ಜಯಕರ್ನಾಟಕ ಜನಪರ ವೇದಿಕೆ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶ್ರೀ ರುದ್ರಮುನಿಸ್ವಾಮೀಜಿ.

Spread the love

ತಿಪಟೂರು: ನಗರದ ಕಂಚಾಘಟ್ಟ ಬಡಾವಣೆಯಲ್ಲಿರುವ ಶ್ರೀ ಷಡಕ್ಷರ ಮಠದ ಸಭಾಂಗಣದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ 2025 ನೇ ವರ್ಷದ ವಾರ್ಷಿಕ ದಿನದರ್ಶಿಕೆ (ಕ್ಯಾಲೆಂಡರ್) ಅನ್ನು ಶ್ರೀಷಡಕ್ಷರ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ರುದ್ರಮುನಿಸ್ವಾಮೀಜಿ ಬಿಡುಗಡೆಗೊಳಿಸಿದರು.

ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು,ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಬಿ.ಟಿ.ಕುಮಾರ್ ನೇತೃತ್ವದಲ್ಲಿ ಸುಮಾರು 17 ವರ್ಷಗಳಿಂದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿಕೊಂಡು ಬರುತ್ತಿದ್ದು,ತಾಲೂಕಿನಲ್ಲಿ ಜಯಕರ್ನಾಟಕ ಜನಪರ ವೇದಿಕೆ ಸಾಮಾಜಿಕ,ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ತಾಲೂಕಿನಲ್ಲಿ ಸಂಘಟನೆ ನಂಬರ್ ಒನ್ ಸ್ಥಾನಕ್ಕೆ ತಲುಪಿದ್ದು,ಪ್ರತಿಯೊಬ್ಬ ಸಾರ್ವಜನಿಕರಿಗೂ ಹಾಗೂ ಪ್ರತಿಯೊಂದು ಹಳ್ಳಿಗೂ ಸಂಘಟನೆಯ ಕೆಲಸಗಳು ಚಿರಶಾಶ್ವತವಾಗಿ ಉಳಿಯುವ ಕೆಲಸಗಳನ್ನು ಹಮ್ಮಿಕೊಂಡು ಬರುತ್ತಿದ್ದು ತುಂಬಾ ಸಂತೋಷಕರವಾಗಿದೆ ಎಂದು ತಿಳಿಸಿದರು.

ಎಸ್.ವಿ.ಪಿ ಶಾಲೆಯ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಮಾತನಾಡಿ, ಕ್ಯಾಲೆಂಡರ್ ಗಳು ಪ್ರತಿಯೊಬ್ಬರಿಗೂ ಒಂದಲ್ಲ, ಒಂದು ರೀತಿಯಲ್ಲಿ ಅನುಕೂಲವಾಗುತ್ತಿವೆ. ಕ್ಯಾಲೆಂಡರ್ ಗಳಿಂದ ಹಬ್ಬಗಳು,ವಿಶೇಷ ದಿನಗಳು ಮತ್ತು ಮಹಾನ್ ವ್ಯಕ್ತಿಗಳ ಜಯಂತಿ ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿಗಳು ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ಯಾಲೆಂಡರ್ ಅನ್ನು ಬಳಕೆ ಮಾಡಿಕೊಳ್ಳಬೇಕೆಂದು ಹಾಗೂ ಸಂಘಟನೆ ವತಿಯಿಂದ ಗ್ರಾಮೀಣ ಭಾಗದ ಜನರಿಗೆ ಕ್ರೀಡಾ ಚಟುವಟಿಕೆ ಆಯೋಜಿಸಿ,ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸಿರುವುದು ಪ್ರಶಂಸನೀಯ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಎಂ.ಆರ್. ಸೋಮಶೇಖರ್ ಮಾತನಾಡಿ, ಸುಮಾರು 17 ವರ್ಷಗಳಿಂದ ನಾನು ಈ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿದ್ದು, ತುಂಬಾ ಸಂತೋಷವಾಗಿದೆ.
ಜಯಕರ್ನಾಟಕ ಜನಪರ ವೇದಿಕೆ ಈಗಾಗಲೇ ತಾಲೂಕಿನಲ್ಲಿ ಎಲ್ಲಾ ಗ್ರಾಮಗಳಲ್ಲಿ ಮಾಡಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಸಾರ್ವಜನಿಕರು ನೆನೆಯುತ್ತಿದ್ದಾರೆ.ಆರೋಗ್ಯ ಶಿಬಿರ,ನೋಟ್ ಬುಕ್ ವಿತರಣೆ,ಗ್ರಾಮಗಳಲ್ಲಿ ಆಟೋಟ ಸ್ಪರ್ಧೆ ಏರ್ಪಡಿಸುವುದರ ಮೂಲಕ ಇನ್ನು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿರುವುದರಿಂದ ತಾಲೂಕಿನಲ್ಲಿ ತನ್ನದೇ ಹೆಸರನ್ನು ಸಂಘಟನೆ ಹೊಂದಿದ್ದು,ಮುಂದೆ ಕೂಡ ಸಂಘಟನೆಯ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಸಂಘಟನೆ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದರು.

ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ. ಕುಮಾರ್,ಜಿಲ್ಲಾ ಉಪಾಧ್ಯಕ್ಷ, ಹುಚ್ಚಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಬಿ.ಬಸವರಾಜ್ ಯುವ ಮುಖಂಡ ತಿಲಕ್ ಕುಮಾರ್,ನಗರಸಭಾ ಸದಸ್ಯ ಲೋಕನಾಥ್ ಸಿಂಗ್,ನಗರ ಸಂಚಾಲಕ ರೋಹನ್ ರಾಜ್, ಪತ್ರಕರ್ತರಾದ ಸಿದ್ದೇಶ್, ಭಾನುಪ್ರಕಾಶ್,ಪ್ರಕಾಶ್ ಮತ್ತು ಕಿರಣ್ ಕುಮಾರ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು:

ಜಾಹಿರಾರು:

Leave a Reply

Your email address will not be published. Required fields are marked *

error: Content is protected !!