
ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಬಾಡೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿಯಾದ ಶ್ರೀಮತಿ ಭಾರತಿ ಶ್ರೀನಿವಾಸ್ ಮಾತನಾಡಿ ಈ ಗ್ರಾಮದಲ್ಲಿ ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಉತ್ತಮ ಸೌಕರ್ಯವುಳ್ಳ ಕಟ್ಟಡವನ್ನ ನಿರ್ಮಾಣ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಸದರಿ ಕಟ್ಟಡವನ್ನು ಮತ್ತಷ್ಟು ವಿಸ್ತರಿಸಿ ಸಭಾಂಗಣ ಮಾಡಲು ಅವಕಾಶ ಮಾಡಲಾಗುವುದು ಅಲ್ಲದೆ ಹಾಲು ಉತ್ಪಾದಕರ ಸಂಘದ ಕುಟುಂಬಗಳಿಗೆ ಸರ್ಕಾರ ಹಲವಾರು ಯೋಜನೆಗಳನ್ನ ನೀಡಿದೆ ಅವುಗಳಲ್ಲಿ ಕುಟುಂಬಸ್ಥರ ಫಲಾನುಭವಿ ಮರಣ ಹೊಂದಿದಲ್ಲಿ 50,000 ಪಡೆಯಲು ಅರ್ಹರಾಗುತ್ತಾರೆ ಹಾಗೂ ಸದರಿ ಕುಟುಂಬಸ್ಥರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ನೀಡಲಾಗುವುದು ಮತ್ತು ಮಹಿಳಾ ಹಾಲು ಉತ್ಪಾದಕರು ಹೆಚ್ಚಿದಲ್ಲಿ ಪ್ರತ್ಯೇಕ ಉಪ ಕೇಂದ್ರಗಳನ್ನ ಇದೇ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುವುದು ಮತ್ತು ಪಶುಗಳ ಆರೋಗ್ಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಶು ಆಸ್ಪತ್ರೆಯ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಇದೇ ಸಂದರ್ಭದಲ್ಲಿ ಬಾಡೇನಹಳ್ಳಿ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಮಧುಕರ್ ಮಾತನಾಡಿ ನಮ್ಮ ಬಾಡೇನಹಳ್ಳಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘಕ್ಕೆ ಸಮೀಪದ ಗ್ರಾಮಗಳಾದ ಪೆರಮಸಂದ್ರ, ಹರಗಲದೇವಿ ಗುಡ್ಡದ ಕಾವಲ್ ಮತ್ತು ವೀರಸಾಗರ ಗ್ರಾಮಗಳಿಂದ ಗ್ರಾಮಸ್ಥರು ನಿರಂತರವಾಗಿ ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ ಹಾಗೂ ಸದರಿ ನೂತನ ಕಟ್ಟಡದ ವ್ಯವಸ್ಥೆಗೆ ಹಲವಾರು ಬಾರಿ ಮನವಿ ಮಾಡಿದ್ದೆವು ಇಂದು ಉತ್ತಮ ಮೂಲಸೌಕರ್ಯದ ಕಟ್ಟಡ ಕಾರ್ಯರೂಪಕ್ಕೆ ಬಂದಿರುವುದು ಮತ್ತಷ್ಟು ಕ್ಷೀರೋದ್ಯಮವನ್ನು ಬಲಪಡಿಸಲು ಸಹಕಾರಿಯಾಗಿದೆ. ಅಲ್ಲದೆ ನಮ್ಮ ಗ್ರಾಮದ ಹಾಲು ಉತ್ಪಾದಕರ ಸಂಘವು ಪ್ರಾರಂಭದಲ್ಲಿ ಕಡಿಮೆ ಹಾಲು ಉತ್ಪಾದಕರನ್ನು ಹೊಂದಿತ್ತು ಆದಾಗ್ಯೂ ಪ್ರಸ್ತುತ ಗಣಿನೀಯವಾದ ಉತ್ಪಾದಕರ ಸಂಖ್ಯೆ ಹೆಚ್ಚುತ್ತಿದೆ ಹಾಗೂ ಮತ್ತಷ್ಟು ಹಾಲು ಉತ್ಪಾದನೆಯಲ್ಲಿ ಮಹಿಳೆಯರು ಒತ್ತು ನೀಡಿದಲ್ಲಿ ತಮ್ಮ ಆರ್ಥಿಕ ಬದುಕಿಗೆ ಮತ್ತು ಸಂಘ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮಸ್ಥರಾದ ಶ್ರೀ ಬಸವರಾಜು ಮಾತನಾಡಿ ನಮ್ಮ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಹಲವಾರು ವರ್ಷಗಳಿಂದ ಸೂಕ್ತ ಪ್ರತ್ಯೇಕ ಕಟ್ಟಡದ ವ್ಯವಸ್ಥೆಯ ಕೊರತೆ ಇತ್ತು ಆದರೆ ಇಂದು ನಮ್ಮ ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿರುವುದು ನಮಗೆ ಸಂತಸ ತಂದಿದೆ ಹಾಗೂ ಮತ್ತಷ್ಟು ಹೈನುಗಾರಿಕೆಯಲ್ಲಿ ಗ್ರಾಮಸ್ಥರು ತೊಡಗಲು ಅನುಕೂಲವಾಗಿದೆ ಎಂದರು.
ಸದರಿ ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿಯಾದ ಶ್ರೀಮತಿ ಭಾರತಿ ಶ್ರೀನಿವಾಸ್, ಪ್ರಭಾರ ಸಹಾಯಕ ವ್ಯವಸ್ಥಾಪಕರಾದ ಶ್ರೀ ಕೆ ಎ ಶಂಕರ್ ನಾಗ್ ಬಾಡೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಜಯರಾಮಯ್ಯ, ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಮಧುಕರ್ ಉಪಸ್ಥಿತರಿದ್ದರು ಹಾಗೂ ಸದರಿ ಸಂಘದ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಸದರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ










Leave a Reply