ಗುಬ್ಬಿ: ತಾಲ್ಲೂಕಿನ ಕಡಬಾ ಹೋಬಳಿಯ ಬಾಡೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 77ನೇ ಭಾರತೀಯ ಗಣರಾಜ್ಯೋತ್ಸವ ಅಂಗವಾಗಿ ಗೌರವ ಸೂಚಿಸಲಾಯಿತು. ಸದರಿ ಕಾರ್ಯಕ್ರಮವನ್ನು ಉದ್ದೇಶಿಸಿ ಬಾಡನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಉಮ್ಮೇ ಸನ್ಮಾ ಖಾನಮ್ ಮಾತನಾಡಿ, ನಮ್ಮ ದೇಶದ ಸಂವಿಧಾನವು ನಮಗೆ ಪ್ರಜ್ಞಾವಂತ ಪ್ರಜೆಗಳಾಗಿ ಬದುಕಲು ಕಾನೂನು ಚೌಕಟ್ಟನ್ನ ಬಿಂಬಿಸುವ ಕನ್ನಡಿ ಇದ್ದಂತೆ ಇಂತಹ ಸಂವಿಧಾನವನ್ನ ಜಾರಿಗೆ ತರಲು ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್ ರವರು, ರಚನಾ ಸಮಿತಿ ಅಧ್ಯಕ್ಷರಾದ ಬಾಬು ರಾಜೇಂದ್ರ ಪ್ರಸಾದ್ ಇನ್ನೂ ಮುಂತಾದ ಅನೇಕ ರಾಷ್ಟ್ರನಾಯಕರು ನಮ್ಮ ಸಂವಿಧಾನ ಜಾರಿಗೆ ತರಲು ಅವಿರತಾ ಪರಿಶ್ರಮ ಪಟ್ಟಿದ್ದಾರೆ ಇಂತಹ ಮಹನೀಯರ ಫಲವಾಗಿ ನಾವು ಸಂವಿಧಾನವನ್ನು ಪಡೆದುಕೊಂಡಿದ್ದೇವೆ. ಕಾನೂನಿನ ಮುಂದೆ ನಾವೆಲ್ಲರೂ ಸರಿಸಮಾನರು ಎಂಬ ಧ್ಯೇಯದಲ್ಲಿ ಸಾಮಾಜಿಕ ಮತ್ತು ಜಾತ್ಯತೀತ ನ್ಯಾಯದ ನೆಲಗಟ್ಟಿನಲ್ಲಿ ಅರಿತು ಇಂದಿನ ಯುವ ಜನತೆ ಭವ್ಯ ಭಾರತದ ಭವಿಷ್ಯ ನಿರ್ಮಾಣ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯಲ್ಲೂ ಪ್ರಜ್ವಲಿಸಬೇಕಿದೆ ಎಂದರು.
ಸದರಿ ಕಾರ್ಯಕ್ರಮದಲ್ಲಿ ಬಾಡೇನಹಳ್ಳಿ ಸರ್ಕಾರಿ ಶಾಲೆಯ ಎಸ್ .ಡಿ .ಎಂ .ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಖ್ಯೋಪಾಧ್ಯಾಯರಾದ ಶ್ರೀಮತಿ ಉಮ್ಮೇ ಸನ್ಮಾ ಖಾನಮ್,ಸಹ ಶಿಕ್ಷಕರಾದ ಶ್ರೀಮತಿ ಮಧುಶ್ರೀ, ಶ್ರೀಮತಿ ಇಂದುಶ್ರೀ, ಅತಿಥಿ ಶಿಕ್ಷಕರಾದ ಶ್ರೀ ನವೀನ್ ಹಾಗೂ ಬಾಡೇನಹಳ್ಳಿ ಅಂಗನವಾಡಿ ಸಹಾಯಕಿ ಶ್ರೀಮತಿ ಗೌರಮ್ಮ ಮತ್ತು ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ










Leave a Reply