ತಿಪಟೂರು : ನಗರದ ತಾಲೂಕು ಆಡಳಿತ ಕಛೇರಿಯಲ್ಲಿ 286ನೇ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಯಾವ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳವಣಿಗೆ ಆಗುವುದಿಲ್ಲವೋ ಆ ಸಮಾಜ ಮುಖ್ಯ ವಾಹಿನಿಗೆ ಬರುವುದಿಲ್ಲ. ಆದ್ದರಿಂದ ಎಲ್ಲಾ ಸಮಾಜದವರೂ ಕಡ್ಡಾಯವಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕು ಸೇವಾಲಾಲ್ ಲಂಬಾಣಿ ತಾಂಡ್ಯಾಗಳನ್ನು ಕಂದಾಯ ಗ್ರಾಮ ಮಾಡಿ ಹಕ್ಕು ಪತ್ರ ವಿತರಿಸಲು ತಹಸೀಲ್ದಾರರಿಗೆ ಸೂಚಿಸಿದ್ದೇನೆ. ಸೇವಾಲಾಲ್ ಸಮಾಜವೂ ಕೂಡ ಆರ್ಥಿಕವಾಗಿ ಬೆಳೆಯುವ ಶಕ್ತಿ ಪಡೆದುಕೊಳ್ಳಬೇಕು ಎಂದರು.
ಸಂತ ಸೇವಾಲಾಲ್ ಜಯಂತಿಯನ್ನು ಸರಕಾರದ ಮಟ್ಟದಲ್ಲಿ ಆಚರಿಸಲಾಗುತ್ತಿದೆ .ಪ್ರತಿಯೊಂದು ಸಮಾಜದಲ್ಲಿ ಸಮಾಜದ ಏಳಿಗೆಗಾಗಿ ದುಡಿದ ಮಹನೀಯರ ಸೇವೆ ಗುರ್ತಿಸಿ, ಅವರು ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಅವರ ಸಾಧನೆ ಮುಂದಿನ ಪೀಳಿಗೆಗೆ ದಾರಿ ದೀಪವಾಗ ಬೇಕು ಅವರ ಆದರ್ಶದ ದಾರಿಯಲ್ಲಿ ನಡೆಯಬೇಕು ಎನ್ನುವುದು ಸಾರ್ಕಾರದ ಉದೇಶ,ದಾರ್ಶನಿಕರ ತತ್ವಗಳು ಸರ್ವ ಸಮಾಜಕ್ಕೂ ಬೆಳಕಾಗ ಬಲವು,ನಾವು ಮೊದಲು ಕೇವಲ ಬಸವಜಯಂತಿ ಮಾತ್ರ ಸರಕಾರದ ಮಟ್ಟದಲ್ಲಿ ಆಚರಿಸಲಾಗುತ್ತಿತ್ತು. ಎಲ್ಲ ಧರ್ಮ ಹಾಗೂ ಸಮುದಾಯಗಳ ಮಹನೀಯರ ಆದರ್ಶಗಳು ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಈಗಿನ ಪೀಳಿಗೆಯವರಿಗೆ ತಿಳಿಯಪಡಿಸಲು ಈಗ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ರಜೆ ನೀಡದೆ ಕಾಯಕ ಮಾಡಲು ತಿಳಿಸಲಾಗಿದೆ ಎಂದರು.
ತಹಸೀಲ್ದಾರ್ ಪವನ್‌ಕುಮಾರ್ ಮಾತನಾಡಿ ವಿಶಿಷ್ಟವಾದ ಸಲೆ ಮತ್ತು ಸಂಸ್ಕೃತಿಯುಳ್ಳ ಬಂಜಾರ, ಲಂಬಾಣಿ ಸಮಾಜದವರು ಹೆಚ್ಚು ಜನರು ಸೇರಿ ಸೇವಾಲಾಲ್ ಜಯಂತಿಯನ್ನು ಆಚರಿಸಲು ಮುಂದೆಬರಬೇಕು. ಇಲ್ಲಿ ವ್ಯಕ್ತವಾಗುವ ಸಮುದಾಯದ ಅಭಿಪ್ರಾಯಗಳಿಗೆ ಆ ಸಮುದಾಯಕ್ಕೆ ಬೇಕಾಗುವು ಸವಲತ್ತುಗಳ ಬಗ್ಗೆ ಸರಕಾರ ತಿಳಿದುಕೊಂಡು ಅವರಿಗೆ ಹೆಚ್ಚಿನ ನೆರವು ಒದಗಿಸಲು ಅನುಕೂಲವಾಗುತ್ತದೆ ಎಂದರು.

ಸಮಾಜನ ಅಧ್ಯಕ್ಷ ಸಿದ್ದಾನಾಯಕ್ ಮಾತನಾಡಿ ಭಾರತದಲ್ಲಿ ಸುಮಾರು 10ರಿಂದ 12ಕೋಟಿಯಷ್ಟು ನಮ್ಮ ಸಮುದಾಯದ ಜನಸಂಖ್ಯೆ ಇದ್ದು ಅತಿದೊಡ್ಡ ಸಮಾಜ ಎನಿಸಿದೆ. ಸ್ಥಳೀಯ 12 ತಾಂಡ್ಯಾಗಳ ಕುಂದು ಕೊರತೆಗಳನ್ನು ಸರಕಾರ ಆಲಿಸಬೇಕು. ತಾಂಡ್ಯಾಗಳಿಗೆ ಹಕ್ಕುಪತ್ರ ನೀಡಿ ಕಂದಾಯ ಗ್ರಾಮಗಳಾಗಿ ಪರಿವರ್ತಿಸಬೇಕು. ನೀರು, ವಿದ್ಯುತ್, ಗ್ರಂಥಾಲಯ, ಬ್ಯಾಂಕ್ ಇತ್ಯಾದಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್, ನಗರಸಭಾ ಸದಸ್ಯ ಮಲ್ಲೇಶ್ ನಾಯ್ಕ.ನಿವೃತ್ತ ಶಿಕ್ಷಕರಾದ ರಾಜಕುಮಾರ್ ತಿಮ್ಮಾಪುರ, ರಂಗನಾಯಕ, ಬಿ.ಟಿ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
.










Leave a Reply