![{"capture_mode":"AutoModule","faces":[]}](https://kalpatharukranthi.com/wp-content/uploads/2024/11/IMG_20241118_095317-1024x768.jpg)
![{"capture_mode":"AutoModule","faces":[]}](https://kalpatharukranthi.com/wp-content/uploads/2024/11/IMG_20241118_095337-1024x768.jpg)
![{"capture_mode":"AutoModule","faces":[]}](https://kalpatharukranthi.com/wp-content/uploads/2024/11/IMG_20241118_095400-1024x768.jpg)
ಗುಬ್ಬಿ: ಕನಕದಾಸರ ತತ್ವಗಳನ್ನು ಹೇಳುತ್ತೇವೆ ಆದರೆ ಸಮಾಜದಲ್ಲಿ ಪಾಲಿಸುತ್ತಿಲ್ಲ ಅಂದು ಮನುಷ್ಯ ಜಾತಿಯ ಬಗ್ಗೆ ಅರಿವು ಮೂಡಿಸಿದರು ಇಂದು ರಾಜಕೀಯ ನಾಯಕರು ಮೇಲು ಕೀಳೆಂದು ಕಚ್ಚಾಡುತ್ತಿದ್ದಾರೆ, ಪ್ರತಿಯೊಬ್ಬರು ದಾಸರ ತತ್ವಗಳನ್ನು ಪಾಲಿಸಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ತಾಲ್ಲೂಕಿನ ಕಡಬ ಹೋಬಳಿಗೆ ಒಳಪಡುವ ಬಾಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕನಕ ದಾಸರ ಜಯಂತಿ ಕಾರ್ಯಕ್ರಮದ ಪ್ರದಾನ ಭಾಷಣ ವಹಿಸಿ ಮುಖ್ಯೋಪಾಧ್ಯಾಯ ಸಿದ್ದರಾಮಯ್ಯ ಮಾತನಾಡಿದರು, ಸದರಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀನಿವಾಸ್ ಮಾತನಾಡಿ ಕುಲ ಕುಲವೆಂದು ನಾವು ಹೊಡೆದಾಡುತ್ತಿದ್ದೇವೆ 15 ನೇ ಶತಮಾನದಲ್ಲೇ ಎಚ್ಚರಿಸಿದರೂ ನಾವು ಇನ್ನೂ ಬದಲಾಗಿಲ್ಲ ಇದನ್ನು ಬಿಟ್ಟು ನಾವೆಲ್ಲ ಒಂದೇ ಎಂಬ ಭಾವ ಬೆಳೆಸಿಕೊಳ್ಳಬೇಕು ಎಂದರು ಸದರಿ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಂದಲೇ ನೆರವೇಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀನಿವಾಸ್, ಸದಸ್ಯರಾದ ಪ್ರಕಾಶ್,ಶಾಲಾ ಮುಖ್ಯೋಪಾಧ್ಯಾಯರಾದ ಸಿದ್ದರಾಮಯ್ಯ, ಸಹ ಶಿಕ್ಷಕರಾದ ಮಧು ಶ್ರೀ, ಗ್ರಾಮಸ್ಥರಾದ ಸಿದ್ದರಾಜು ಉಪಸ್ಥಿತರಿದ್ದರು ಎಂದಿನಂತೆ ಶಾಲಾ ಮಕ್ಕಳು ಹಾಜರಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ










Leave a Reply