Spread the love

ತಿಪಟೂರು: ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯವು ಪ್ರತಿಷ್ಠಿತ ‘ಸಿಸ್ಕೋ ನೆಟ್‌ವರ್ಕಿಂಗ್ ಅಕಾಡೆಮಿ ಸ್ಕಿಲ್-ಎ-ಥಾನ್ 2026’ ಅಭಿಯಾನದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದ ‘ಚಾಂಪಿಯನ್’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಭಾರತ ನಾಯಕತ್ವ ಶೃಂಗಸಭೆ (ಇಂಡಿಯಾ ಲೀಡರ್‌ಶಿಪ್ ಸಮಿಟ್ 2026)’ ಅದ್ದೂರಿ ಸಮಾರಂಭದಲ್ಲಿ ಸಿಸ್ಕೋ ಸಂಸ್ಥೆಯ ಜಾಗತಿಕ ಮತ್ತು ಪ್ರಾದೇಶಿಕ ಹಿರಿಯ ಅಧಿಕಾರಿಗಳಾದ ಪರ್ ಮೇರತ್ (ವೈಸ್ ಪ್ರೆಸಿಡೆಂಟ್, ಲರ್ನ್ ವಿತ್ ಸಿಸ್ಕೋ), ಮಾರ್ಸೆಲ್ಲಾ ಓಶಿಯಾ (ರೀಜನಲ್ ಮ್ಯಾನೇಜರ್ – ಎಪಿಜೆಸಿ, ಸಿಸ್ಕೋ ನೆಟ್‌ವರ್ಕಿಂಗ್ ಅಕಾಡೆಮಿ) ಹಾಗೂ ಕಾರನ್ಸ್ ಬಾರ್ಬೊಜಾ (ಮ್ಯಾನೇಜಿಂಗ್ ಡೈರೆಕ್ಟರ್, ಎಪಿಜೆಸಿ ಡಿಜಿಟಲ್ ಇಂಪ್ಯಾಕ್ಟ್ ಆಫೀಸ್) ಅವರು ಕಾಲೇಜಿನ ಸಾಧನೆಯನ್ನು ಶ್ಲಾಘಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಿಸ್ಕೋ ಇಂಡಿಯಾ ಮತ್ತು ಸಾರ್ಕ್‌ನ ನೆಟ್‌ಕಾಡ್ ಮುಖ್ಯಸ್ಥರಾದ ಇಶ್ವಿಂದರ್ ಸಿಂಗ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಸಿ. ಸತೀಶ್ ಕುಮಾರ್ ಅವರ ನೇತೃತ್ವದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು. ಈ ಐತಿಹಾಸಿಕ ಕ್ಷಣದಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಮೈತ್ರಿ ಸಿ., ಸಿಸ್ಕೋ ಅಕಾಡೆಮಿ ಸಂಯೋಜಕರಾದ ಡಾ. ಮನೋಜ್ ಕುಮಾರ್ ಡಿ.ಪಿ., ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ರವಿಪ್ರಕಾಶ್ ಎಂ.ಎಲ್., ಹಾಗೂ ತರಬೇತಿ ಮತ್ತು ಉದ್ಯೋಗಾಧಿಕಾರಿ ಡಾ. ಕಿರಣ್ ಟಿ.ಎಸ್. ಅವರು ಉಪಸ್ಥಿತರಿದ್ದು ಸಂಭ್ರಮ ಹಂಚಿಕೊಂಡರು.
ಡಿಜಿಟಲ್ ಕೌಶಲ್ಯ ಮತ್ತು ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ಕೆ.ಐ.ಟಿ. ವಿದ್ಯಾರ್ಥಿಗಳು ತೋರಿದ ಅಪ್ರತಿಮ ಆಸಕ್ತಿ ಮತ್ತು ಸಾಧನೆಗೆ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ತಿಪ್ಪೇರುದ್ರಪ್ಪ, ಉಪಾಧ್ಯಕ್ಷರಾದ ಬಿ.ಎಸ್. ನಟರಾಜು, ಟಿ.ಎಸ್. ಬಸವರಾಜು, ಬಿ.ಎಸ್. ಉಮೇಶ್, ಜಿ.ಪಿ. ದೀಪಕ್, ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಎಂ.ಆರ್. ಸಂಗಮೇಶ್, ಟಿ.ಯು. ಜಗದೀಶಮೂರ್ತಿ, ಹಚ್.ಜಿ. ಸುಧಾಕರ್ ಹಾಗೂ ಖಜಾಂಚಿಗಳಾದ ಟಿ.ಎಸ್. ಶಿವಪ್ರಸಾದ್ ಸೇರಿದಂತೆ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಂದ ಗೌರವವೆಂದು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!