ತಿಪಟೂರು :ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಜಯಂತಿ ಗ್ರಾಮದ ಬಳಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಅಂಡರ್ ಪಾಸ್ ಸರಿಪಡಿಸಲು ಒತ್ತಾಯಿಸಿ ಜಯಂತಿ ಗ್ರಾಮ ಗ್ರಾಮಸ್ಥರು ತಾಲ್ಲೋಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಿದರು.

ತಾಲ್ಲೋಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಬಾಲರಾಜು ಮಾತನಾಡಿ ಜಯಂತಿ ಗ್ರಾಮದಲ್ಲಿ 100ಹೆಚ್ಚು ಕಾಡುಗೊಲ್ಲ ಸಮುದಾಯದ ಜನ ವಾಸ ಮಾಡುತ್ತಿದ್ದು .ಆಡು ಕುರಿ ದನಕರು ಸಾಕಾಣಿಕೆ ಕೃಷಿ ಜೀವನಾಧಾರವಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ಮಾಣದಿಂದ ಜನ ಜಾನುವಾರುಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುವುದು ಕಷ್ಟವಾಗಿದೆ.ಆಡುಕುರಿಗಳು ರಸ್ತೆದಾಟುವ ವೇಳೆ ಅಪಘಾತಕ್ಕೆ ಈಡಾಗುತ್ತಿವೆ. ಜಯಂತಿ ಗ್ರಾಮದ ಬಳಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು. ಹಾಗೂ ಈಗಾಗಲೇ ನಿರ್ಮಾಣ ಮಾಡಿರುವ ಅಂಡರ್ ಪಾಸ್ ಕಾಮಗಾರಿ ಕಳಪೆಯಾಗಿದ್ದು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕಾರಣ ಮಳೆಗಾಲದಲ್ಲಿ ನೀರು ತಿಂಗಳುಗಟ್ಟೆಲೆ ನಿಲ್ಲುವುದರಿಂದ ಜನ ಜಾನುವಾರು ಓಡಾಡುವುದೆ ಕಷ್ಟವಾಗಿದೆ. ಆದರಿಂದ ಸರ್ಕಾರ ಕೂಡಲೇ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು.ಅಂಡರ್ ಪಾಸ್ ಸರಿಪಡಿಸಿ ಒಡ್ಡಾಟಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕರಡಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷೆ ಗಂಗಮ್ಮ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಾಹನ ಸವಾರರಿಗೆ ವರವಾದರೆ,ಜಯಂತಿ ಗ್ರಾಮದ ಜನರಿಗೆ ಶಾಪವಾಗಿದೆ. ಜಯಂತಿ ಗ್ರಾಮದಲ್ಲಿ ಬಹುತೇಕ ಕುರಿಗಾಯಿಗಳೆ ವಾಸವಿದ್ದು. ಜನಜಾನುವಾರುಗಳು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ತೊಂದರೆಯಾಗುತ್ತಿದೆ.ರಾಷ್ಟ್ರೀ ಹೆದ್ದಾರಿ ಅಧಿಕಾರಿಗಳು ನಿರ್ಮಾಣ ಮಾಡಿರುವ ಅಂಡರ್ ಪಾಸ್ ಕಳೆಪೆಯಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಂಡು ಅಂಡರ್ ಪಾಸ್ ಒಳಗಡೆ ಒಡ್ಡಾಡುವುದು ಕಷ್ಟವಾಗುತ್ತಿದೆ ಕೂಡಲೇ ಅಂಡರ್ ಪಾಸ್ ಅವ್ಯವಸ್ಯೆ ಸರಿಪಡಿಸಬೇಕು.ಜಯಂತಿ ಗ್ರಾಮದ ಬಳಿ ಸೂಕ್ತವಾದ ತಂಗುದಾಣ ವ್ಯವಸ್ತೆ ಇಲ್ಲ ಕೂಡಲೇ ತಂಗುದಾಣ ನಿರ್ಮಾಣ ಮಾಡಬೇಕು. ಹಾಗೂ ಸರ್ವೀಸ್ ರಸ್ತೆ ಇಲ್ಲದೆ ಜಯಂತಿ ಗ್ರಾಮದ ಕುರಿಗಾಯಿಗಳಿಗೆ ಹಾಗೂ ರೈತ ಕುಟುಂಬಗಳಿಗೆ ತೊಂದರೆಯಾಗುತ್ತಿದೆ ಸರ್ಕಾರ ಕೂಡಲೇ ಸರ್ವೀಸ್ ರಸ್ತೆ ನಿರ್ಮಾಣ ಮಾಡಿ, ಅಂಡರ್ ಪಾಸ್ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಡುಗೊಲ್ಲರ ಸಂಘದ ಅಧ್ಯಕ್ಷರು ಬಾಲರಾಜು, ಉಪಾಧ್ಯಕ್ಷರು ಶಂಕ್ರಪ್ಪ ಶಕುನಗಿರಿ, ಜಯಣ್ಣ ಜಯಂತಿ ಗ್ರಾಮ ಸಂಘಟನಾ ಕಾರ್ಯದರ್ಶಿ ದಿನೇಶ್ ಸರ್ಥವಳ್ಳಿ .ಕರಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗಂಗಮ್ಮ ಗ್ರಾಮಸ್ಥರಾದ ಕಳಸಯ್ಯ ,ಈರಣ್ಣ ,ಬಸವರಾಜು ದಿನೇಶ್ .ಚೇತನ್ ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ





