.
:ಪತ್ರಕರ್ತರ ಸಂಘದಲ್ಲಿ ನಡೆಯುತ್ತಿರುವ ಬಣಗಳ ಗುದ್ದಾಟ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ನಂತರ ಹಲವಾರು ಗುಂಪುಗಾರಿಕೆ ಚಟುವಟಿಕೆಗಳು ನಡೆಯುತ್ತಿವೆ,ಒಟ್ಟಾಗಿ ಇರಬೇಕಿದ ಪತ್ರಕರ್ತರು ಗುಂಪುಗುಂಪುಗಳಾಗಿ ಹಾವುಮುಂಗಸಿಗಳಾಗಿದ್ದಾರೆ.ಅನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದ್ದು ವದಂತಿಗಳಿಗೆ ಪುಷ್ಠಿನೀಡುವಂತೆ ವಿಭಿನ್ನ ವರದಿಗಳು ಸಹ ಪ್ರಕಟವಾಗುತ್ತಿರುವುದು, ಸಾರ್ವಜನಿಕರ ಅನುಮಾನಕ್ಕೆ ಇಂಬ್ಬೂ ನೀಡಿವೆ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪತ್ರಿಕಾ ಕಚೇರಿ ನೀಡುವಂತೆ ಮನವಿ ಸಲ್ಲಿಸಿದ ಬೆನ್ನಲೆ ಕರ್ನಾಟಕ ವರದಿಗಾರರು ಹಾಗೂ ಸಂಪಾದಕ ಪತ್ರಕರ್ತರ ಸಂಘವೂ ಸಹ ನಮಗೂ ಕಚೇರಿ ಕೊಡಿ ಹಾಗೂ ನಿವೇಷನ ಕೊಡಿ ಸಂಘದ ಚಟುವಟಿಕೆಗಳಿಗೆ ಸಹಕಾರ ನೀಡಿ ಎಂದು ಶಾಸಕರು ಹಾಗೂ ತಿಪಟೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿರುವುದು, ಗೊಂದಲಕ್ಕೆ ಕಾರಣವಾಗಿದ್ದು.ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಬಣಗಳ ಕುರಿತು ವರದಿಗಳು ಸಾರ್ವಜನಿಕರಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿದೆ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಪದಗ್ರಹಣ ಕಾರ್ಯಕ್ರಮದಲ್ಲಿ ಬಹುತೇಕ ಪತ್ರಕರ್ತರ ಗೈರುಹಾಜರಿಯ ಬಗ್ಗೆ ಆಹ್ವಾನಿತ ಗಣ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಸಾರ್ವಜನಿಕ ಹಿತದೃಷ್ಠಿಯಿಂದ ಒಗ್ಗಟಾಗಿರ ಬೇಕಿದ ಪತ್ರಕರ್ತರು ಬಣಗಳಾಗಿರುವುದು ಶಾಸಕ ಬೇಸರಕ್ಕೆ ಕಾರಣವಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ





