
ತಿಪಟೂರು ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ 2025-2026ನೇ ಸಾಲಿನ ಅಯವ್ಯಯ ಅಂದಾಜುಪಟ್ಟಿ ಪೂರ್ವಭಾವಿ ಸಭೆ ನಡೆಸಲಾಯಿತು .ಸಭೆಯಲ್ಲಿ ಪೌರಾಯುಕ್ತ ವಿಶ್ವೇಶ್ವರ ಬದರಗಡೆ,ಸೇರಿದಂತೆ ನಗರಸಭೆ ಅಧಿಕಾರಿಗಳು ಗೈರುಹಾಜರಾಗುವ ಮೂಲಕ, ಅಧ್ಯಕ್ಷೆ ಯಮುನಾ ಧರಣೇಶ್,ಉಪಾಧ್ಯಕ್ಷೆ ಮೇಘನಾ ಭೂಷಣ್ ಉತ್ಸಾಹಕ್ಕೆ ತಣ್ಣೀರು ಎರಚಿದಂತ್ತಾಯಿತು,

ಬಜೆಟ್ ಪೂರ್ವ ಸಭೆಯಲ್ಲಿ ನಗರದ ಉದ್ಯಮಿಗಳು,ಹೋಟೆಲ್ ಮಾಲೀಕರು,ಅಂಗಡಿಮುಂಗಟ್ಟುಗಳ,ಮಾಲೀಕರು, ವ್ಯಾಪಾರಸ್ಥರು,ನರ್ಸೀಂಗ್ ಹೋಮ್ ಮಾಲೀಕರು,ವಕೀಲರು,ನಗರದ ಸಂಘಸಂಸ್ಥೆಗಳು, ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದರು, ಸಭೆಯಲ್ಲಿ ಅಧಿಕಾರಿಗಳು ವರ್ತನೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತು.
ನಗರದಲ್ಲಿ ಇರುವಂತ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯುವುದು,ಅಭಿವೃದ್ದಿಗೆ ಪೂರಕವಾಗಿ ಅಗತ್ಯ ಕಾರ್ಯಕ್ರಮ ರೂಪಿಸಲು ಬಜೆಟ್ ಪೂರ್ವದಲ್ಲಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸುವುದು ಹಿಂದಿನಿಂದಲೂ ವಾಡಿಕೆಯಂತೆ ನಡೆಯುತ್ತಾ ಬಂದಿದೆ.
ಆದರೆ ಅಧಿಕಾರಿಗಳು ಮಾತ್ರ ಜವಾಬ್ದಾರಿ ಮೆರೆತರೆ ಎಂದು ಸಾರ್ವಜನಿಕರು ಪ್ರಶ್ನೆಮಾಡಿದರು
ಸಭೆಯಲ್ಲಿ ಉಪಸ್ಥಿತರಿದ ಸಾರ್ವಜನಿಕರು ತಿಪಟೂರು ನಗರದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿರುವ ಪುಟ್ ಪಾತ್ ತೆರವು ಮಾಡಬೇಕು, ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು,ಯುಜಿಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಲಹೆ ನೀಡಿದರು,
ಸಾರ್ವಜನಿಕರಿದ ಮಾಹಿತಿ ಪಡೆದ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಚರ್ಚಿಸಿ,ಸೂಕ್ತಬರವಸೆ ನೀಡಿದರು.
ಸಭೆಯಲ್ಲಿ ನಗರಸಭೆ ಸದಸ್ಯರು ಉಪಸ್ಥಿತರಿದರು
ವರದಿ: ಮಂಜುನಾಥ್ ಹಾಲ್ಕುರಿಕೆ









Leave a Reply