ಸೊಗಡು ಜನಪದ ಹೆಜ್ಜೆ ತಿಪಟೂರು (ರಿ.) ಯಿಂದ ”ಕಲ್ಪತರು ವಿದ್ಯಾರ್ಥಿ ರತ್ನ” ಬಹುಮಾನ ವಿತರಣೆ

Spread the love

ಸೊಗಡು ಜನಪದಹೆಜ್ಜೆ ತಿಪಟೂರು(ರಿ) ಹಾಗೂ ಶಾಲಾ ಶಿಕ್ಷಣ ಇಲಾಖೆ ತಿಪಟೂರು ಸಹಯೋಗದಲ್ಲಿ ನಗರದ ಎಸ್.ವಿ.ಪಿಪ್ರೌಡಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ, ರಸಪ್ರಶ್ನೆ ಕಾರ್ಯಕ್ರಮ ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಕಲ್ಪತರು ವಿದ್ಯಾರ್ಥಿ ರತ್ನ, ಬಹುಮಾನ ನೀಡಲಾಯಿತು

ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು,
ತಿಪಟೂರಿನ ಸಮಾಜ ಸೇವಕ ವ್ಯಕ್ತಿಗಳಾ ಸ್ಮರಣಾರ್ಥ ನೀಲಕಂಠಸ್ವಾಮಿ ತಂಡ ,ಸಿಂಗ್ರಿನಂಜಪ್ಪ ತಂಡ,ಪಲ್ಲಾಗಟ್ಟಿ ಅಡವಪ್ಪ,,ಸಾಲುಮರದ ಬೀರಜ್ಜ ತಂಡ, ಷಡಕ್ಷರ ದೇವರುತಂಡ ಹೆಸರಿನಲ್ಲಿ 5 ತಂಡ ರಚಿಸಿ
ಸ್ಪರ್ಧೆ ನಡೆಸಲಾಯಿತು.

ಸಿಂಗ್ರಿ ನಂಜಪ್ಪ ತಂಡ ಕಲ್ಪತರು ವಿದ್ಯಾರ್ಥಿ ರತ್ನ ಪ್ರಶಸ್ತಿಗೆ ಬಾಜನರಾದರು. ಸಿಂಗ್ರಿ ನಂಜಪ್ಪ ತಂಡದ ಶ್ರೀ ವಿವೇಕಾನಂದ ಇಂಟರ್ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿ ಭುವನ್ .ಎಸ್ ಮತ್ತು ನಳಂದ ಹೈಯರ್ ಪ್ರೈಮರಿ ಸ್ಕೂಲ್ ನ ವಿದ್ಯಾರ್ಥಿನಿಯರಾದ ಪೂರ್ವಿ ಎಂ,ಯುಗಶ್ರೀ ಜಿ ಡಿ .ಪ್ರಶಸ್ತಿಗೆ ಆಯ್ಕೆಯಾದರು,
ಸೋಗಡು ಜನಪದ ಹೆಜ್ಜೆ ತಿಪಟೂರು ಅಧ್ಯಕ್ಷರು ಮಾತನಾಡಿ ಈ ಮೂರು ವಿದ್ಯಾರ್ಥಿಗಳಿಗೆ ದಿನಾಂಕ 26.01.2025ರ ಗಣರಾಜ್ಯೋತ್ಸವ ದಿನದಂದು ಕಲ್ಪತರು ಕ್ರೀಡಾಂಗಣದಲ್ಲಿ ನಾಡಿನ ಗಣ್ಯರ, ಸಮ್ಮುಖದಲ್ಲಿ ಕಲ್ಪತರು ವಿದ್ಯಾರ್ಥಿ ರತ್ನ ಪ್ರಶಸ್ತಿ ಹಾಗೂ ಪ್ರತಿ ವಿದ್ಯಾರ್ಥಿ 25 ಗ್ರಾಂ ಬೆಳ್ಳಿ ಪದಕವನ್ನು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸಿರಿಗಂಧ ಗುರು, ಉಪಾಧ್ಯಕ್ಷರಾದ ನಿಜಗುಣ, ಕಾರ್ಯದರ್ಶಿಗಳಾದ ಚಿದಾನಂದ,ರವಿ, , ನಿವೃತ್ತ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಜ್ಯೋತಿ ಗಣೇಶ್ ,
ನಗರಸಭಾ ಸದಸ್ಯರಾದ
ಡಾ. ಓಹಿಲಾ ತರಕಾರಿ ಗಂಗಾಧರ್, ಜೆಮ್ಸ್ ಫೌಂಡೇಶನ್ ಕಾರ್ಯದರ್ಶಿ ತರಕಾರಿ ಗಂಗಾಧರ್,ಎಸ್ ವಿ ಪಿ ಶಾಲೆಯ ಉಪನ್ಯಾಸಕರಾದ ರೇಣುಕಪ್ಪ, ಉಪ್ನಳ್ಳಿ ದ್ರಾಕ್ಷಣಮ್ಮ, ಪ್ರಭಾ ವಿಶ್ವನಾಥ್, ಮಂಜುಳಾ ತಿಮ್ಮೇಗೌಡ್ರು, ಇನ್ನಿತರರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!