ಕಳೆಗಟ್ಟಿದ ಕೊಡಿಗೇಹಳ್ಳಿ ಶ್ರೀ ಕಬ್ಬಾಳದುರ್ಗಿ ಜಾತ್ರಾ ಮಹೋತ್ಸವ

Spread the love

ತುಮಕೂರು ಗ್ರಾಮಾಂತರ: ತಾಲೂಕಿನ ಉಡುಗೆರೆ ಹೋಬಳಿಕೆ ಒಳಪಡುವ ಕೊಡಗೇನಹಳ್ಳಿ ಗ್ರಾಮದ ಭಕ್ತರ ಆರಾಧ್ಯ ದೇವಿ ಶ್ರೀ ಕಬ್ಬಾಳ ದುರ್ಗಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ.24 ರಿಂದ ಮಾ.26 ರವರೆಗೆ ವಿಜೃಂಭಣೆಯಿಂದ ಜರುಗಿತು. ಸದರಿ ಜಾತ್ರೆಯು ಮೂರು ದಿನಗಳ ಕಾಲ ಹಲವಾರು ಧಾರ್ಮಿಕ ಪದ್ಧತಿಗಳೊಂದಿಗೆ ಜರುಗುತ್ತದೆ, ಅದರಲ್ಲಿ ಪ್ರಮುಖವಾಗಿ ಹೊನ್ನಾರ ಮತ್ತು ಜಾಗರಣೆ ಇಲ್ಲಿಯ ವಿಶೇಷ ಆಚರಣೆಯಾಗಿದೆ ತಾಲೂಕು ಜಿಲ್ಲೆಯಾದ್ಯಂತ ನೂರಾರು ಭಕ್ತಾದಿಗಳು ಸದರಿ ಜಾತ್ರೆಗೆ ಆಗಮಿಸುತ್ತಾರೆ. ಗ್ರಾಮಸ್ಥರೂಬ್ಬರು ಮಾತನಾಡಿ ನಮ್ಮ ಗ್ರಾಮದಲ್ಲಿ ಪ್ರತಿವರ್ಷವು ಶ್ರೀ ಕಬ್ಬಾಳ ದುರ್ಗಿ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲಾಗುತ್ತದೆ ಕೊರೋನಾದಂತಹ ಸಂಕಷ್ಟದಲ್ಲಿಯೂ ಕೂಡ ನಮ್ಮ ಗ್ರಾಮವು ಕೂಡ ಜಾತ್ರೆಯನ್ನು ಕೈ ಬಿಟ್ಟಿಲ್ಲ ನಿರಂತರವಾಗಿ ನಡೆಯುತ್ತಿದೆ, ಈ ದೇವಿಯ ಅನುಗ್ರಹದಿಂದ ಹಲವಾರು ಸಂಕಟಗಳಿಂದ ಹೊರಬಂದಿದ್ದೇವೆ ನಮ್ಮ ಗ್ರಾಮವು ದೇವರಾಯನದುರ್ಗ, ನಾಮದ ಚಿಲುಮೆ, ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಪುಣ್ಯಕ್ಷೇತ್ರಗಳಿಗೆ ಸಮೀಪವಾಗಿರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ಗ್ರಾಮವು ಕೂಡ ಪ್ರಮುಖ ಪುಣ್ಯ ಕ್ಷೇತ್ರವಾಗುವ ಎಲ್ಲಾ ಸಾಧ್ಯತೆಗಳಿವೆ ಎಂದರು. ಗ್ರಾಮಸ್ಥರು ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಜಗದೀಶ್ ಮಾತನಾಡಿ ಪ್ರತಿ ವರ್ಷವೂ ಜಾತ್ರೆಯ ಆಚರಣೆಯು ವಿಜೃಂಭಣೆಯಿಂದ ಆಗುತ್ತಿದೆ ಅದಕ್ಕೆ ಕಾರಣ ಈ ದೇವಿಯಲ್ಲಿ ಇಟ್ಟ ನಂಬಿಕೆಗಳು ಫಲಿಸುತ್ತಿರಿವ ಪರಿಣಾಮವೇ ಆಗಿದೆ ಅಲ್ಲದೆ ನಮ್ಮ ಈ ಗ್ರಾಮದ ಜಾತ್ರೆಯನ್ನು ಎಲ್ಲರೂ ಒಗ್ಗಟ್ಟಾಗಿ ಜಾತ್ಯಾತೀತವಾಗಿ ಜಾತ್ರೆಯನ್ನು ಆಚರಿಸಲಾಗುತ್ತದೆ ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಇದೇ ರೀತಿ ಈ ದೇವಿಯ ಜಾತ್ರೆ ಮಾಡಲು ಎಲ್ಲರಿಗೂ ಶಕ್ತಿ ನೀಡಲಿ ಎಂದು ಆಶಯ ವ್ಯಕ್ತಪಡಿಸಿದರು.ಗ್ರಾಮಸ್ಥರಾದ ಕಿರಣ್ ಮಾತನಾಡಿ ನಮ್ಮ ಗ್ರಾಮದ ಜಾತ್ರೆಯಲ್ಲಿ ಪ್ರಮುಖವಾಗಿ 2 ವಿಶೇಷ ಆಚರಣೆಗಳಿವೆ, ಅದರಲ್ಲಿ ಮೊದಲನೆಯದಾಗಿ ಹೊನ್ನಾರ ಇದರಲ್ಲಿ ಚಿಕ್ಕ ಮಕ್ಕಳಿಗೆ ಪುರೋಹಿತರ ವೇಷ ಧರಿಸಿ ಅವರ ಮೂಲಕ ಗ್ರಾಮದ ಮಳೆ ಬೆಳೆ ಆರೋಗ್ಯ ಕುರಿತು ಗ್ರಾಮದ ಭವಿಷ್ಯವನ್ನು ನುಡಿಸಲಾಗುತ್ತದೆ. ಎರಡನೇದಾಗಿ ಜಾಗರಣೆ ಎಂಬುದಾಗಿದೆ ಈ ಆಚರಣೆಯಲ್ಲಿ ಇದು ಕೂಡ ಚಿಕ್ಕ ಮಕ್ಕಳ ಮುಖಾಂತರ ಹೋಳಿ ಪರಾಕ್ ಹಾಕಿಸಲಾಗುತ್ತದೆ ಈ ಎರಡು ಪದ್ಧತಿಗಳು ಸುತ್ತಮುತ್ತಲ ಗ್ರಾಮದ ಜಾತ್ರೆಗಳಿಗೆ ವಿಭಿನ್ನವಾಗಿದೆ ಎಂದರು.ಸದರಿ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಗೌಡರು, ಮುಖಂಡರು, ಹಿರಿಯರು , ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ನೆರೆದಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

Leave a Reply

Your email address will not be published. Required fields are marked *

error: Content is protected !!