ತಿಪಟೂರು:ನಗರಸಭೆ ವಿಶೇಷ ಸಾಮಾನ್ಯ ಸಭೆಯನ್ನ ಶಾಸಕ ಕೆ.ಷಡಕ್ಷರಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ವಿರೋಧ ಪಕ್ಷಗಳ ಗೈರು ಹಾಜರಿಯಲ್ಲಿ ಕಾಂಗ್ರೇಸ್ ಸದಸ್ಯರು ಒತ್ತಾಯಿಸಿದರು.ಕುಡಿಯುವ ನೀರು ಪೂರೈಸಲು ಬೋರ್ ವೆಲ್ ಗಳಿಗೆ ಬಿಟ್ಟಿರುವ ಮೋಟರ್ ಪಂಪ್ ಗಳು ಪದೇಪದೇ ಕೆಟ್ಟುಹೋಗುತ್ತಿವೆ.ತುರ್ತಾಗಿ ಗುಣಮಟ್ಟದ ಮೋಟರ್ ಅಳವಡಿಕೆಗೆ ಕ್ರಮಕೈಗೊಳ್ಳ ಬೇಕು ಎಂದು ಸದಸ್ಯರು ಒತ್ತಾಯಿಸಿದರು.ಶಾಸಕ ಕೆ.ಷಡಕ್ಷರಿ ಮಾತನಾಡಿ ತಿಪಟೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಉಂಟಾಗದಂತೆ ಕ್ರಮವಹಿಸಲಾಗಿದೆ.ಅನಿವಾರ್ಯತೆ ಇರುವಕಡೆ ಬೋರ್ ವೆಲ್ ಕೊರೆಸಲಾಗುತ್ತದೆ, ನೀರಿನ ಸಮಸ್ಯೆ ಇರುವ ಬಗ್ಗೆ ನಮ್ಮ ಗಮನಕ್ಕೆ ತನ್ನಿ ಸಮಸ್ಯೆ ಸರಿಪಡಿಸೋಣ ಎಂದು ತಿಳಿಸಿದರು.

ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಸೂಕ್ತಕ್ರಮಕೈಗೊಳ್ಳಿ ಎಂದು ಸದಸ್ಯರು ಒತ್ತಾಯಿಸಿದ್ದಾಗ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್ ಮಾತನಾಡಿ ಬೀದಿನಾಯಿಗಳ ಹಾವಳಿ ಬಗ್ಗೆ ಸಾಕಷ್ಟು ಮಾಹಿತಿ ಇದೆ .ನಾಯಿ ಸಂತಾನ ಹರಣ ಚಿಕಿತ್ಸೆಗೆ ಟೆಂಡರ್ ಕರೆಯಲಾಗಿದ್ದು.ಯಾವುದೇ ಏಜೆನ್ಸಿ ಮುಂದೆಬರುತ್ತಿಲ್ಲ .ಬೀದಿನಾಯಿ ಹಾವಳಿಗೆಸೂಕ್ತಕ್ರಮಕೈಗೊಳ್ಳಲಾಗುವುದು ಎಂದರು.ಬೀದಿ ಬಂದಿ ವ್ಯಾಪಾರದ ಹೆಸರಿನಲ್ಲಿ ಕೆಲವು ಪ್ರಭಾವಿಗಳು ರಸ್ತೆಬದಿಯಲ್ಲಿ ಪೆಟ್ಟಿಗೆ ಅಂಗಡಿ ಇಟ್ಟು ಬಾಡಿಗೆ ವಸೂಲಿ ಮಾಡಯತ್ತಿದ್ದಾರೆ.ನಗರಸಭೆ. ಬೀದಿಬದಿ ಅಂಗಡಿಗಳ ತೆರವಿಗೆ ಮುಂದಾಗ ಬೇಕು ಎಂದು ಸದಸ್ಯ ಯೋಗೀಶ್ ಒತ್ತಾಯಿಸಿದರು.

ಮಧ್ಯಪ್ರವೇಶಿಸಿದ ಶಾಸಕರು ಹಾಲ್ಕುರಿಕೆ ರಸ್ತೆ ಅಗಲೀಕರಣಕ್ಕೆ ಟೆಂಡರ್ ಆಗಿದೆ.ಶೀಘ್ರವಾಗಿ ಅಂಗಡಿ ಎತ್ತಿಸಿ ಚತ್ತುಷ್ಪತ ರಸ್ತೆ ಮಾಡಲಾಗುವುದು.ಬೀದಿ ಬದಿ ಬಡ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶ್ರೀ ಮತಿ ಮೇಘನಾ ಸುಜಿತ್ ಭೂಷಣ್.ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ.ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ





