
ಕಾರ್ಯಕ್ರಮದಲ್ಲಿ ಛಲವಾದಿ ಜಗದ್ಗುರು ಪೀಠ ಚನ್ನೇನಳ್ಳಿಯ ಪರಮಪೂಜ್ಯ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿಯವರು, ವಿಧಾನ ಪರಿಷತ್ ಸದಸ್ಯರಾದ ಹಾಗೂ ಛಲವಾದಿ ಮುಖಂಡರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ವಿಶ್ವ ಮೈತ್ರಿ ಬುದ್ಧ ವಿಹಾರ ಮೈಸೂರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಬೌದ್ಧ ಮಹಾಸಭಾದ ಪರಮಪೂಜ್ಯ ಡಾ.ಕಲ್ಯಾಣದಸಿರಿ ಬಂತೇಜಿಯವರು, ಅಲ್ಲಮಪ್ರಭು ಮಠ ಡಿ ಕಲ್ಕೆರೆಯ ಪರಮಪೂಜ್ಯ ಶ್ರೀ ತಿಪ್ಪೇರುದ್ರ ಸ್ವಾಮೀಜಿಯವರು ಉಪಸ್ಥಿತರಿದ್ದರು ಹಾಗೂ ಛಲವಾದಿ ಸಮುದಾಯದ ಮುಖಂಡರು, ಹಿರಿಯರು ಅಧಿಕಾರಿಗಳು ಮತ್ತು ಸಾರ್ವಜನಿಕರು ಸದರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ಸಿರಾ: ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಮಾ.23 ರಂದು ಛಲವಾದಿ ಮಠದ 11ನೇ ವರ್ಷದ ವಾರ್ಷಿಕೋತ್ಸವ ಮತ್ತು ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿಯವರ 51ನೇ ವರ್ಧಂತ್ಸೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರೆವೇರಿತು, ಸದರಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಛಲವಾದಿ ಮಠದ ಪರಮಪೂಜ್ಯ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿಯವರು ನಮ್ಮ ಛಲವಾದಿ ಸಮುದಾಯದ ಹಿತ ದೃಷ್ಟಿಗೆ 15 ವರ್ಷಗಳ ಹಿಂದೆಯೇ ಚಲವಾದಿ ಮಹಾಸಭಾ ಸ್ಥಾಪನೆಯಾಗಬೇಕು ಎಂದು ಐ.ಎ.ಎಸ್ ಅಧಿಕಾರಿ ದಿವಂಗತ ಕೆ ಶಿವರಾಮ್ ತಿಳಿಸಿದ್ದರು ಅಂತೆಯೇ ತಾಲ್ಲೂಕಿನ ಚೆನ್ನೇನಹಳ್ಳಿಯಲ್ಲಿ ಸ್ಥಾಪನೆಯಾಗಿ 12 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿದೆ ನಮ್ಮ ಸಮುದಾಯದ ಸಂಸ್ಕೃತಿ ಅರೆವಾದ್ಯ ಮತ್ತು ಕಹಳೆ ಊದುವುದು ನಮ್ಮ ಛಲವಾದಿ ಸಮುದಾಯದ ಹೆಗ್ಗುರುತಾಗಿದೆ, ಕಹಳೆ ಊದುವ ಉದ್ದೇಶ ಎಚ್ಚರಿಕೆಯ ಸಂದೇಶವಾಗಿದೆ ಇವೆಲ್ಲವೂ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ನಮ್ಮ ಸಮುದಾಯದ ಏಳಿಗೆಗೆ ನಮ್ಮಲ್ಲಿ ಸಹಕಾರ ಮನಭಾವ ಬೆಳೆದು ಬುದ್ದ ಬಸವಾದಿ ಶರಣರು ಮತ್ತು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಹಾಕಿಕೊಟ್ಟ ಹಾದಿಯನ್ನು ಹಿಡಿದು ಸಮಾಜದಲ್ಲಿ ಬೆಳೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ವಿಧಾನ ಪರಿಷತ್ ಹಾಗೂ ಛಲವಾದಿ ಮುಖಂಡರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ನಮ್ಮ ಸಮುದಾಯ ಸ್ವಾಮೀಜಿಯ ಹೊಂದುವ ಸಂಸ್ಕೃತಿಯಲ್ಲ ಡಾ. ಬಿ.ಆರ್ ಅಂಬೇಡ್ಕರ್ ಅವರಲ್ಲೇ ನಾವು ಎಲ್ಲವನ್ನೂ ಕಾಣುತಿದ್ದೆವೆ , ಆದರೆ ಪ್ರಸ್ತುತ ದಿನಮಾನಗಳಲ್ಲಿ ಸ್ವಾಮೀಜಿಗಳ ಅನಿವಾರ್ಯತೆ ಇದೆ ನಮ್ಮನ್ನೂ ತಿದ್ದಿ ತೀಡಿ ಸಮುದಾಯಕ್ಕೆ ಕೊಡಿಗೆಗಳನ್ನು ಕೊಡಲು ಸ್ವಾಮೀಜಿಗಳ ಮಾರ್ಗದರ್ಶನ ಬೇಕಾಗಿದೆ ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯದಲ್ಲಿ ಮತ್ತಷ್ಟು ಬಲ ಗಟ್ಟಿಯಾಗಬೇಕಿದೆ, ಮೀಸಲಾತಿ ಪಡೆದು ಸ್ವ ಹಿತ ಪಡೆದುಕೊಳ್ಳಲು ಅಷ್ಟೇ ಅಲ್ಲ ಬದಲಾಗಿ ಸಮಾಜದ ಹಿತ ಕಾಪಾಡುವುದು ಅಗತ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಛಲವಾದಿ ಜಗದ್ಗುರು ಪೀಠ ಚನ್ನೇನಳ್ಳಿಯ ಪರಮಪೂಜ್ಯ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿಯವರು, ವಿಧಾನ ಪರಿಷತ್ ಸದಸ್ಯರಾದ ಹಾಗೂ ಛಲವಾದಿ ಮುಖಂಡರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ವಿಶ್ವ ಮೈತ್ರಿ ಬುದ್ಧ ವಿಹಾರ ಮೈಸೂರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಬೌದ್ಧ ಮಹಾಸಭಾದ ಪರಮಪೂಜ್ಯ ಡಾ.ಕಲ್ಯಾಣದಸಿರಿ ಬಂತೇಜಿಯವರು, ಅಲ್ಲಮಪ್ರಭು ಮಠ ಡಿ ಕಲ್ಕೆರೆಯ ಪರಮಪೂಜ್ಯ ಶ್ರೀ ತಿಪ್ಪೇರುದ್ರ ಸ್ವಾಮೀಜಿಯವರು ಉಪಸ್ಥಿತರಿದ್ದರು ಹಾಗೂ ಛಲವಾದಿ ಸಮುದಾಯದ ಮುಖಂಡರು, ಹಿರಿಯರು ಅಧಿಕಾರಿಗಳು ಮತ್ತು ಸಾರ್ವಜನಿಕರು ಸದರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