: ಮಾದಿಗ ಜನಾಂಗದಲ್ಲಿ ಹುಟ್ಟಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ದೇಶದ ಎರಡು ಕಣ್ಣುಗಳಂತೆ. ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಮಾದಾರ ಮಹಾಸಭಾ ಅಧ್ಯಕ್ಷರಾದ ಕೊಪ್ಪ ಶಾಂತಪ್ಪ ತಿಳಿಸಿದರು.
ನಗರದ ಆದಿಜಾಂಬವ ಮಹಾಸಭಾ ಕಚೇರಿಯಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬುಜಗಜೀವನ್ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು . ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಇಬ್ಬರೂ ಮಾದಿಗ ಜನಾಂಗದಲ್ಲಿ ಹುಟ್ಟಿದ ಮಹಾನ್ ಚೇತನಗಳು. ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಸ್ಪೃಷ್ಯತೆಯನ್ನು ಅನುಭವಿಸಿದ ಅವರು, ನಾವು ಅನುಭವಿಸಿದ ನೋವನ್ನು ನಮ್ಮ ದೇಶದ ಜನಾಂಗ ಅನುಭವಿಸಬಾರದು ಎಂಬ ಉದ್ದೇಶದಿಂದ ಶೋಷಿತರಿಗೆ ಶಕ್ತಿ ನೀಡಿದರು ಎಂದು ತಿಳಿಸಿದರು.

ಆದಿಜಾಂಬವ ವಿವಿಧೋದೇಶ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹದೇವಯ್ಯ ಮಾತನಾಡಿ, ಡಾ. ಜಗಜೀವನ್ ರಾಮ್ ದೇಶದ ಉಪಪ್ರಧಾನ ಮಂತ್ರಿಯಾಗಿ ದೇಶದಲ್ಲಿ ಹಸಿವಿನಿಂದ ಬಳಲುತ್ತಿದ್ದ ಪರಿಸ್ಥಿತಿಯನ್ನು ಬದಲಾಯಿಸಲು ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಅಳವಡಿಸುವ ಮೂಲಕ ಹಸಿರು ಕ್ರಾಂತಿಗೆ ಕಾರಣರಾದರು. ಕಾರ್ಮಿಕ ಕ್ಷೇತ್ರದಲ್ಲೂ ಹಲವಾರು ಕ್ರಾಂತಿಕಾರಿ ಬೆಳವಣಿಗೆಗಳನ್ನು ತರಲು ಅವರು ಕಾರಣರಾಗಿದ್ದು, ಕೋಟ್ಯಾಂತರ ಜನರ ಬದುಕಿನಲ್ಲಿ ಬೆಳಕಾಗಿದ್ದಾರೆ. ಅವರ ಆದರ್ಶಗಳನ್ನು ಸಮುದಾಯ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಕಲಾವಿದ ಮತ್ತಿಹಳ್ಳಿ ಚಿಕ್ಕಣ್ಣ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಕುಪ್ಪಾಳು ರಂಗಸ್ವಾಮಿ, ಸಹಕಾರ ಸಂಘದ ಉಪಾಧ್ಯಕ್ಷ ಶಂಕರಪ್ಪ, ಪಟ್ಟಾಭಿರಾಮ್, ಯಗಚೀಕಟ್ಟೆ ರಾಘವೇಂದ್ರ, ಬಿಳಿಗೆರೆ ಚಂದ್ರಶೇಖರ್, ಗಾಂಧಿನಗರ ಬಸವರಾಜು, ರಾಜಶೇಖರ್, ತಿಪಟೂರು ಕೃಷ್ಣ, ಗ್ಯಾರಘಟ್ಟ ಹೊನ್ನಪ್ಪ, ಬಾಗುವಾಳ ಲಿಂಗರಾಜು, ಮತ್ತಿಘಟ್ಟ ಶಿವಕುಮಾರ್, ಜಗದಾರ್ಯಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ






