.ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಲು: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಡಿ.ಆರ್ ಕರೆ

Spread the love

ತಿಪಟೂರು :ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಮಣಕಿನಕೆರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಾಲೇನಹಳ್ಳಿ ಗ್ರಾಮದಲ್ಲಿ ಹಾಲ್ಕುರಿಕೆ ಕೆರೆ ಹಳ್ಳ ಜಲಾನಯನ ಅನುಷ್ಠಾನಕಚೇರಿಯಿಂದ ಗಣಿ ಬಾಧಿತ ಪ್ರದೇಶಗಳಲ್ಲಿ ಸಮಗ್ರ ಪರಿಸರ ಯೋಜನೆಯ
ಅರಿವು ಮೂಡಿಸುವ ಗ್ರಾಮ ಸಭೆಯನ್ನ ಹಾಗೂ ಜಾಥ ಕಾರ್ಯಕ್ರಮವನ್ನ ಹಾಲೇನಹಳ್ಳಿ ಗ್ರಾಮದಲ್ಲಿ ನಡೆಯಿತು.


ತಿಪಟೂರು ತಾಲ್ಲೋಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪವನ್ ಡಿ.ಆರ್ . ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ರೈತರೊಂದಿಗೆ ಸಂವಾದ
ನಡೆಸಿದ ಅವರು ಮಾತನಾಡಿ ಗಣಿಬಾಧಿತ ಪ್ರದೇಶ ಅಭಿವೃದ್ದಿ ಯೋಜನೆ ಸಿಇಪಿಎಂಐ ಝಡ್ ಅಡಿ , ರೈತರು ತಮ್ಮ ಕೃಷಿ ಜಮೀನಿನ ಅಭಿವೃದ್ದಿಗೆ ಕೃಷಿ ಇಲಾಖೆ ಅನುದಾನ ನೀಡುತ್ತಿದ್ದೆ ,ರೈತರು ಸಹಕಾರ ಸಂಘಗಳನ್ನ ರಚಿಸಿಕೊಂಡು 10 ಸಾವಿರ ರೂಪಾಯಿಯಿಂದ 10 ಲಕ್ಷ ರೂ.ವರೆಗೂ ವಿವಿಧ ಕಾಮಗಾರಿಗಳನ್ನು
‘ರೈತರ ಜಮೀನಿನಲ್ಲಿ ಕೈಗೊಳ್ಳಲು ಅವಕಾಶವಿದ್ದು, ಒಟ್ಟು ಅನುದಾನದ ಶೇ.10ರಷ್ಟು
ವಂತಿಕೆಯನ್ನಷ್ಟೇ ರೈತರಿಂದ ಕಟ್ಟಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಬಾಳೆ ಮತ್ತು
ಅಡಕೆ ಸಸಿಗಳನ್ನು ಹೊರತುಪಡಿಸಿ ಎಲ್ಲ ಹಣ್ಣಿನ ಸಸಿಗಳನ್ನು ಗಣಿ ಬಾಧಿತ ಸಮಗ್ರ
ಪರಿಸರ ಯೋಜನೆಯಿಂದ ರೈತರ ಜಮೀನುಗಳಲ್ಲಿ ನೆಟ್ಟು ಕೊಡಲಾಗುವುದು. ಕೃಷಿ
ಹೊಂಡ, ಗೋಕಟ್ಟೆ, ನಾಲಾ, ಬದು ಸೇರಿ ಒಟ್ಟಾರೆ ಸಮಗ್ರವಾಗಿ ಗಣಿಗಾರಿಕೆಯಿಂದ
ನಷ್ಟವಾಗಿರುವುದನ್ನು ಮರುನಿರ್ಮಿಸಲಾಗುವುದು. ಗಣಿ ದಂಡದಿಂದ ಸಂಗ್ರಹವಾದ ಹಣದಲ್ಲಿಮೀಸಲಾಗಿರುವ ಮೊತ್ತವನ್ನು ಬಳಸಲು ಡಿಪಿಆರ್ ಸಿದ್ಧಪಡಿಸಲು ರೈತರ ಸಹಕಾರ
ಅಗತ್ಯ ಎಂದು ತಿಳಿಸಿದರು.


ಸ್ಕೋಡ್ ವೇಸ್ ಸಂಸ್ಥೆ ಮುಖ್ಯಸ್ಥ ನರಸಪ್ಪ ಮಾತನಾಡಿ ಗಣಿಬಾದಿತ ಪ್ರದೇಶಗಳ ಅಭಿವೃದ್ದಿಗೆ ಕ್ರಿಯಾಯೋಜನೆ ರೂಪಿಸಲು ರೈತರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ, ನಮ್ಮ ಸಿಬ್ಬಂದಿಗಳೊಂದಿಗೆ ಸಹಕಾರ ನೀಡಿ ಯೋಜನೆ ಯಶಸ್ವಿನಿಗೆ ಸಹಕರಿಸಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಣಕಿಕೆರೆ ಗ್ರಾಮಪಂಚಾಯ್ತಿ ಸದಸ್ಯರಾದ ಶ್ರೀಮತಿ ಮೀನಾಕ್ಷಮ್ಮ ಬಸವರಾಜು,ಹರೀಶ್,ನಾಗರಾಜು,ಮುಂತ್ತಾದವರು ಉಪಸ್ಥಿತರಿದರು

Leave a Reply

Your email address will not be published. Required fields are marked *

error: Content is protected !!