುದು ಸಾರ್ವಜನಿಕರಲ್ಲಿ ಅನುಮಾನ ಹಾಗೂ ಗೊಂದಲಕ್ಕೆ ಕಾರಣವಾಗಿದೆ.
ತಿಪಟೂರು ನಗರದ ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಹಲವು ದಶಕಗಳ ಹಿಂದೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಿಸಿಕೊಂಡು,ಅಯ್ಯಪ್ಪ ಭಕ್ತರು, ಮಾಲಾಧಾರಣೆ ಮಾಡಿಕೊಂಡು, ಪೂಜೆ ಪುನಸ್ಕಾರ ನೆರವೇರಿಸಲಾಗುತ್ತಿತ್ತು. ಆದರೆ ಶ್ರೀಕಲ್ಲೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣ ಮಾಡಿಕೊಳ್ಳಲು ಸ್ಥಳಾವಕಾಶ ಕೇಳಿದು ಒಂದು ಗುಂಟೆಯ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ ಗದ್ದಲಗಳು ಉಂಟಾದ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆಯಿಂದ ತಾಲ್ಲೂಕು ಆಡಳಿತದ ಮೂಲಕ ತಾತ್ಕಾಲಿಕ ಅಯ್ಯಪ್ಪ ಸ್ವಾಮಿ ಶೆಡ್‌ನ ಟೆಂಟ್‌ಗೆ ಬೀಗ ಮುದ್ರೆಯನ್ನು ಹಾಕಲಾಗಿತ್ತು . ಆದರೆ ಕಳೆದ ಒಂದೆರಡು ದಿನಗಳಲ್ಲಿ ಅಯ್ಯಪ್ಪ ಸ್ವಾಮಿ ವಿಗ್ರಹ ಕಳವಾಗಿದೆ ಎಂದು ದೂರು ನೀಡಲು ಕಸಬಾ ಕಂದಾಯ ನಿರೀಕ್ಷಕ ರಂಗಪ್ಪ ಪೋಲೀಸ್‌ಗೆ ದೂರು ನೀಡಲು ಸಹ ಮುಂದಾಗಿದ್ದರು ಎನ್ನಲಾಗಿದೆ. ಆದರೆ ಶುಕ್ರವಾರ ಬೆಳಗಿನ ಸಮಯದಲ್ಲಿ 3 ರಿಂದ 4 ಗಂಟೆಯ ಸಮಯದಲ್ಲಿ ಕಸಬಾ ಹೋಬಳಿಯ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕ ರಂಗಪ್ಪ ಮತ್ತು ಪೋಲೀಸ್ ಸಹಕಾರದಲ್ಲಿ ರಾತ್ರೋ ರಾತ್ರಿ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಶೆಡ್‌ನಿಂದ ಸ್ಥಳಾಂತರ ಮಾಡಿರುತ್ತಾರೆ ಆದರೆ ರಾತ್ರೋ ರಾತ್ರಿ ದೇವರ ವಿಗ್ರಹವನ್ನು ಸ್ಥಳಾಂತರ ಮಾಡಿರುವುದು, ಸಾರ್ವಜನಿಕರಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದ್ದು, ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ











Leave a Reply