ತಿಪಟೂರು: ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಈ ನಿಟ್ಟಿನಲ್ಲಿ ಕಾನೂನಿನ ಅರಿವಿನ ಕಾರ್ಯಕ್ರಮ ಅತ್ಯಗತ್ಯ ತುರ್ತು ಎಂದು ಕೆ.ಎಲ್. ಎ ಸ್ಕೂಲ್ ಆಫ್ ಲಾ ಕಾಲೇಜುವತಿಯಿಂದ ತಿಪಟೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನಿನ ಅರಿವು ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಪ್ರಸನ್ನ ಕುಮಾರ್ ಮಾತನಾಡಿದರು, ಭವಿಷ್ಯದ ಕಾನೂನಿನ ವಿದ್ಯಾಬ್ಯಾಸ ಕುರಿತು ಸಲಹೆ ಮತ್ತು ಸಮಾಜದಲ್ಲಿ ವಕೀಲ ವೃತ್ತಿಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು ಹಾಗೂ ಕಾನೂನನ್ನು ಪಾಲಿಸುವುದರಿಂದ ಆಗುವ ಅನುಕೂಲಗಳು ತಪ್ಪಿದಲ್ಲಿ ಎದುರಿಸಬೇಕಾದ ಅಪಾಯಗಳ ಕುರಿತು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ,ಕಾನೂನಿನ ಕುರಿತ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.ಕಾರ್ಯಕ್ರಮದಲ್ಲಿ ಕೆ.ಎಲ್. ಎ. ಸ್ಕೂಲ್ ಆಫ್ ಲಾ ಉಪ ಪ್ರಾಂಶುಪಾಲರಾದ ಪ್ರಸನ್ನ ಕುಮಾರ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.
@Report: SanthoshObhala









Leave a Reply