ಹುಚ್ಚಗೊಂಡನಹಳ್ಳಿ ಬಳಿ ರೋಡ್ ಡಿವೈಡರ್ ಗೆ ಕಾರು ಡಿಕ್ಕಿ ಕಾರುಚಾಲಕ ಸಾವು

Spread the love

ತಿಪಟೂರು ನಗರದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 206 ಹುಚ್ಚಗೊಂಡನಹಳ್ಳಿ ಬಳಿ ಇರುವ ಶ್ರೀನಿಧಿ ಡಾಬ ಹತ್ತಿರ ರೋಡ್ ಡಿವೈಡರ್ ಗೆ ಕಾರುಡಿಕ್ಕಿ ಹೊಡೆದು ಕಾರುಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.


ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮೂರು ಜನರ ಪೈಕಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ತಿಪಟೂರು ನಗರದ ಟಿ.ಎಂ ಮಂಜುನಾಥ ನಗರ ವಾಸಿ ಅರುಣ್ ಕುಮಾರ್ 31ವರ್ಷ ಮೃತ ದುರ್ದೈವಿ.
ಅಪಘಾತದಲ್ಲಿ ತಿಪಟೂರು ಕಂಚಾಘಟ್ಟ ವಾಸಿಗಳಾದ ಬಂಗಾರಿ 30 ವರ್ಷ ಹಾಗೂ ಅಮಿತ್ 32 ವರ್ಷ ತೀವ್ರವಾಗಿ ಗಾಯಗೊಂಡಿದ್ದು, ತಿಪಟೂರು ಸಾರ್ವಜನಿಕ ಆಸ್ಪತ್ರೆ ನೀಡಿ, ಹೆಚ್ಚನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕೊಂಡೊಯಲಾಗಿದ್ದು
ತಿಪಟೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!