Spread the love

ತಿಪಟೂರು : ತಾಲ್ಲೋಕಿನ ಕಸಬಾ ಹೋಬಳಿ ಕಲ್ಲಯ್ಯನಪಾಳ್ಯ ಗ್ರಾಮದಲ್ಲಿ ವಿದ್ಯುತ್ ತಂತಿ ಕಟ್ಟಾಗಿ ಬಿದ್ದು ಸಂಭವಿಸಿದ ವಿದ್ಯುತ್ ಅಪಘಾತದಲ್ಲಿ ಕಲ್ಲಯ್ಯನಪಾಳ್ಯ ಗ್ರಾಮದ ಯೋಗೇಶ್ ಎನ್ನುವ ವ್ಯಕ್ತಿ ಮೃತಪಟ್ಟಿದ್ದು ಬೆಸ್ಕಾಂ ಇಲಾಖೆಯಿಂದ ಪರಿಹಾರವಾಗಿ 6ಲಕ್ಷ ಹಣ ಮಂಜೂರಾಗಿದ್ದು ಪರಿಹಾರದ ಚೆಕ್ ಅನ್ನು ಶಾಸಕ ಕೆ.ಷಡಕ್ಷರಿ ಮೃತರ ಪತ್ನಿ ಜಯಮ್ಮ ನವರಿಗೆ ವಿತರಣೆ ಮಾಡಿದರು.


ನಗರಸಭೆ ಶಾಸಕರ ಕಾರ್ಯಾಲಯದಲ್ಲಿ ಪರಿಹಾರ ಚೆಕ್ ವಿತರಣೆ ಮಾಡಿ ಮಾತನಾಡಿ ಶಾಸಕರು ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ಯೋಗೇಶ್ ಕುಟುಂಬಕ್ಕೆ ಸರ್ಕಾರ 6ಲಕ್ಷ ಹಣ ಪರಿಹಾರ ನೀಡಿದೆ, ಈ ಹಣವನ್ನ ನಿಮ್ಮ ಆಪತ್ಕಾಲದಲ್ಲಿ ಸಹಾಯಕ್ಕೆ ಬರುವಂತೆ ಸದ್ಬಳಕೆ ಮಾಡಿಕೊಳ್ಳಿ,ಅನಾಗತ್ಯವಾಗಿ ಹಣ ಪೋಲು ಮಾಡಬೇಡಿ,ಈಗಾಗಲೇ ಸರ್ಕಾರ ಪಡಿತರ ಧಾನ್ಯ ನೀಡುತ್ತಿದೆ,ಗೃಹಲಕ್ಷ್ಮಿ ಹಣ ನೀಡುತ್ತಿದೆ ಸರ್ಕಾರದಿಂದ ಬಂದಿರುವ ಪರಿಹಾರ ಹಣವನ್ನ ಸಾಧ್ಯವಾದರೆ ಮೃತರ ಪತ್ನಿ ಜಯಮ್ಮನ ಅಕೌಂಟ್ ನಲ್ಲಿ ಎಫ್ ಡಿ ಇಟ್ಟುಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಸ್ಕಾಂ ಇ ಇ ಸೋಮಶೇಖರ್ ಗೌಡ.ಸಹಾಯಕ ಅಭಿಯಂತರರಾದ ಮನೋಹರ್ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!