ತಿಪಟೂರು ರಾಗಿ ಖರೀದಿ ಕೇಂದ್ರದಲ್ಲಿ ಅಕ್ರಮದ ವಾಸನೆ, ಕ್ವಿಂಟಲ್ ಗೆ 2.5ಕೆ.ಜಿ ರಾಗಿ ಚೀಲಕ್ಕೆ 20ರೂಪಾಯಿ ವಸೂಲಿಗಿಳಿದ ಅಧಿಕಾರಿಗಳು

Spread the love

ತಿಪಟೂರು ರಾಗಿ ಕೇಂದ್ರ ಅಕ್ರಮವಾಗಿ ರೈತರಿಂದ 2.5 ಕೆ.ಟಿ ರಾಗಿಯನ್ನ ವಸೂಲಿ ಮಾಡಲಾಗುತ್ತಿದೆ, ಹಮಾಲಿ ಖರ್ಚು ಎಂದು ಅಕ್ರಮವಾಗಿ ಇಪ್ಪತ್ತು ರೂಪಾಯಿ ಸಂಗ್ರಹ ಮಾಡಲಾಗುತ್ತದೆ, ಎಂದು ರೈತರು ಆರೋಪಿಸಿದ್ದಾರೆ.


ಸರ್ಕಾರ ರೈತರಿಂದ ರಾಗಿ ಖರೀದಿ ಮಾಡಲು ಆದೇಶ ನೀಡಿ ಖರೀದಿ ಕೇಂದ್ರ ಪ್ರರಂಭವಾದಾಗಿನಿಂದ ಒಂದಿಲೊಂದು ಅಚಾರ್ತುದಲ್ಲಿಯೇ ನಡೆಯುತ್ತಿದೆ, ಆರಂಭದಲ್ಲಿ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿಯ ವಿಸ್ತಾರವಾದ ಗೋದಾಮುಗಳು ಸುಸಜ್ಜಿತ ಬಿಲ್ಡಿಂಗ್ ಗಳು ಇದ್ದರು, ಖಾಸಗೀ ಬಿಲ್ಡಿಂಗ್ ಮಾಲೀಕರಿಂದ ಬಾಡಿಗೆ ಕಟ್ಟಡ ಪಡೆದು ಖರೀದಿ ಆರಂಭಿಸಿದರು,ಆದರೆ ಸಾರ್ವಜನಿಕರಿಂದ ಭಾರೀ ಅಕ್ಷೇಪ ವ್ಯಕ್ತವಾದ ಹಿನ್ನೆಲೆ ತಿಪಟೂರು ಎಪಿಎಂಸಿ ಆವರಣದಲ್ಲಿ ರಾಗಿಖರೀದಿ ಕೇಂದ್ರ ಆರಂಭಿಸಲಾಯಿತು,ಮತ್ತೆ ಹಮಾಲರು ಪ್ರತಿಭಟನ ನಡೆಸಿ ಖರೀದಿ ಸ್ಥಿಗಿತಗೊಳಿಸಲಾಯಿತು .ಎಪಿಎಂಸಿ ಆವರಣದಲ್ಲಿ ಸರ್ಕಾರಿ ವೇಬ್ರಡ್ಜ್ ಇದ್ದರು , ಖಾಸಗೀ ವೇಬ್ರಡ್ಜ್ ನಲ್ಲಿ ತೂಕ ಮಾಡಿಸಿ ನಂತರ ಮಾರಾಟ ಮಾಡಬೇಕ್ಕಾಗಿತ್ತು, ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸರ್ಕಾರ ವೇಬ್ರಿಡ್ಜ್ ನಿರ್ಮಿಸಿದರೂ ಖಾಸಗೀ ಗೆ ವೇಬ್ರಡ್ಜ್ ಯಾಕೆ ಎಂದು ರೈತರು ಪ್ರಶ್ನೆ ಮಾಡಿದ ಕಾರಣ ನೆನ್ನೆಯಿಂದ ಎಪಿಎಂಸಿ ವೇ ಬ್ರಿಡ್ಜ್ ನಲ್ಲಿ ತೂಕ ಹಾಕಿಸಲಾಗುತ್ತಿದ್ದು, ರಾಗಿ ಮಾರಾಟ ಕೇಂದ್ರದಲ್ಲಿ ಮಾರಾಟಕ್ಕೆ ರಾಗಿ ತರುವ ರೈತರಿಂದ ಚೀಲಕ್ಕೆ ಒಂದು ಕೆ.ಜಿ580 ಗ್ರಾಂ ರಾಗಿ ತೆಗೆದುಕೊಳ್ಳುತ್ತಿದ್ದಾರೆ

ಎಂದು ರೈತರು ಆರೋಪಿಸಿದ್ದು, ಹಮಾಲರ ಖರ್ಚು ಎಂದು ಪ್ರತಿ ಚೀಲಕ್ಕೆ 20ರೂಪಾಯಿ ಯಂತೆ ಹಣ ಪೀಕಲಾಗುತ್ತದೆ, ಕಷ್ಟಪಟ್ಟು ರಾಗಿ ಬೆಳೆದಿರುವ ರೈತ,ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ ಜೇಬು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಎಂದು ರೈತರು ಆರೋಪಿಸಿದ್ದಾರೆ, ತಿಪಟೂರು ನ್ಯಾಪೇಡ್ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ರಾಗಿ ಮಾರಾಟಕ್ಕೆ 9472ಜನ ರೈತರು,140049 ಕ್ವಿಂಟಲ್ ರಾಗಿ ಮಾರಾಟಕ್ಕೆ ಹೆಸರು ನೋಂದಣಿಯಾಗಿದೆ, ಹಾಲಿ 1159 ಜನ ರೈತರು 18988 ಕ್ವಿಂಟಲ್ ರಾಗಿ ಮಾರಾಟ ಮಾಡಲಾಗಿದೆ,

ಎಂದು ರೈತರು ಆರೋಪಿಸಿದ್ದು, ಅಂದಾಜಿನ ಪ್ರಕಾರ 140049 ಕ್ವಿಂಟಲ್ ರಾಗಿ ಖರೀದಿಯಾದರೆ 280098 ಎರಡು ಲಕ್ಷದ ಎಂಬತ್ತು ಸಾವಿರ ಕೆ.ಜಿ ರಾಗಿ ಅಕ್ರಮವಾಗಿ ರಾಗಿ ಯಂತೆ ಒಂದುಕೋಟಿ ಹದಿನೇಳು ಲಕ್ಷ ಅರವತ್ತ ನಾಲ್ಕು ಸಾವಿರ ರೂಪಾಯಿ ಖರೀದಿ ಕೇಂದ್ರದ ಅಧಿಕಾರಿಗಳ ಕಿಸೆಸೇರುತ್ತದೆ,ಹಮಾಲರ ಹೆಸರಿಗಳಲ್ಲಿ ಸಂಗ್ರಮ ಮಾಡುತ್ತಿರುವ ಹಣ ಕ್ವಿಂಟಲ್ ಗೆ ಇಪತ್ತು ರೂಪಾಯಿಯಂತೆ ಲೆಕ್ಕ ಹಾಕಿದರೂ ,ಐವತ್ತಾರು ಲಕ್ಷ ರೂಪಾಯಿ ಆಗುತ್ತದೆ, ಈ ಹಣ ಯಾವುದು ಸರ್ಕಾರದ ಲೆಕ್ಕಕ್ಕೆ ಸೇರೋದೆ ಇಲ್ಲ, ಅಧಿಕಾರಿಗಳಿಗೆ ಇಷ್ಟುಹಣ ವಾಮಮಾರ್ಗದಲ್ಲಿ ಸೇರುತ್ತದೆ ಎಂದು ಆರೋಪಿಸಿದ್ದು ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ತನಿಖೆ ನಡೆಸಬೇಕು ಹಾಗೂ ವಾಮ ಮಾರ್ಗದಲ್ಲಿ ರೈತರ ಜೇಬಿಗೆ ಬೀಳುತ್ತಿರುವ ಕತ್ತರಿ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!