ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೊನಲು ಬೆಳಕಿನ ಪುರುಷ ಹಾಗೂ ಮಹಿಳೆಯರ ವಾಲಿಬಾಲ್ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು

ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ಮಾಜಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮನುಷ್ಯನ ಆರೋಗ್ಯ ಸಧೃಡವಾಗಿರಬೇಕಾದರೆ ಕ್ರೀಡೆಗಳು ಸಹಕಾರಿ, ಮನುಷ್ಯನ ದೇಹ ಹಾಗೂ ಮನಸ್ಸು ಸ್ವಾಸ್ಥ್ಯ ಹಾಗೂ ಲವಲವಿಕೆಯಿಂದ ಇರುವುದೇ ನಿಜವಾದ ಆರೋಗ್ಯ, ಉತ್ತಮ ಆರೋಗ್ಯಕ್ಕೆ ದೇಹವನ್ನ ಕ್ರೀಯಾಶೀಲವಾಗಿ ಇಡಬೇಕು,ಕ್ರೀಡೆ ಹಾಗೂ ವ್ಯಾಯಾಮಗಳು ದೇಹವನ್ನ ಸದೃಢವಾಗಿ ಇಡಲು ಸಹಕಾರಿಯಾಗಿದ್ದು,ಕ್ರೀಡೆಗಳನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಿಪಟೂರಿನಲ್ಲಿ ಹೆಚ್ಚು ಪ್ರೋತ್ಸಹ ನೀಡುತ್ತಿದ್ದಾರೆ, ಹೆಚ್ಚು ಹೆಚ್ಚು ಕ್ರೀಡಾಕೂಟಗಳನ್ನ ನಡೆಸಬೇಕು ಎಂದು ತಿಳಿಸಿದರು
ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಕೆ.ಷಡಕ್ಷರಿ ಕ್ರೀಡೆಗಳು ಮನುಷ್ಯನ ಆರೋಗ್ಯಕ್ಕೆ ಸಹಕಾರಿಯಾಗಿದ್ದು,ತಿಪಟೂರು ಸ್ಪಂದನಾ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ರಾಷ್ಟ್ರೀಯ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ನಗರಸಭಾ ಉಪಾಧ್ಯಕ್ಷೆ ಮೇಘನಾ ಭೂಷಣ್,ಖ್ಯಾತ ವೈದ್ಯರಾದ ಡಾ//ಶ್ರೀಧರ್,ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ,ತಹಸೀಲ್ದಾರ್ ಪವನ್ ಕುಮಾರ್ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಮುಂತ್ತಾದವರು ಉಪಸ್ಥಿತರಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ










Leave a Reply