ಕೆರೆಗೋಡಿ ಅಜ್ಜಯ್ಯನ ಜನ್ಮವರ್ಧಂತಿ ಮಹೋತ್ಸವದಲ್ಲಿ ಭಕ್ತಿಭಾವಪರವಶರಾದ ಭಕ್ತಗಣ:ಶ್ರೀಗಳ ಜನ್ಮವರ್ಧಂತಿ ಅಂಗವಾಗಿ ಗಣ್ಯರಿಂದ ಗೌರವ ಸಮರ್ಪಣೆ

Spread the love

ತಿಪಟೂರು : ತಾಲ್ಲೂಕಿನ ಕಸಬಾ ಹೋಬಳಿಯ ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರು,ತ್ರಿವಿಧ ದಾಸೋಹ ಮೂರ್ತಿ,ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿಯವರ 73 ನೇ ಜನ್ಮವರ್ದಂತಿ ಮಹೋತ್ಸವವನ್ನು ಶ್ರೀಮಠದಿಂದ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಶ್ರೀಗುರು ಪರದೇಶಿಕೇಂದ್ರ ಮಹಾಸ್ವಾಮಿಗಳ 73 ಜನ್ಮವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀಮಠದ ಆರಾಧ್ಯದೈವ ಶ್ರೀಶಂಕರೇಶ್ವರಸ್ವಾಮಿ ಹಾಗೂ ಶ್ರೀ ರಂಗನಾಥ ಸ್ವಾಮಿ ರವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಯಿತು,ಶ್ರೀಮಠದ ಆರುಜನ ಪವಾಡಪುರುಷ ಪೂಜ್ಯಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ ನೆರವೇರಿಸಲಾಯಿತು
ಶ್ರೀಗುರುಪರದೇಶಿಕೇಂದ್ರ ಅಜ್ಜಯ್ಯನವರ ಪಾದಪೂಜೆ ನೆರವೇರಿಸಿ ಮಠದ ಭಕ್ತರು,ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಮಠದ ಆವರಣದಲ್ಲಿ ಆಯೋಜಿಸಿದ ಸರಳ ಹಾಗೂ ಸಂಪ್ರದಾಯಿಕ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿ ಶ್ರೀಮಠವು ಭಕ್ತರ ಸಹಕಾರದಿಂದ ಹಿರಿಯ ಪರಮಪೂಜ್ಯರ ಆರ್ಶೀವಾದದಿಂದ ಕ್ಷೇತ್ರಾಧೀಪತಿ ಶಂಕರೇಶ್ವರ, ರಂಗನಾಥಸ್ವಾಮಿಯ ಹಾಗೂ ಮಠದ ಮಹಾಮಹಿಮರ ಅನುಗ್ರಹ ಹಾಗೂ ಪ್ರೇರಣಾ ಶಕ್ತಿಯಿಂದ ಕ್ಷೇತ್ರ ಬೆಳವಣಿಗೆ ಕಾಣುತ್ತಿದೆ.ಶ್ರೀ ಕ್ಷೇತ್ರದೈವಗಳ ಅರಸಿಬರುವ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸುತ್ತಿದೆ.

ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ ಮತ ಬೇಧವಿಲ್ಲದೆೆ ಎಲ್ಲರಿಗೂ ಒಂದೇ ರೀತಿಯಲ್ಲಿ ಕಾಣಲಾಗುತ್ತಿದ್ದು, ಪ್ರಕೃತಿಯಲ್ಲಿ ಗಾಳಿ, ಬೆಳಕನ್ನು ಎಲ್ಲರೂ ಉಪಯೋಗಿಸುವಂತೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಇರಬೇಕಾಗಿದೆ. ಇಂದಿನ ದಿನದಲ್ಲಿ ವೈಜ್ಞಾನಿಕ ಯುಗದಲ್ಲಿ ವಿಶೇಷವಾಗಿ ವೇಗವಾಗಿ ಯೋಚನೆಗಳನ್ನು ಮಾಡುವಂತಹ ಕಾಲವಾಗಿದೆ. ಹಿಂದಿನ 50 ವರ್ಷಗಳ ಕಾಲದಲ್ಲಿ ಗ್ರಾಮಗಳಲ್ಲಿ ದೇವಸ್ಥಾನಗಳು ಹಾಳು ಬಿದ್ದದ್ದವು ಆದರೆ ಇಂದು ನವೀಕರಣಗೊಳ್ಳುತ್ತಿರುವ ದೇವಾಸ್ಥಾನಗಳಿಂದ ನಮಗೆ ಖುಷಿ ತಂದಿದೆ.

ಶ್ರೀಮಠವು ಆಲದ ಮರವಿದ್ದಂತೆ ಬೆಳೆಯುತ್ತಿದ್ದು ಎಲ್ಲರಿಗೂ ಸಹಕಾರ ನೀಡಲಾಗುತ್ತಿದೆ, ಎಲ್ಲರೂ ದಾಸೋಹದ ಚಿಂತನೆ ಮೂಲಕ ದಾನ ಧರ್ಮ, ಪರೋಪಕಾರ ಮಾಡುವಂತಹ ಗುಣಗಳನ್ನು ಬೆಳಸಿಕೊಂಡು ಹೋಗಬೇಕು, ಕಾಯಕ ಹಾಗೂ ದಾಸೋಹವು ಒಂದು ನಾಣ್ಯದ ಎರಡು ಮುಖವಿದ್ದಂತೆ, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಗಳನ್ನು ಮಾಡಬೇಕು ಎಂದರು.

