ತಿಪಟೂರು ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಮಾಸಚರಣೆ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಶಾಸಕ ಕೆ.ಷಡಕ್ಷರಿ ಯವರಿರು ಮುಸ್ಲೀಂ ಭಾಂದವರೊಂದಿಗೆ ರಂಜಾನ್ ಶುಭಾಷಯ ವಿನಿಯಮ ಮಾಡಿಕೊಂಡು ಶುಭಾಷಯ ತಿಳಿಸಿದರು

ನಂತರ ಮಾತನಾಡಿದ ಅವರು ವಿಶ್ವದಾದ್ಯಂತ ಆಚರಣೆ ಮಾಡುತ್ತಿರುವ ರಂಜಾನ್ ನಿಮ್ಮೆಲ್ಲರಿಗೂ ಶುಭುಂಟುಮಾಡಲಿ , ಮುಸ್ಲೀಂ ಸಮಾಜ ನನ್ನ ಕೈ ಹಿಡಿದಿದೆ. ನಾನೂ ಯಾವಾಗಲೂ ನಿಮ್ಮ ಜೊತೆಇರುತ್ತೇನೆ,ನಿಮ್ಮ ಹೇಳಿಗೆಗೆ ಅಗತ್ಯವಾದ ನೆರವು ನೀಡುತ್ತೇನೆ,ತಿಪಟೂರು ನಗರದಲ್ಲಿ ಮುಸ್ಲೀಂ ಶಾದಿ ಮಹಲ್ ನಿರ್ಮಾಣಕ್ಕೆ 2ಕೋಟಿ ಅನುದಾನ ನೀಡಲಾಗುವುದು, ನಗರದ ಈದ್ಗ ಮೈದಾನದಲ್ಲಿ ಸ್ವಚ್ಚತೆ ಅನುಕೂಲವಾಗುವಂತೆ ಇಂಟರ್ ಲಾಕ್ ನೆಲಹಾಸು ಹಾಕಿಸಿ ಮುಂದಿನ ರಂಜಾನ್ ಪ್ರಾರ್ಥನೆ ಅವಕಾಶ ಮಾಡಲಾಗುವುದು,ಈದ್ಗಾ ಸುತ್ತಲು,ಕಾಂಪೌಂಡ್ ನಿರ್ಮಾಣ ಮಾಡಿ ಮೂಲ ಸೌಕರ್ಯ ಒದಗಿಸಲಾಗುವುದು, ಲಿಂಗದಹಳ್ಳಿ ಬಳಿ ಇರುವ ಮುಸ್ಲಿಂ ಖಬರ್ ಸ್ತಾನಕ್ಕೆ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು,

ಮುಸ್ಲೀಂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಉರ್ದು ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು,ಮುಸ್ಲೀಂ ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಹಾಸ್ಟೇಲ್ ನಿರ್ಮಾಣ ಮಾಡಲಾಗಿವುದು,ನಿಮ್ಮ ಎಲ್ಲಾ ಬೇಡಿಕೆಗಳನ್ನ ಹಂತಹಂತವಾಗಿ ಈಡೇರಿಸುತ್ತೇನೆ, ನಿಮ್ಮ ಸಹಕಾರ ಈಗೇ ಇರಲಿ ನಾನೂ ನಿಮ್ಮ ಹೇಳಿಗೆಗೆ ನಿಮ್ಮ ಜೊತೆಇರುತ್ತೇನೆ ಎಂದು ತಿಳಿಸಿದರು
ಪ್ರಾರ್ಥನಾ ಸಭೆಯಲ್ಲಿ ಮುಖಂಡರಾದ ಮುನಾವರ್ ಪಾಷಾ,ಮಹಮದ್ ದಸ್ತಗೀರು,ಷಫಿಉಲ್ಲಾ ಷರೀಪ್,ಮಹಮದ್ ಜುಬೇರ್,ಷಫಿಉಲ್ಲ ,ಸುಜೀತ್ ಭೂಷಣ್ ಮುಂತ್ತಾದವರು ಉಪಸ್ಥಿತರಿದರು.
ವರದಿ:ಮಂಜುನಾಥ್ ಹಾಲ್ಕುರಿಕೆ















Leave a Reply