Spread the love

ತಿಪಟೂರು:ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲ್ಲೋಕು ಆಡಳಿತದಿಂದ 77ನೇ ಗಣರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಯಿತು.
ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ರಾಷ್ಟ್ರಧ್ವಜಾರೋಹಣ ನೆರವೇರಿಸಿ,ಪೊಲೀಸ್. ಎನ್.ಸಿ.ಸಿ .ಗೃಹರಕ್ಷಕ ದಳ,ಸ್ಕೌಟ್ಸ್&ಗೈಡ್ಸ್ ಸೇರಿದಂತೆ ವಿವಿಧ ಶಾಲಾ ತುಕ್ಕಡಿಗಳಿಂದ ಧ್ವಜವಂದನೆ ಸ್ವೀಕರಿಸಿದರು.
ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿಗಳು,
ನಮ್ಮ ದೇಶದ ಸ್ವಾಂತತ್ರ್ಯಕ್ಕಾಗಿ ಹೋರಾಟ ಮಾಡಿದವರು ಗಾಂಧೀಜಿ ಮತ್ತು ಅನೇಕರಿದ್ದಾರೆ , ಈ ಪೈಕಿ ಬ್ರಿಟಿಷರ ವಿರುದ್ಧ ನಮ್ಮ ನುಡಿಗಾಗಿ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿದ ಸಂಗೊಳ್ಳಿ ರಾಯಣ್ಣ ರವರನ್ನು ಈ ದಿನ ನಾವೆಲ್ಲರೂ ಸ್ಮರಿಸೋಣ .


ಪ್ರಜಾಪ್ರಭುತ್ವ ಮಾದರಿಯ ಸರ್ಕಾರಕ್ಕೆ ಆಡಳಿತಾತ್ಮಕವಾದ ನಿಯಮಗಳನ್ನು ರೂಪಿಸಿ ಒಂದು ಶ್ರೇಷ್ಟವಾದ ಗ್ರಂಥದ ರೂಪದಲ್ಲಿ ಸಂವಿಧಾನವನ್ನು ರಚಿಸಿಕೊಟ್ಟವರು ಡಾ . ಬಿ.ಆರ್.ಅಂಬೇಡ್ಕರ್ ರವರು . ಅಂತಹ ಮಹಾನ್
ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಯಿತು . ಎಲ್ಲರೂ ಒಪ್ಪಿ 1950 ನೇ ಜನವರಿ 26 ರಂದು ಜಾರಿಗೆ ತರಲಾಯಿತು . ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತಿದೆ . ಸಂವಿಧಾನವೆಂದರೆ ಭಾರತದ ಎಲ್ಲಾ ನಾಗರೀಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ರಚಿಸಲಾಗಿರುವ ಕಾಯ್ದೆ , ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ . ಇಲ್ಲಿ ಕಾನೂನುಎಲ್ಲರಿಗೂ ಸಮಾನವಾಗಿದೆ .
ಇಂದು ನಮ್ಮ ದೇಶ ಶಿಕ್ಷಣ , ವಿಜ್ಞಾನ , ಮಾಹಿತಿ ತಂತ್ರಜ್ಞಾನ , ಅಧ್ಯಾತ್ಮ , ಯೋಗ , ಸಂಸ್ಕೃತಿ , ಆರೋಗ್ಯ , ಧರ್ಮ , ರಕ್ಷಣೆ , ರಾಜಕೀಯ ಕ್ಷೇತ್ರಗಳಲ್ಲಿ ಅತ್ಯದ್ಭುತ ಸಾಧನೆ ಮಾಡಿದೆ , ಜಗತ್ತೇ ನಮ್ಮ ದೇಶದ ಕಡೆಗೆ ನೋಡುತ್ತಿದೆ . ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು , ಪ್ರಜೆ ಸಾರ್ವಭೌಮರಾಗಿದ್ದು , ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಯಕನನ್ನು ಆಯ್ಕೆಮಾಡುವ ಜವಾಬ್ದಾರಿಯು ನಮ್ಮಗಳ ಮೇಲೆ ಇರುತ್ತದೆ . 18 ವರ್ಷ ತುಂಬಿದ ಅರ್ಹ ಪ್ರತಿಯೊಬ್ಬ ಭಾರತೀಯನು ಸಹ ಮತದಾರರ ಪಟ್ಟಿಗೆ ತಮ್ಮ ಹೆಸರನ್ನುನೋಂದಾಯಿಸಿಕೊಂಡು , ನಮ್ಮ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ನಿರ್ಲಕ್ಷಿಸದೆ , ಎಲ್ಲರೂ ತಪ್ಪದೇ ಮತದಾನವನ್ನು ಮಾಡುವ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು . ಜನವರಿ 25 ರಂದು ಮತದಾರರ ದಿನವನ್ನು ಆಚರಣೆ ಮಾಡುವ ಮೂಲಕ ಮತದಾನದ ಹೊಸದಾಗಿ ನೋಂದಣಿಯಾಗಿರುವ ಯುವ ಮತದಾರರಿಗೆ ಗುರುತಿನ ಚೀಟಿಯನ್ನು ನೀಡಿ , ಅವರಿಗೆ ಮತದಾನದ ಬಗ್ಗೆ ಅರಿವನ್ನು ನೀಡಲಾಗಿರುತ್ತದೆ . ಆದುದರಿಂದ ನಾಗರಿಕ ಬಂಧುಗಳ ನಾವೆಲ್ಲ ದೇಶಕ್ಕಾಗಿ ದುಡಿದು ಹುತಾತ್ಮರಾಗಿರುವವರಿಗೆ ಗೌರವ , ದುಡಿಯುತ್ತಿರುವವರಿಗೆ ಬೆಂಬಲ , ಸಹಕಾರ , ದುಡಿಯುವ ಮನಸ್ಸಿರುವವರಿಗೆ ಪ್ರೋತ್ಸಾಹ ನೀಡುತ್ತಾ ನಮ್ಮಲ್ಲಿನ ಎಲ್ಲ ಗೊಂದಲ , ತಾರತಮ್ಯ , ಭೇದಭಾವಗಳನ್ನು ಬದಿಗಿಟ್ಟು ಸರ್ಕಾರದ ಜೊತೆಗೆ ಕೈಜೋಡಿಸಿ ನಮ್ಮ ದೇಶವನ್ನು ಸುಭದ್ರವನ್ನಾಗಿಸಲು ಸಂಕಲ್ಪ ಮಾಡಬೇಕೆಂದು ತಿಳಿಸಿ.


ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಹಲವಾರು ಮಹನೀಯರ ತ್ಯಾಗ ಬಲಿದಾನದಿಂದ ಗಳಿಸಿರುವ ನಮ್ಮ ಭವ್ಯಭಾರತದಲ್ಲಿ ಹಲವಾರು ರಾಜ್ಯವಾರು ಪ್ರಾಂತ್ಯವಾರು ವಿಂಗಡಣೆಯಾಗಿದ,ಭಾರತವನ್ನ ಒಕ್ಕೂಟ ವ್ಯವಸ್ಥೆಯಲ್ಲಿ ಒಗ್ಗೂಡಿಸಿದ್ದು,ನಮ್ಮ ದೇಶಕ್ಕೆ ಪ್ರತ್ಯೇಕವಾಗಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚಿಸಿ ಅರ್ಪಿಸಿಕೊಂಡಿದ್ದು.ಪ್ರತಿಯೊಬ್ಬ ಭಾರತೀಯನೂ ಅನುಸರಿಸುತ್ತಿದ್ದೇವೆ.ದೇಶದ ಕಾನೂನು ಗೌರವಿಸುವ ಮೂಲಕ ಭಾರತೀಯರೆಲ್ಲ ಒಂದೇ ಎನ್ನುವ ಭಾವನೆ ರೂಢಿಸಿಕೊಳ್ಳಬೇಕು.ಭಾರತ ಮಾತೆಯ ಮಕ್ಕಳಾದ ನಮಗೆ ಸಂವಿಧಾನವೆ ಶ್ರೇಷ್ಠ ಗ್ರಂಥ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಿಪಟೂರು ಡಿವೈಎಸ್ಪಿ ಯಶ್ ಕುಮಾರ್ ಶರ್ಮ.ತಹಸೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್.ಪೌರಾಯುಕ್ತ ವಿಶ್ವೇಶ್ವರ ಬದರಗಡೆ.ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್ .ಸೇರಿದಂತೆ ಅನೇಕರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!