ಮಾಡಾಳು ವಿರಕ್ತಮಠದ ಶ್ರೀರುದ್ರಮುನಿ ಸ್ವಾಮಿಜಿ ಮಾತನಾಡಿ ಹರ ಮುನಿದರೂ ಗುರು ಕಾಯುವವನು ಎಂಬ ವಾಕ್ಯದಂತೆ ಶ್ರೀಮಠದಲ್ಲಿ ಗುರುವಿನ ಆರ್ಶೀವಾದದಿಂದ ಕೆರಗೋಡಿ ರಂಗಾಪುರ ಮಠವು ಸಮಾಜ ಮುಖಿಯಾಗಿ ಬೆಳೆಯುತ್ತಿದೆ. ಹಿರಿಯ ಶ್ರೀಗಳು ಹಾಕಿಕೊಟ್ಟ ತಮ್ಮ ಪವಾಡ ಶಕ್ತಿ ಹಾಗೂ ಮಠ ಪರಂಪರೆ ಮುಂದುವರೆಸುವ ಜೊತೆ
ತ್ರಿವಿಧ ದಾಸೋಹ ಕ್ಷೇತ್ರವಾಗಿಸುವತ್ತ ಮುಂದಡಿ ಇಟ್ಟಿದ್ದಾರೆ,ಇಂದು ಸರ್ಕಾರವು ಮಕ್ಕಳ ವಿದ್ಯಾಭ್ಯಾಸಕ್ಕೆ ಜಾತಿ ಆಧಾರಿತವಾಗಿ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡುತ್ತಿವೆ ಆದರೆ ಸಿರಿಗೆರೆ, ಸುತ್ತೂರು, ಸಿದ್ದಗಂಗಾ ಮಠಗಳಂತೆ ಶ್ರೀಮಠವು ಸೇರಿದಂತೆ ಮೊದಲೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯಗಳನ್ನು ತೆರೆದು, ಶಾಲೆಗಳನ್ನು ಪ್ರಾರಂಭಿಸಿ ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವವನ್ನು ಸಮಾನವಾಗಿ ಕಾಣುತ್ತಿವೆ.
ಮಠ ಮಾನ್ಯಗಳು ಕಾಯಕ ದಾಸೋಹಕ್ಕೆ ಹೆಚ್ಚು ಒತ್ತು ನೀಡಿದ್ದು ಅನ್ನ ದಾಸೋಹ ಜೊತೆ ಜ್ಞಾನ ದಾಸೋಹವನ್ನು ನಡೆಸುತ್ತ ಬಂದಿವೆ. ಮಕ್ಕಳ ಆಶ್ರಯಕ್ಕಾಗಿ 25 ವರ್ಷಗಳ ಹಿಂದೆ ಬೆಳ್ಳಿಭವನವನ್ನು ನಿರ್ಮಾಣ ಮಾಡಲಾಗಿದೆ ಅದರಂತೆ ಮುಂದಿನ ದಿನದಲ್ಲಿ ಮಹಾಮನೆಯನ್ನು ನಿರ್ಮಾಣ ಮಾಡಬೇಕಾಗಿದೆ. ಕಾಣಿಕೆಯನ್ನು ಎಷ್ಟೂ ಬೇಕಾದರೂ ಅರ್ಪಣೆ ಮಾಡಬಹುದಾಗಿದೆ ಅದರಂತೆ ಆಯುಷ್ ಆರೋಗ್ಯವನ್ನು ಭಗವಂತನೇ ನೀಡಬೇಕಾಗಿದೆ ಎಂದರು.

ಜನ್ಮವರ್ದತಿ ಸಂದರ್ಭದಲ್ಲಿ ರೋಟರಿ ಸಂಸ್ಥೆವತಿಯಿAದ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು ನೆರೆದಿದ್ದ ಸಾವಿರಾರು ಭಕ್ತರಿಗೆ ಕಡಲೆಕಾಳು ಉಸಲಿ, ಪಾಯಸ, ಬಾದೋಷ, ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಗೋಡೆಕೆರೆ ಮೃತ್ಯುಂಜಯದೇಶಿಕೇAದ್ರ ಸ್ವಾಮೀಜಿ, ಶಾಸಕ ಕೆ.ಷಡಕ್ಷರಿ, ಮಾಜಿ ಸಚಿವ ಬಿ.ಸಿ.ನಾಗೇಶ್, ಮಾಜಿ ಶಾಸಕ ನಂಜಾಮರಿ, ನಿವೃತ್ತ ಎಸಿಪಿ ಲೋಕೇಶ್ವರ್, ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ, ಜೆಡಿಎಸ್ ಮುಖಂಡ ಶಾಂತಕುಮಾರ್, ಉದ್ಯಮಿ ಶಿವಪ್ರಸಾದ್, ಡಾ.ಶ್ರೀಧರ್, ಡಾ.ಮಧುಸೂಧನ್, ಹಿರಿಯ ಕ್ಷೇತ್ರಾಭಿಮಾನಿಗಳ ಸಂಘದ ಅದ್ಯಕ್ಷ ಶಿವಪ್ಪ, ರೋಟರಿ ಸಂಸ್ಥೆ ಅಧ್ಯಕ್ಷ ಗವಿಯಣ್ಣ, ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು

ವರದಿ :ಮಂಜುನಾಥ್ ಹಾಲ್ಕುರಿಕೆ

Leave a Reply

Your email address will not be published. Required fields are marked *

error: Content is protected !!