
ತಿಪಟೂರು:ನಗರದ ವಿನಾಯಕ ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ ವೇಳೆ ಯುವಕರ ಗುಂಪೊಂದು ರಿಜೆಕ್ಟ್ ಫಾರ್ ವಕ್ಫ್ ಅಮೈಂಡ್ ಮೆಂಟ್ 2024 ಭಿತ್ತಿಪತ್ರ ಪ್ರದರ್ಶನ ಮಾಡುವ ಮೂಲಕ ಕೇಂದ್ರ ಸರ್ಕಾರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಭಿತ್ತಿಪತ್ರ ಪ್ರದರ್ಶನ ಮಾಡಿದ ಯುವಕರು ಕೇಂದ್ರ ಸರ್ಕರ ತಿದ್ದುಪಡಿ ಮಾಡಲು ಹೊರಟಿರುವ ವಕ್ಫ್ ಕಾಯ್ದೆ 2024. ಮುಸ್ಲೀಂ ವಿರೋದಿಯಾಗಿದೆ,ನಮ್ಮ ಸಮುದಾಯ ಯಾವುದೇ ಕಾರಣಕ್ಕೂ ತಿದ್ದುಪಡಿಯನ್ನ ಒಪ್ಪುವುದಿಲ್ಲ, ತಿದ್ದುಪಡಿಗೆ ನಮ್ಮ ವಿರೋದವಿದೆ,ಆದರೆ ಕೇಂದ್ರಸರ್ಕಾರ ನಮ್ಮ ಹಕ್ಕುಗಳನ್ನ ಕಸಿದುಕೊಳ್ಳುವ ಉದೇಶದಿಂದ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ,ನಾವೂ ಯಾವುದೇ ಕಾರಣಕ್ಕೂ ಈ ಬಿಲ್ ಒಪ್ಪುವುದಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಕಾಯ್ದೆ ವಿರುದ್ದ ಉಗ್ರಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ




