ತಿಪಟೂರು: ದಲಿತ ಸಂಘಟನೆಗಳು ರಾಜ್ಯದಲ್ಲಿ ನೊಂದವರು ಶೋಷಿತರು ಹಾಗೂ ಧ್ವನಿಇಲ್ಲದ ಜನರ ಧ್ವನಿಯಾಗಿ ಕೆಲಸ ಮಾಡಿದೆ,ಯುವ ಪೀಳಿಗೆ ನಿಸ್ವಾರ್ಥ ಸೇವೆ ಮೂಲಕ ಜನರಲ್ಲಿ ಭರವಣೆ ಮೂಡಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋಪೆಸರ್ ಬಿ.ಕೃಷ್ಣಪ್ಪ ಸ್ಥಾಪಿತ )ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ತಿಳಿಸಿದರು
ತಿಪಟೂರು ನಗರ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋಪೆಸರ್ ಬಿ.ಕೃಷ್ಣಪ್ಪ ಸ್ಥಾಪಿತ ತಿಪಟೂರು ತಾಲ್ಲೋಕು ಶಾಖೆ ಪುನರ್ ರಚನೆ ಹಾಗೂ ಕಾರ್ಯಕರ್ತರ ಸಭೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ದಲಿತರು, ಶೋಷಿತರು ಹಾಗೂ ದಮನಿತರ ಧ್ವನಿಯಾಗಿ ಕೆಲಸ ಮಾಡುತ್ತಾ ಬಂದಿದೆ,ನಾವೂ ಸಂಘಟನೆಯನ್ನ ನಿಸ್ವಾರ್ಥ ಮನೋಭಾವನೆಯಿಂದ ತಾತ್ವಿಕ ನೆಲೆಗಟ್ಟಿನಲ್ಲಿ ಮುನ್ನೆಡೆಸಿದ್ದಾಗ, ಸಮುದಾಯ ವಿಶ್ವಾಸರ್ಹತೆಗಳಿಸಲು ಸಾಧ್ಯ,ಯುವ ಪೀಳಿಗೆ ಜಾಗರೂಕತೆಯಿಂದ ಸಂಘಟನೆ ಮುನ್ನೆಡೆಸಬೇಕು,ಹೆಚ್ಚು ಹೆಚ್ಚು ಸಂಘಟಿತರಾದಂತೆ, ನಮ್ಮ ಧ್ವನಿಗಟ್ಟಿಯಾಗುತ್ತದೆ, ದಸಂಸ ಹುಟ್ಟಿದ್ದಾಗಿನಿಂದ ಅನೇಕ ಮಹನೀಯರು ತಮ್ಮ ಜೀವವನ್ನೆ ಸವೆಸಿದ್ದಾರೆ, ಡಿಎಸ್ಎಸ್ ಪ್ರಭಾವಿ ನಾಯಕರಾಗಿದ ಮತ್ತಿಹಳ್ಳಿ ದೊಡ್ಡ ಗೌಡ್ರು ದಲಿತ ಚಳುವಳಿಯ ಗಟ್ಟಿತನದ ನಾಯಕ, ಒಬ್ಬ ನಿಸ್ವಾರ್ಥ ಸೇವಾ ಮನೋಭಾವದ ದಿಟ್ಟತನದ ನಾಯಕ ಜಿಲ್ಲೆಯಲ್ಲಿ ಹಲವಾರು ದಲಿತಪರ ಜನಪರ ಹೋರಾಟಗಳ ಮೂಲಕ ನೊಂದ ಜನರಿಗೆ ನ್ಯಾಯದೊರಕಿಸಿ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಡಿಎಸ್ಎಸ್ ಭದ್ರ ನೆಲೆಕಂಡುಕೊಳ್ಳಲು, ಅವರ ಸೇವೆಯೂ ಕಾರಣ,ಹಲವಾರು ಜನಪರಕಾಳಜಿಯ ಮುಖಂಡರ ನಡುವೆಯೂ ಕೆಲವರು ತಮ್ಮ ಸ್ವಾರ್ಥಕ್ಕೆ ಸಂಘಟನೆಯ ಹೆಸರು ಬಳಸಿಕೊಂಡು ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ,ಅಂತಹ ಜನರ ಬಗ್ಗೆ ಸಮುದಾಯ,ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು
ಜಿಲ್ಲಾ ಸಂಘಟನಾ ಸಂಚಾಲಕರಾದ ಮತ್ತಿಹಳ್ಳಿ ಹರೀಶ್ ಗೌಡ ಮಾತನಾಡಿ ಸಂಘಟನೆ ಒಂದು ದೊಡ್ಡ ಶಕ್ತಿ ಇವತ್ತು ನಮಗೆ ಅನ್ಯಾಯವಾದಾಗ ಪ್ರಶ್ನಿಸುವ ಎದೆಗಾರಿಕೆ ರೂಡಿಸಿಕೊಳ್ಳಬೇಕು.ಎಲ್ಲಾ ಸಮುದಾಯದ ಶೋಷಿತರನ್ನ ಒಗ್ಗೂಡಿಸಿಕೊಂಡು ಉತ್ತಮ ಸಮಾಜ ಕಟ್ಟುವಂತಹ ಕೆಲಸ ಆಗಬೇಕಾಗಿದೆ ,ಎಂದು ತಿಳಿಸಿದರು
ಡಿಎಸ್ಎಸ್ ಮುಖಂಡರಾದ ರಾಘು ಯಗಚೀಕಟ್ಟೆ ಮಾತನಾಡಿ ಸಂಘಟನೆ ಒಂದು ದೊಡ್ಡಶಕ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ಪ್ರಾರಂಭವಾಯಿತು ತದನಂತರ ರಾಜ್ಯದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಂಡು ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ ಇಂಥ ಒಂದು ಸಂಘಟನೆಯಲ್ಲಿ ಯುವಕರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಬಹಳ ಸಂತೋಷದ ವಿಷಯ ನಾವುಗಳು ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿನ ನೋವು ನಲಿವಿನಲ್ಲಿ ಬಾಗಿಯಾಗುವುದರ ಜೊತೆಯಲ್ಲಿ ಆರ್ಥಿಕವಾಗಿ ಸದೃಢರಾಗಬೇಕು ವಿದ್ಯಾವಂತರಾಗಿ ಪ್ರಜ್ಞಾವಂತರಾಗಿ ಸಮಾಜದಲ್ಲಿ ಅಭಿವೃದ್ಧಿಯತ್ತ ಸಾಗಬೇಕಾಗಿದೆ ಎಂದು ತಿಳಿಸಿದರು .
ದಲಿತ ಮುಖಂಡರಾದ ಶಿವಪುರ ರಮೇಶ್ ರವರು ಮಾತನಾಡಿ ದಲಿತರು ಒಗ್ಗೂಡಿದ್ದಾಗ ಮಾತ್ರ,ತಮ್ಮ ಹಕ್ಕು ಹಾಗೂ ನ್ಯಾಯಪಡೆಯಲು ಸಾಧ್ಯವಾಗುತ್ತದೆ, ದಲಿತರಿಗೆ ಅನ್ಯಾಯ ಹಾಗೂ ದೌರ್ಜನ್ಯಗಳಾದಗ ದಲಿತ ಮುಖಂಡರು ತಮ್ಮ ಸಂಘಟನೆಗಳ ವಯುಕ್ತಿಕ ಪ್ರತಿಷ್ಠೆ ಬಿಟ್ಟು ಒಗ್ಗೂಡಿ ಹೋರಾಟ ಮಾಡಬೇಕು, ಪ್ರತಿಷ್ಠೆ ಬಿಟ್ಟು ಸಮುದಾಯಗಳ ಸಹಾಯಕ್ಕೆ ನಿಲ್ಲಬೇಕಾಗಿದೆ ಆಗ ಮಾತ್ರ ನ್ಯಾಯಪಡೆಯಲು ಸಾಧ್ಯ ಎಂದರು,
ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಮತ್ತಿಘಟ್ಟ ಶಿವಕುಮಾರ್ ಮಾತನಾಡಿ ಪ್ರೋಪೇಸರ್ ಬಿ.ಕೃಷ್ಣಪ್ಪ ಸರ್ವಸಮಾಜದ ಧ್ವನಿಯಾಗಿದರು,ಸಂಘಟನೆ ಮೂಲಕ ದಲಿತರ ಬದುಕಿನಲ್ಲಿ ಬೆಳಕು ನೀಡಿದ್ದಾರೆ,ಅವರದಾರಿಯಲ್ಲಿ ಎಲ್ಲಾ ಮುಖಂಡರು ಒಗ್ಗೂಡಿ ಕೆಲಸ ಮಾಡಬೇಕು ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ನೂತನ ಡಿಎಸ್ಎಸ್ ತಿಪಟೂರು ತಾಲೂಕು ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು.
ಸಂಚಾಲಕರಾಗಿ ಮೋಹನ್ ಜಕ್ಕನಹಳ್ಳಿ .ಮತ್ತು ಮಹಿಳಾ ಘಟಕದ ತಾಲ್ಲೋಕುಸಂಚಾಲಕರಾಗಿ ಕವಿತಾ ಮಹೇಶ್ ಮತ್ತು ಮಹಿಳಾ ನಗರ ಸಂಚಾಲಕರಾಗಿ ಭವ್ಯ . ತಾಲೂಕು ಸಂಘಟನಾ ಸಂಚಾಲಕರಾಗಿ ಸೌಮ್ಯ. ಸೀಮಾ. ಕುಸುಮ ಅರಳುಗುಪ್ಪೆ. ಅಶ್ವಿನಿ .ಶೃತಿ. ಹೇಮಾ ಸವಿತಾ ಕಮಲಮ್ಮ ರವರನ್ನು ಆಯ್ಕೆ ಮಾಡಲಾಯಿತು
ಡಿ.ಎಸ್.ಎಸ್. ಮುಖಂಡರಾದ ಸತೀಶ್ ಮಾರನಗೆರೆ.ಕುಮಾರ್ ಬೈರಾಪುರ .ಬಾಗವಾಳ ಲಿಂಗದೇವರು. ರಮೇಶ್ ಮಾರನಗೆರೆ. ಕೀರ್ತಿ ಹತ್ಯಾಳ್. ಗಿಣಿಕೀಕೆರೆಯ ಗ್ರಾಮ ಶಾಖೆ ಮುಖಂಡರಾದ ಜಗದೀಶ್. ಪ್ರಭುಸ್ವಾಮಿ. ಸಂಜಯ್. ಕೃಷ್ಣಮೂರ್ತಿ. ಮತ್ತು ಮೂಗತಿಹಳ್ಳಿ ತಿಮ್ಮೇಗೌಡರು. ಹುಳಿಯಾರ್ ಡಿಎಸ್ಎಸ್ ಯುವ ಮುಖಂಡರಾದ ದೇವರಾಜು ಮಾರುವಳೆ ಗಾಣಧಾಳು ರವಿಪ್ರಸಾದ್. ಮದ್ಲಿಹಳ್ಳಿ ಅನಿಲ್ ಮುಂತಾದವರು ಉಪಸ್ಥಿತರಿದರು
ವರದಿ :ಧರಣೇಶ್ ಕುಪ್ಪಾಳು











Leave a Reply