ಕಾನೂನುಗಳ ಸಮಂಜಸ ಸದ್ಬಳಕೆಗೆ ನ್ಯಾಯಾಧೀಶೆ ಪುಷ್ಪಾವತಿ ಕರೆ

Spread the love
{“remix_data”:[],”remix_entry_point”:”challenges”,”source_tags”:[“local”],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“transform”:2},”is_sticker”:false,”edited_since_last_sticker_save”:true,”containsFTESticker”:false}

ತಿಪಟೂರು: ಕಾನೂನುಗಳು ನಮ್ಮ ಸುಖ ನೆಮ್ಮದಿ ರಕ್ಷಣೆಗಳಿಗಾಗಿ ಇವೆ ಅದನ್ನ ಸರಿಯಾದ ರೀತಿ ಸದ್ಬಳಕೆ ಮಾಡಿಕೊಳ್ಳಬೇಕೆ ಹೊರತು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಕಸಬಾ ಹೋಬಳಿಯ ನಾಗರಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜು ಮತ್ತು ಕಾನೂನು ಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಕಾನೂನು ಶಿಬಿರ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಗಂಡು ಮಕ್ಕಳು ಬೇಕು ಎಂಬ ಉದ್ದೇಶದಿಂದ ಮಹಿಳೆಯರಿಗೆ ಕಿರುಕುಳವನ್ನು ನೀಡಲಾಗುತ್ತಿದ್ದು ಅದಕ್ಕೆ ಶಿಶು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಎಂಬ ಕಾನೂನು ತರಲಾಗಿದೆ ಬಾಲ್ಯ ವಿವಾಹ ಪದ್ಧತಿಯು ಇನ್ನೂ ಜೀವಂತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಈ ಹಿಂದೆ ಮಹಿಳೆಗೆ ಆಸ್ತಿ ಹಕ್ಕು ಇರಲಿಲ್ಲ ಆದರೆ ಈಗ ಮಹಿಳೆಯು ಪುರುಷರ ಆಸ್ತಿ ಹಕ್ಕುಗಳಿಗೆ ಸರಿಸಮಾನವಾಗಿ ತನ್ನ ಆಸ್ತಿ ಹಕ್ಕುಗಳನ್ನು ಅನುಭವಿಸಲು ಕಾನೂನಿನ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.ಅಪ್ರಾಪ್ತ ವಯಸ್ಕರ ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ಕಿರುಕುಳಕ್ಕೆ ಪೋಕ್ಸೋ ಕಾಯ್ದೆ ಮೂಲಕ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ವರದಕ್ಷಿಣೆಯನ್ನು ಪಡೆಯುವುದು ಹಾಗೂ ವರದಕ್ಷಣೆಯನ್ನು ಕೊಡುವುದು ಎರಡೂ ಅಪರಾಧವಾಗಿದೆ.ಪತ್ನಿಯನ್ನು ಏಕವಚನದಲ್ಲಿ ಮಾತನಾಡಿಸುವುದು ಮತ್ತು ಉದ್ಯೋಗಕ್ಕೆ ತೆರಳುವುದನ್ನು ತಡೆಯುವುದು ಕೂಡ ಅಪರಾಧವಾಗುತ್ತದೆ ಆದರೆ ಇಂತಹ ಹಕ್ಕುಗಳಿಗೆ ನೋವಾಗಿರಬೇಕು ಅಂತಹ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದಾಗಿದೆ ಎಂದು ಶಿಬಿರಾರ್ಥಿಗಳಿಗೆ ಕಾನೂನು ಅರಿವು ಮೂಡಿಸಿದರು.

ನಾಗರಘಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಭಾಗ್ಯಮ್ಮ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಇಂತಹ ಒಂದು ಉಚಿತ ಕಾನೂನು ಶಿಬಿರ ಇದೇ ಪ್ರಥಮವಾಗಿದೆ ಗ್ರಾಮೀಣ ಭಾಗದ ಮಹಿಳೆಯರ ಹಕ್ಕುಗಳಿಗೆ ಅರಿವು ಮೂಡಿಸುತ್ತಿರುವುದು ಅರ್ಥಪೂರ್ಣವಾಗಿದೆ ನಮ್ಮ ಗೌರವಾನ್ವಿತ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿಯವರ ಎಲ್ಲಾ ಕಾನೂನು ಸಲಹೆಗಳನ್ನು ನಾವೆಲ್ಲರೂ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾನೂನು ಸಂವಾದವನ್ನು ನಡೆಸಲಾಗಿ ಶಿಬಿರಾರ್ಥಿಗಳು ತಮ್ಮ ಕಾನೂನು ಗೊಂದಲಗಳಿಗೆ ಸಂಬಂಧಿಸಿದಂತೆ ನ್ಯಾಯಾಧೀಶರಿಂದ ಪರಿಹಾರವನ್ನು ಸ್ಥಳದಲ್ಲೇ ಪಡೆದುಕೊಂಡರು ಹಾಗೂ ಕೆಲ ಕುಟುಂಬಗಳ ಕೌಟುಂಬಿಕ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಇತ್ಯರ್ಥ ಪಡಿಸಲು ಭರವಸೆಯನ್ನು ನೀಡಲಾಗಿತು.

ಕಾರ್ಯಕ್ರಮದಲ್ಲಿ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ, ನಾಗರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾಗ್ಯಮ್ಮ, ಸದರಿ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರುಗಳಾದ ಶ್ರೀಮತಿ ಬಿ.ಎಸ್.ಶೈಲ, ಶ್ರೀಮತಿ ಸುಮಿತ್ರಾ, ಶ್ರೀಮತಿ ಜೆ. ಪಂಕಜ, ಹಾಗೂ ಶ್ರೀ ಮೋಹನ್ ಕುಮಾರ್ ಬಿ.ಬಿ , ಶ್ರೀ ಕೆ.ವಿ. ವೆಂಕಟೇಶ್ ಮೂರ್ತಿ, ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ವಿನೀತ ಪಿ ಕೆ ಉಪಸ್ಥಿತರಿದ್ದರು ಮತ್ತು ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀ ಪ್ರಸನ್ನ ಕುಮಾರ್, ಎ ಆರ್ ಪುನೀತ್ ಕುಮಾರ್ ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ ಕಾನೂನು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸದರಿ ಕಾನೂನು ಶಿಬಿರದಲ್ಲಿ ಭಾಗವಹಿಸಿದ್ದರು.

ನಾಗರಘಟ್ಟ ಗ್ರಾಮ ಪಂಚಾಯಿತಿಯ ಉಚಿತ ಕಾನೂನು ಅರಿವು ನೆರವು ಶಿಬಿರ ಜಾಥದಲ್ಲಿ ಪಾಲ್ಗೊಂಡಿರುವ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜು ಕಾನೂನು ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ
ನಾಗರಘಟ್ಟ ಗ್ರಾಮ ಪಂಚಾಯಿತಿಯ ಉಚಿತ ಕಾನೂನು ಅರಿವು ನೆರವು ಶಿಬಿರ ಜಾಥದಲ್ಲಿ ಪಾಲ್ಗೊಂಡಿರುವ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜು ಕಾನೂನು ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ

ವರದಿ: ಸಂತೋಷ್ ಓಬಳ. ಗುಬ್ಬಿ

Leave a Reply

Your email address will not be published. Required fields are marked *

error: Content is protected !!