Spread the love

ತಿಪಟೂರು ನಂದಿನಿ ಕ್ಷೀರ ಭವನದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ.
ತಿಪಟೂರು : ನಗರದ ನಂದಿನಿ ಕ್ಷೀರ ಭವನದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಷ್ಠಿçÃಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ ದಿನವಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಆಡು ಮುಟ್ಟದ ಸೊಪ್ಪಿಲ್ಲ ಸಹಕಾರ ಕ್ಷೇತ್ರ ಮಾಡದೇ ಇರುವಂತಹ ಕಾರ್ಯವಿಲ್ಲ ಎಂಬAತೆ ಸಹಕಾರ ಕ್ಷೇತ್ರವು ಆರ್ಥೀಕವಾಗಿ ಹಿಂದುಳಿದವರಿಗೆ, ರೈತರಿಗೆ, ಕೃಷಿಕರ ಏಳಿಗೆಗೆ ಬಹಳ ಅನುಕೂಲಕರವಾಗಿದ್ದು ಅವರ ಸೇವೆ ಮಾಡಲು ನಮಗೆ ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
45 ವರ್ಷಗಳ ರಾಜಕೀಯ ವೃತ್ತಿಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಿಕ್ಕಿರುವ ತೃಪ್ತಿ ರಾಜಕೀಯ ಕ್ಷೇತ್ರದಲ್ಲಿ ಸಿಕ್ಕಿಲ್ಲ, ಸಹಕಾರಿ ಕ್ಷೇತ್ರವು ಗ್ರಾಮೀಣ ಆರ್ಥಿಕತೆಗೆ ಬೆನ್ನೆಲು ಆಗಿ ನಿಂತಿದ್ದು, ಸಹಕಾರದ ಮೌಲ್ಯಗಳು ಬಲವಾಗಿದ್ದರೆ ಗ್ರಾಮಗಳು ಬಲವಾಗುತ್ತವೆ. ರೈತರು, ಮಹಿಳಾ ಸಂಘಗಳು ಮತ್ತು ಯುವಕರಿಗೆ ಸಹಕಾರಿ ಸಂಸ್ಥೆಗಳು ಅಭಿವೃದ್ಧಿಯ ಮಾರ್ಗವಾಗಿದೆ. ಈ ಕ್ಷೇತ್ರದಲ್ಲಿ ಶಿಕ್ಷಣದ ವ್ಯವಸ್ಥೆ, ಉದ್ಯೋಗದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ರೈತರಿಗೆ ಹಾಗೂ ಸಹಕಾರಿಗಳಿಗೆ ಅನುಕೂಲಕರ ನೀತಿಗಳನ್ನು ತರಲಾಗುವುದು, ಇಂದಿನ ಜಾಗತೀಕರಣಕ್ಕೆ ಯುವಕರು ಸಹಕಾರ ಕ್ಷೇತ್ರಕ್ಕೆ ಆಗಮಿಸಿ ಸಹಕಾರದ ತತ್ವಗಳನ್ನು ಬೆಳಸಿಕೊಳ್ಳಬೇಕಾಗಿದೆ ಎಂದರು.
ಸಹಕಾರ ಕ್ಷೇತ್ರದ ಮೂಲಕ ಅಲ್ಫಾವಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲಗಳನ್ನು ನೀಡಲಾಗುತ್ತಿದ್ದು, ರೈತರ ಕಲ್ಯಾಣಕ್ಕೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ತುಮೂಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ಮಾತನಾಡಿ ತುಮಕೂರು ಜಿಲ್ಲೆ ಹಾಲು ಉತ್ಪಾದನೆಯಲ್ಲಿ ರಾಜ್ಯದ ಮುಂಚೂಣಿಯಲ್ಲಿದೆ. ಸದಸ್ಯರ ನಿಷ್ಠೆ ಮತ್ತು ಗುಣಮಟ್ಟದ ಮೇಲಿನ ಕಾಳಜಿ ಸಹಕಾರ ಚಳವಳಿಯ ಬಲವಾಗಿದ್ದು ತಾಲ್ಲೂಕಿನಲ್ಲಿ ಹತ್ತು ಸಾವಿರ ಹಾಲು ಉತ್ಪಾದಕರಿದ್ದು ಸಹಕಾರ ಸಂಘಗಳ ಮೂಲಕ ರೈತರ ಆರ್ಥೀಕ ಮಟ್ಟವನ್ನು ಏರಿಕೆ ಮಾಡಲಾಗುತ್ತಿದೆ ಎಂದರು


ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನ ಅವಶ್ಯ. ಸದಸ್ಯರಿಗೆ ಅನುಕೂಲಕರ ಯೋಜನೆಗಳನ್ನು ತಲುಪಿಸುವುದು ನಮ್ಮ ಸಹಕಾರ ಯೂನಿಯನ್ ಪ್ರಮುಖ ಗುರಿಯಾಗಿದೆ ಎಂದರು.
ಕಾರ್ಯಕ್ರಮಕ್ಕೆ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕೆ.ಬಿ.ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುದ್ದಲಿಂಗೇಗೌಡ, ಟಿಎಪಿಸಿಎಮ್‌ಸಿ ಅಧ್ಯಕ್ಷ ಸಿ.ಚನ್ನಬಸವಯ್ಯ, ತುಮೂಲ್ ತಾ ಮುಖ್ಯಸ್ಥ ಶ್ರೀಧರ್, ವಿಸ್ತರಣಾಧಿಕಾರಿ ಶಶಿಕಲಾ, ಶ್ರೀಲಕ್ಷಿö್ಮ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಉಮಾಶಂಕರ್, ಪ್ರವೀಣ್ ಕುಮಾರ್, ವ್ಯವಸ್ಥಾಪಕ ದಯಾನಂದ್, ಸಿಇಓ ಮಹಾಂತೇಶ್ ಹಿರೇಮಠ, ಹರೀಶ್‌ಕುಮಾರ್, ಸಹಕಾರಿ ಇಲಾಖೆಯ ಅಧಿಕಾರಿಗಳು, ಹಾಲು ಉತ್ಪಾದಕರ ಸಂಘದ ಸದಸ್ಯರು, ಕಾರ್ಯದರ್ಶಿಗಳು ಹಾಗೂ ಸಹಕಾರ ಕ್ಷೇತ್ರದ ಸಹಕಾರಿಗಳು ಭಾಗವಹಿಸಿದ್ದರು.
ಬಾಕ್ಸ್ : ಗುರುತಿಸಿ ಸಚಿವ ಸ್ಥಾನ ನೀಡಲಿ : ಕೆ.ಷಡಕ್ಷರಿ.
ನನಗೂ ಸಹ ಮಂತ್ರಿಯಾಗುವ ಆಸೆಯಿದೆ ಆದರೆ ನನ್ನನ್ನು ಸಚಿವನ್ನಾಗಿ ಮಾಡಿ ಎಂದು ಯಾರನ್ನು ಬೇಡುವುದಿಲ್ಲ. 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆ, ಶಿಸ್ತು, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಕೆಲಸ ನಿರ್ವಹಿಸುತ್ತಾ ಬಂದಿದ್ದು ಮೂರು ಬಾರಿ ಶಾಸಕನಾಗಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ನಾನು ಅಪಾರವಾದ ಸೇವೆಯನ್ನು ಸಲ್ಲಿಸಿದ್ದು ಮೈಸೂರು ಪ್ರಾಂತ್ಯದ ವೀರಶೈವ ಲಿಂಗಾಯತ ಸಮಾಜಕ್ಕೆ ಸ್ಥಾನಮಾನ ನೀಡುವ ಮೂಲಕ ಸಚಿವ ಸ್ಥಾನ ನೀಡಿ ಎಂದು ಹೇಳಿದ್ದೇನೆ.
ಸಚಿವ ಸ್ಥಾನ ನೀಡುವುದು, ಮಂತ್ರಿಗಿರಿ ಮಾಡುವುದು ಪಕ್ಷದ ಹೈಕಮಾಂಡ್‌ಗೆ ಸಂಬAಧಿಸಿದ ವಿಚಾರವಾಗಿದೆ. ನಾನು ಪ್ರತಿನಿತ್ಯ ಗೃಹ ಸಚಿವ ಪರಮೇಶ್ವರ ಜೊತೆ ಮಾತುಕತೆ ನಡೆಸುತ್ತೇನೆ ಹಾಗೇಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಕೆಲಸವನ್ನು ಗಮನಿಸುತ್ತಾರೆ. ತಿಪಟೂರು ತಾಲ್ಲೂಕನ್ನು ಜಿಲ್ಲೆಯನ್ನಾಗಿ ಮಾಡಲಿ ಎಂದೇ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತಾ ಬರುತ್ತಿದ್ದು ಹುಳಿಯಾರು ತಾಲ್ಲೂಕು ಕೇಂದ್ರವನ್ನಾಗಿ ಮಾಡಿಕೊಂಡು ಅರಸೀಕೆರೆ, ಚಿಕ್ಕನಾಯಕನಹಳ್ಳಿ, ತುರವೇಕೆರೆ ಸೇರಿಕೊಂಡು ತಿಪಟೂರು ಜಿಲ್ಲೆ ಮಾಡಲಾಗುವುದು ಎಂದರು.


ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!