ಗಿರಿಯನಹಳ್ಳಿ ಸರ್ಕಾರಿ ಶಾಲೆಯಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗಿತ್ತು

Spread the love

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಗಿರಿಯನಹಳ್ಳಿ ಸರ್ಕಾರಿ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗಿತ್ತು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋವಿಂದ ರಾಜು ಮಾತನಾಡಿ ಅಂದಿನ ಕನ್ನಡ ವಿದ್ವಾಂಸರ ಕೂಡುಗೆಯನ್ನು ನೆನೆದರು ನಮ್ಮ ತಾಲ್ಲೂಕಿನ ಸಂಪಿಗೆ ಗ್ರಾಮದವರಾದ ಬಿ.ಎಂ. ಶ್ರೀ ಕಂಠಯ್ಯ ನವರ ಕನ್ನಡಕ್ಕೆ ದುಡಿದ ಮಹನೀಯರು ಎಂದು ಸ್ಮರಿಸಿ, ನಮ್ಮ ಮನೆಯಲ್ಲಿ ಸಂಸ್ಕೃತಿ ಕಲಿತು ನ್ಯಾಯ ನೀತಿ ಪ್ರಾಮಾಣಿಕತೆಯಿಂದ ಮನುಷ್ಯತ್ವವನ್ನು ರೂಢಿಸಿಕೊಂಡು ಸಮಾಜದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ವಹಿಸಿ ಮಾಡಿದರು. ಕಾರ್ಯಕ್ರಮದ ಪ್ರದಾನ ಭಾಷಣ ಮಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಎಚ್. ಬಿ. ವಾಣಿ ನಮ್ಮ ನಾಡಿನ ಸಂಸ್ಕೃತಿಯನ್ನು ನಾವು ಬೆಳೆಸಿಕೊಳ್ಳಬೇಕು ಪ್ರತಿಯೂಬ್ಬರಲ್ಲಿಯೂ ಪ್ರತಿಭೆ ಅಡಗಿರುತ್ತದೆ ಅದನ್ನು ಅರಿತು ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ನಾವು ಬೇರೆಯವರಿಗೆ ಕನ್ನಡವನ್ನು ಕಲಿಸುವುದರಿಂದ ಕನ್ನಡ ಭಾಷೆಯನ್ನು ಉಳಿಸಿಲು ಶ್ರಮಿಸಬೇಕು ಎಂದರು ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋವಿಂದ ರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಹೇಮಲತಾ ಎಸ್ ಎನ್ ಶಾಲಾ ಮುಖ್ಯೋಪಾಧ್ಯಾಯರಾದ ಎಚ್ ಬಿ ವಾಣಿ, ಹಿರಿಯ ಶಿಕ್ಷಕರಾದ ಸೌಂದರ್ಯ ಡಿ.ಪಿ , ಸಹ ಶಿಕ್ಷಕರಾದ ಗೌತಮಿ ಟಿ,ಅತಿಥಿ ಶಿಕ್ಷಕರಾದ ನವ್ಯ ಬಿ.ಪಿ ಉಪಸ್ಥಿತರಿದ್ದರು ಹಾಗೂ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಹಾಜರಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

Leave a Reply

Your email address will not be published. Required fields are marked *

error: Content is protected !!