ಜನಿವಾರಕ್ಕೂ ಇದಿಯಾ ಜಸ್ಟೀಸ್ ಏನಿದು ಜನಿವಾರ ವಿವಾದ

Spread the love

ಕಳೆದ ದಿನಗಳಿಂದ ರಾಜ್ಯದಲ್ಲಿ ಜನಿವಾರದ ವಿವಾದ ಜೋರಾಗಿಯೇ ವ್ಯಾಪಿಸುತ್ತಿದೆ ಅಂದ ಹಾಗೆ ಜನಿವಾರ ಸುದ್ದಿ ಸ್ಪೋಟವಾಗಲು ಕಾರಣವನ್ನು ರಿವೆಂಡ್ ಮಾಡಿದಾಗ ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಜನಿವಾರ ತೆಗಿಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 4 ಮಂದಿಯನ್ನು ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಜಾಗೊಳಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ ಈ ಘಟನೆಯ ವಿವಾದ ಸ್ವರೂಪ ಪಡೆದುಕೊಂಡಾಗ ಕೆಇಎ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದು ಅದರಂತೆ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ ಬೀದರ್ ಜಿಲ್ಲೆಯಲ್ಲಿ ವಿದ್ಯಾರ್ಥಿಯನ್ನು ಜನಿವಾರ ತೆಗೆಸಿದ ಪ್ರಕರಣಕ್ಕೆ ಪರೀಕ್ಷಾ ಕೇಂದ್ರದ ಉಪ ನಿರ್ದೇಶಕ ಚಂದ್ರಶೇಖರ ಬೀರದರ ಮತ್ತು ಸಿಬ್ಬಂದಿ ಸತೀಶ್ ಪವಾರ ಸಿ ಅವರನ್ನು ಜಿಲ್ಲಾಧಿಕಾರಿಯವರು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದರು. ಇಷ್ಟೆಲ್ಲವೂ ಕೂಡ ಜನಿವಾರವನ್ನ ಕತ್ತರಿಸಿದ ಕಿಡಿಯು ರಾಜಕೀಯ ಬೆಳವಣಿಗೆ ಸ್ವರೂಪ ಪಡೆದಿರುವುದು ವಿಪರ್ಯಾಸವೇ ಸರಿ.
ಈ ಹಿಂದೆಯೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿತ್ತು ಅದರಲ್ಲಿ 2021 ಅಕ್ಟೋಬರ್ 3 ರಂದು 545 ಸಬ್ ಇನ್ಸ್ಪೆಕ್ಟರ್ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆದಿತ್ತು ಆಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದರು ಪರೀಕ್ಷಾ ಕೇಂದ್ರದೊಳಗೆ ಬ್ಲೂಟೂತ್ ಸಾಧನಗಳನ್ನು ಅಳವಡಿಸಿಕೊಂಡು ಅಕ್ರಮವಾಗಿ ಪರೀಕ್ಷೆ ಬರೆದು ದೊಡ್ಡ ಸುದ್ದಿ ಆಗಿದ್ದು ನಾವೆಲ್ಲರೂ ಕಣ್ಣು ತುಂಬಿಕೊಂಡಿದ್ದೇವೆ.
ಅಂದ ಹಾಗೆ ಹಿಂದೂ ಧಾರ್ಮಿಕ ನೆಲಗಟ್ಟಿನಲ್ಲಿ ಜನಿವಾರಕ್ಕೆ ಇರುವ ಮಹಾತ್ವವಾದರೂ ಏನು?

ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿಯ ಜನದಿಂದ ಹಿಡಿದು ಮರಣದವರೆಗೆ 16 ವಿಧಿಗಳನ್ನು ಅಳವಡಿಸಲಾಗಿದೆ. ಈ ವಿಧಿಗಳು ನಮ್ಮ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಈ 16 ವಿಧಿಗಳಲ್ಲಿ ಒಂದು ಜನಿವಾರ ಧಾರಣ ಸಂಸ್ಕಾರ ಅಥವಾ ಉಪನಯನ ಸಂಸ್ಕಾರ. ಇದನ್ನು ಯಜ್ಞೋಪವೀತ ಎಂದೂ ಕೂಡ ಕರೆಯಲಾಗುತ್ತದೆ. ಅಂದರೆ ಯಜ್ಞವನ್ನು ನಡೆಸಬಲ್ಲ ಸಂಪೂರ್ಣ ಹಕ್ಕನ್ನು ಹೊಂದಿದವನು ಎಂದರ್ಥ. ಜನಿವಾರ ಧಾರಣೆಯನ್ನೇ ಸಂಸ್ಕೃತದಲ್ಲಿ ಯಜ್ಞೋಪವೀತವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಯಜ್ಞೋಪವೀತ ಧರಿಸದೇ ಯಾರಿಗೂ ಕೂಡ ವೇದಗಳನ್ನು ಪಠಿಸುವ ಅಥವಾ ಗಾಯತ್ರಿ ಮಂತ್ರವನ್ನು ಜಪಿಸುವ ಹಕ್ಕಿರುವುದಿಲ್ಲ.ಬ್ರಹ್ಮಸೂತ್ರ, ವ್ರತಬಂದ, ಜಲಬಂದ ಮತ್ತು ಯಜ್ಞ ಸೂತ್ರವೆಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಯಜ್ಞೋಪವೀತವನ್ನು ಜನಿವಾರವೆನ್ನುತ್ತಾರೆ.
ಉಪನಯನದ ನಂತರ ಜನಿವಾರವನ್ನು ಧರಿಸಲಾಗುತ್ತದೆ.
ಉಪನಯನ ಎಂದರೆ ಹತ್ತಿರಕ್ಕೆ ತರುವುದು ಎಂದರ್ಥ.
ಅಂದರೆ ಜನಿವಾರವನ್ನು ಧರಿಸಿದ ವ್ಯಕ್ತಿಯು ಬ್ರಹ್ಮ ಜ್ಞಾನವನ್ನು ಪಡೆಯುತ್ತಾನೆ ಎಂಬ ಅರ್ಥವನ್ನ ಸೂಚಿಸುತ್ತದೆ, ಜನಿವಾರ ಧರಿಸಿದವರು ಬ್ರಹ್ಮನಿಗೆ ಹತ್ತಿರವಾಗುತ್ತಾರೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಇದೆಲ್ಲವೂ ಕೂಡ ಜನಿವಾರದ ಧಾರ್ಮಿಕ ಸತ್ವವನ್ನು ಸಾರುತ್ತದೆ.
ನಮ್ಮ ಭಾರತೀಯ ಸಂವಿಧಾನ ಹಲವಾರು ಜಾತಿ ಧರ್ಮಗಳ ನಡುವೆ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ಜಾತ್ಯತೀತ ರಾಷ್ಟ್ರ ಎಂಬುದನ್ನ ಮತ್ತೊಮ್ಮೆ ಕ
ಖಚಿತಪಡಿಸಿಕೊಳ್ಳುಬೇಕಾಗುತ್ತದೆ. ಯಾವುದೇ ಧರ್ಮದ ಸಂಪ್ರದಾಯ ಆಚಾರ ವಿಚಾರ ಸಂಸ್ಕೃತಿ ಮತ್ತು ಧಾರ್ಮಿಕ ಸಂಕೇತಗಳನ್ನ ಯಾವ ತಾರತಮ್ಯವಿಲ್ಲದೆ ಸಂವಿಧಾನಿಕ ಮನ್ನಣೆಯನ್ನು ಪಡೆಯುತ್ತವೆ. ಆಗಿದ್ದರು ಹಿಂದೂ ಧರ್ಮದ ಧಾರ್ಮಿಕ ಸಂಕೇತವನ್ನು ಪರೀಕ್ಷಾ ಕೇಂದ್ರದಲ್ಲಿ ಅನುಮತಿಸದೆ ತೆಗಿಸಿದರು ಎಂಬ ವಿವಾದ ಮುಸ್ಲಿಂ ಧರ್ಮದ ಹಿಜಾಬ್ ವಸ್ತ್ರವನ್ನು ಅನುಮತಿಸಲು ಯಾಕೆ ವ್ಯಾಪಿಸಿಲ್ಲ ಅನ್ನುವುದಕ್ಕೆ ರಾಜಕೀಯ ಬೆಳವಣಿಗೆ ಉನ್ನಾರ ಎಂಬುದನ್ನು ಮತ್ತೊಮ್ಮೆ ಅರ್ಥೈಸಿಕೊಳ್ಳಬೇಕಾದ ಅಗತ್ಯವಿಲ್ಲ.
ಈ ಹಿಂದೆ ಕರ್ನಾಟಕದಲ್ಲಿ ಕೆಲವು ಶಾಲಾ ಕಾಲೇಜುಗಳಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಈಜಾಬ್ ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್ ನ ತೀರ್ಪನ್ನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಮುಸ್ಲಿಂ ಪರ ಹಿರಿಯ ವಕೀಲ ದೇವದತ್ ಕಾಮತ್ ಸಂವಿಧಾನದ 19(1) ಎ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಪರಿಚ್ಛೇದದ ಅನುಸಾರ ತಾವು ಧರಿಸುವ ಉಡುಪನ್ನ ಆಯ್ಕೆ ಮಾಡುವ ಸ್ವಾತಂತ್ರ್ಯ ಇದೆ ಅಲ್ಲದೆ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕು ಪಡೆಯಲು ಅವರ ಮೂಲಭೂತ ಹಕ್ಕುಗಳನ್ನು ಬಲಿ ಕೊಡಬೇಕೆ ಎಂದು ಪ್ರಶ್ನಿಸಿ ವಿದ್ಯಾರ್ಥಿಗಳು ಧರಿಸುವುದು ಬುರ್ಖಾ ಅಲ್ಲ ಅವರು ಧರಿಸುವುದು ಹಿಜಾಬ್ ಇದು ಕೇವಲ ಕತ್ತಿನ ಮೇಲೆ ಹಾಕುವ ಸ್ಕಾರ್ಫ್ ಇತರೆ ಧರ್ಮದ ವಿದ್ಯಾರ್ಥಿಗಳು ಕೂಡ ತಿಲಕ,ರುದ್ರಾಕ್ಷಿ, ಕ್ರಾಸ್ ಇತ್ಯಾದಿಗಳನ್ನು ಧರಿಸುತಿದ್ದಾರೆ ಎಂದು ವಾದಿಸಿದ್ದರು.
ಸುಪ್ರೀಂ ತೀರ್ಪು “ನೀವು ಉಡುಪು ಧರಿಸುವುದು ಮೂಲಭೂತ ಹಕ್ಕು ಎಂದು ವಾದಿಸಿದರೆ ಉಡುಪು ಧರಿಸದೆ ಇರುವುದು ಸಹ ಮೂಲಭೂತ ಹಕ್ಕು ಆಗುತ್ತದೆ ಎಂದು ಹೇಳಿತ್ತು .
ಆ ಬಳಿಕ ಸುಪ್ರೀಂ ಕೋರ್ಟ್ ತಡೆ ಬಿದ್ದು ತನಿಖೆ ನಡೆಯುತ್ತಿದೆ , ಇದಾದ ಬಳಿಕ ಜನಿವಾರ ತೆಗೆಸಿದ ಪ್ರಕರಣಕ್ಕೆ ವಿರೋಧ ವ್ಯಕ್ತಪಡಿಸಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥ ಸ್ವಾಮೀಜಿಯವರು “ಜನಿವಾರ ಎಂಬುದು ಧರ್ಮ ,ಸಂಪ್ರದಾಯ ಹಾಗೂ ಬ್ರಾಹ್ಮಣ ತತ್ವದ ಪ್ರತೀಕವಾಗಿದೆ ಜನಿವಾರ ತೆಗಿಸಿದ್ದರಿಂದ ವಿದ್ಯಾರ್ಥಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಇದು ಸಂವಿಧಾನ ವಿರೋಧಿ ನಡೆಯಾಗಿದೆ ಸಂವಿಧಾನದಲ್ಲಿ ಎಲ್ಲಾ ಧರ್ಮವನ್ನು ಆಚರಿಸುವ ಅವಕಾಶ ಕಲ್ಪಿಸಲಾಗಿದೆ ಆದರೆ ಈ ಘಟನೆಯಲ್ಲಿ ಧರ್ಮವಿರೋಧಿ ನೀತಿ ಅನುಸರಿಸಲಾಗಿದೆ ಇಂತಹ ದ್ವಂದ್ವ ನಿಲುವು ಖಂಡನೀಯ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಪ್ರತಿರೋಧಿಗಳು ಪ್ರತಿಬಿಂಬಿಸಿದ್ದು
ಶಿಕ್ಷಣ ತಜ್ಞ ಶ್ರೀ ಪಾದ ಭಟ್ ಉದ್ದೇಶ ಪೂರ್ವಕವಾಗಿ ಕೆಲವರು ಜನಿವಾರ ಸಂಗತಿಯನ್ನು ರಾಜಕೀಯ ಮಾಡುತ್ತಿದ್ದಾರೆ ಹಿಜಾಬ್ ವಿವಾದವಾದಗ ಇವೆರೆಲ್ಲಾ ಎಲ್ಲಿದ್ದರೂ ಪರೀಕ್ಷಾ ದೃಷ್ಟಿಯಿಂದ ಇದೆಲ್ಲ ಆಗಿದೆ ಎಂಬುದನ್ನ ನಾವು ಗಮನಿಸಬೇಕು ಈಗ ಪರೀಕ್ಷೆಗಳಲ್ಲಿ ಸಾಕಷ್ಟು ಅಕ್ರಮಗಳು ಆಗುತ್ತಿವೆ ಇದನ್ನ ತಡೆಯಲು ಅಷ್ಟೇ ಜನಿವಾರಗಳು ತೆಗಿಸಲಾಗಿದೆ ಇದರಲ್ಲಿ ಯಾವ ಹೆಚ್ಚುಗಾರಿಕೆ ಇಲ್ಲ ಹೆಣ್ಣು ಮಕ್ಕಳ ಕಿವಿಯೋಲೆಗಳನ್ನು ತೆಗೆಯಿಸಿ ಪರೀಕ್ಷಾ ಕೇಂದ್ರಗಳಿಗೆ ಬಿಡಲಾಗಿತ್ತು ಜನಿವಾರ ಇದ್ದ ಮಾತ್ರಕ್ಕೆ ಆ ವಿದ್ಯಾರ್ಥಿಗಳಿಗೆ ವಿಶೇಷ ಹಕ್ಕು ಕಲ್ಪಿಸಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ ಅದೇನೆ ಇದ್ದರೂ ಜನವರ ತೆಗೆಸಿದ ಪ್ರಕರಣವು ಪರೀಕ್ಷಾ ಅಕ್ರಮಗಳನ್ನು ತಡೆಯುವುದು ಆಗಿದ್ದು
ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ವಿರೋಧಿ ಪಕ್ಷವೂ ಪ್ರಕರಣವನ್ನು ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿಲು ಹೊರಟಿದೆ ಆಡಳಿತ ಪಕ್ಷವು ಕಿವಿ, ಓಲೆ, ಜನಿವಾರ, ತಾಳಿ ಮುಟ್ಟದಂತೆ ಪರೀಕ್ಷಾ ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಿದೆ ,
ಇಷ್ಟೆಲ್ಲ ಜನಿವಾರ ಪ್ರಕರಣಕ್ಕೆ ಆದ ಬೆಳವಣಿಗೆ ಬೇರೆ ಧರ್ಮದವರಿಗೂ ಬೀರ ಬೇಕಲ್ಲವೇ?

ಲೇಖನ: ಸಂತೋಷ್ ಓಬಳ. ಸಹ ಸಂಪಾದಕರು

Leave a Reply

Your email address will not be published. Required fields are marked *

error: Content is protected !!