
ತುರುವೇಕೆರೆ, ಪಟ್ಟಣದ ತಿಪಟೂರು ರಸ್ತೆಯಲ್ಲಿ ಕೊಡಗಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ತುರುವೇಕೆರೆ ಪಟ್ಟಣದಲ್ಲಿ ನೂತನ ವಾಣಿಜ್ಯ ಮಳಿಗೆ ನಿರ್ಮಾಣವಾಗಿದ್ದು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿದರು

ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರಿಗಳಾದ ನಾವುಗಳು ಸಹಕಾರಿ ಆಂದೋಲನವನ್ನು ಪಕ್ಷಾತೀತವಾಗಿ ಜಾತ್ಯತೀತವಾಗಿ ಮುನ್ನಡೆಸಬೇಕೆಂಬುದು ನಮ್ಮೆಲ್ಲರ ಅಭಿಲಾಷೆ ಕೂಡ, ಸಾಮೂಹಿಕವಾಗಿ ಮುಂದಿನ ಪೀಳಿಗೆಗೆ ಆಸ್ತಿಯನ್ನು ಸೃಷ್ಟಿ ಮಾಡುವಂತಹ ಮನಸ್ಥಿತಿ ಬರುತ್ತದೆ ಅಂದರೆ ಅದು ಸಹಕಾರಿಗಳಿಗೆ ಮಾತ್ರ ಎನ್ನುವ ಮನೋಭಾವನೆ ಮತ್ತು ಹೆಮ್ಮೆ ಪಡುವಂತಾಗಬೇಕು ಸಹಕಾರಿ ಆಂದೋಲನ ಇವತ್ತು ಬಹಳ ದೊಡ್ಡದಾಗಿ ಬೆಳೆಯುತ್ತಾ ಇದೆ ನಮ್ಮ ತುಮಕೂರು ಜಿಲ್ಲೆಯಲ್ಲಿ ನಿಮ್ಮ ತುರುವೇಕೆರೆ ತಾಲೂಕು ಸಹಕಾರಿ ಸಂಘವನ್ನು ಬೆಳೆಸಲು ಪ್ರಯತ್ನ ಮಾಡಿರುವ ಎಲ್ಲರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಈ ಹಿಂದೆ ಸಹಕಾರಿ ಸಂಘಗಳಲ್ಲಿ ಕೇವಲ 2 ರಿಂದ 5 ಸಾವಿರವರೆಗೆ ಮಾತ್ರ ಸಾಲವನ್ನ ಕೊಡಲಾಗುತ್ತಿತ್ತು ಆದರೆ ಅಂದಿನ ಹಣಕಾಸಿನ ಲಭ್ಯತೆ ಅಷ್ಟು ಕಡಿಮೆ ಇತ್ತು, ಆದರೆ ಇಂದಿನ ದಿನಗಳಲ್ಲಿ ಹಣಕಾಸಿನ ಲಭ್ಯತೆ ಇರುವುದರಿಂದ ನಮ್ಮ ತುಮಕೂರು ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್ಗಳಿಗೆ ಹೆಚ್ಚು ಸಾಲ ನೀಡುತ್ತಿರುವುದರಿಂದ ಸಹಕಾರಿ ಸಂಘಗಳು ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ ಅದರಲ್ಲೂ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಿರುವಂತಹ ತುರುವೇಕೆರೆ ತಾಲೂಕು ಎರಡನೆಯ ಸ್ಥಾನದಲ್ಲಿದೆ ಅದರಲ್ಲೂ ಈ ಭಾಗಕ್ಕೆ ಸಹಕಾರ ಸಂಘದಿಂದ ಹೆಚ್ಚು ಸಾಲ ರೈತರಿಗೆ ದೊರೆಯುವಂತೆ ಮತ್ತು ರೈತರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ನೋಡಿರುವಂತಹ ಈಗಾಗಲೇ ತುಮಕೂರಿನ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಡಗಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಮ್ ಸಿದ್ದಲಿಂಗಪ್ಪ ಅವರ ಶ್ರಮ ಬಹಳಷ್ಟು ಇದೆ ಇದರ ಜೊತೆಗೆ ಸಂಘದ ಸದಸ್ಯರುಗಳು ಸಿಬ್ಬಂದಿಗಳು ಸಹ, ಸಾರ್ವಜನಿಕರ ಹಣದಲ್ಲಿ ಮಾತ್ರ ನಿಮಗೆ ಸಾಲ ಸಹಕಾರಿ ಬ್ಯಾಂಕ್ ಗಳಲ್ಲಿ ನೀಡುತ್ತಿರುವುದು ಯಾವುದೇ ಕಾರಣಕ್ಕೂ ಇದಕ್ಕೆ ಸರ್ಕಾರದಿಂದ ಯಾವುದೇ ಹಣ ನೀಡುವುದಿಲ್ಲ ಕೆಲವರಲ್ಲಿ ಇದು ಸರ್ಕಾರದ ಹಣ ಹಾಗಾಗಿ ಸಹಕಾರಿ ಬ್ಯಾಂಕಲ್ಲಿ ಸಾಲ ನೀಡುತ್ತಾರೆ ಎಂಬ ಮನೋಭಾವ ಇದೆ, ಯಾವುದೇ ಕಾರಣಕ್ಕೂ ಆ ರೀತಿ ಯಾರು ಸಹ ಅಂದುಕೊಳ್ಳಬೇಡಿ ಸಹಕಾರಿ ಬ್ಯಾಂಕ್ ಗಳಲ್ಲಿ ಸಾರ್ವಜನಿಕರಿಂದ ಬಂದಂತಹ ಹಣದಲ್ಲಿಯೇ ರೈತಾಪಿ ವರ್ಗಕ್ಕೆ ಸಾಲ ನೀಡುತ್ತಿರುವುದು ಕಾರಣ ಇಷ್ಟೇ ರೈತರು ಆರ್ಥಿಕವಾಗಿ ಸದೃಢವಾಗಬೇಕು, ಜಾತ್ಯತೀತವಾಗಿ ಯಾವುದೇ ರಾಜಕಾರಣವಿಲ್ಲದೆ ಎಸ್ ಸಿ, ಎಸ್ ಟಿ, ಓ ಬಿ ಸಿ ಸೇರಿದಂತೆ ಎಲ್ಲಾ ಬಡ ರೈತಾಪಿ ವರ್ಗಕ್ಕೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ಅಧ್ಯಕ್ಷರ ಆಯ್ಕೆಯನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಎಲ್ಲರೂ ಸಹ ಸಮಾನತೆಯಿಂದ ಪಕ್ಷಾತೀತವಾಗಿ ಸಹಕಾರಿಗಳಾಗಲು ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದೊಂದು ಸಹಕಾರ ಸಂಘ ಮಾಡಲೇಬೇಕೆಂದು ಗಾಂಧೀಜಿಯವರ ಚಿಂತನೆಯಂತೆ ನಾವುಗಳು ಈಗಾಗಲೇ ಚಿಂತನೆಲ್ಲಿದ್ದು ಅದನ್ನು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡುತ್ತೇನೆ, ಜೊತೆಗೆ ಯಶಸ್ವಿ ಯೋಜನೆಯಲ್ಲಿ ಆಸ್ಪತ್ರೆಗಳಲ್ಲಿ ಸೌಲಭ್ಯ ಪಡೆಯಲು ಪ್ರತಿಯೊಬ್ಬರು ಅದರ ಸದುಪಯೋಗ ಪಡೆದುಕೊಳ್ಳಬೇಕು ಈ ಯೋಜನೆಯ ಸದುಪಯೋಗ ಪಡೆಯಲು ಇದೇ ತಿಂಗಳ 31- 3 -2025 ರಂದು ಕಡೆಯ ದಿನವಾಗಿದ್ದು ಅಷ್ಟರಲ್ಲಿ ಪ್ರತಿಯೊಬ್ಬರೂ ಯಶಸ್ವಿ ಯೋಜನೆಯ ನೋಂದಣಿಯನ್ನು ಮಾಡಿಕೊಳ್ಳಿ ಇದರ ಜೊತೆಗೆ ಖಾಸಗಿ ಬ್ಯಾಂಕ್ ಗಳಲ್ಲಿ ಸಾರ್ವಜನಿಕರು ಚಿನ್ನದ ಸಾಲ ಪಡೆಯಲು ಅತಿ ಹೆಚ್ಚು ಬಡ್ಡಿಯನ್ನು ಕೊಟ್ಟು ಸಾಲವನ್ನ ಪಡೆಯುತ್ತಿದ್ದಾರೆ ದಯಮಾಡಿ ಸಹಕಾರಿ ಬ್ಯಾಂಕ್ ಗಳಲ್ಲೂ ಸಹ ಚಿನ್ನದ ಸಾಲವನ್ನು ನೀಡಲಾಗುತ್ತಿದ್ದು ಕಡಿಮೆ ಬಡ್ಡಿ ದರದಲ್ಲಿ ಕೇವಲ ಐದರಿಂದ ಹತ್ತು ನಿಮಿಷದಲ್ಲಿ ವೇಗವಾಗಿ ನಿಮಗೆ ಚಿನ್ನದ ಸಾಲ ದೊರಕಿಸಿಕೊಡಲಾಗುವುದು ಹಾಗಾಗಿ ಆದಷ್ಟು ನೀವುಗಳು ಖಾಸಗಿ ಬ್ಯಾಂಕ್ ಗಳಲ್ಲಿ ಚಿನ್ನದ ಸಾಲವನ್ನು ಹೆಚ್ಚು ಬಡ್ಡಿಯನ್ನು ಕಟ್ಟುವ ಬದಲು ಸಹಕಾರಿ ಬ್ಯಾಂಕ್ ಗಳಲ್ಲಿ ಚಿನ್ನವನ್ನು ಇಟ್ಟು ಸಾಲವನ್ನು ಪಡೆದುಕೊಳ್ಳಿ ಒಟ್ಟಾರೆ ಸಹಕಾರಿ ಸಂಘಗಳಲ್ಲಿ ಯಾವುದೇ ಪಕ್ಷ, ಜಾತಿ, ಮತ್ತು ರಾಜಕಾರಣವನ್ನು ಮಾಡದೆ ಸಹಕಾರ ಸಂಘ ಕೆಲಸದಲ್ಲಿ ತೊಡಗಿಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಡಿ ಲಕ್ಷ್ಮಿ ನಾರಾಯಣ್, ಮಾಜಿ ವಿಧಾನಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು, ತುಮಕೂರು ಜಿಲ್ಲೆ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ನಿರ್ದೇಶಕರುಗಳಾದ ಮೂರ್ತಿ, ಲಕ್ಷ್ಮೀನಾರಾಯಣ್ ,ಪ್ರಬಣ್ಣ, ನರಸಿಂಹಣ್ಣ, ರಮೇಶ್ ಗೌಡ, ಜಂಗಮಪ್ಪ,ರಾಜಕುಮಾರ, ನಾಗೇಶ್ ಬಾಬು, ತುಮುಲ್ ನಿರ್ದೇಶಕ ಮಹಾಲಿಂಗಯ್ಯ,ಹಾಗೂ ತುರುವೇಕೆರೆ ತಾಲೂಕಿನ ಸಹಕಾರಿ ಸಂಘದ ಕೊಡಗಿಹಳ್ಳಿಅಧ್ಯಕ್ಷರು ಮಹಾಲಿಂಗಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಸ್ವಪ್ನ ನಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಿರಣ್, ತಾಲೂಕು ದಂಡಾಧಿಕಾರಿ ಅಹ್ಮದ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಭಾಗ್ಯಮ್ಮ, ಸುನಿಲ್ ವಿನೋಬನಗರ, ಮಾಜಿ ಅಧ್ಯಕ್ಷರಾದ ಚಿದಾನಂದ್, ಕೀರ್ತಿ ಪ್ರಭಾ, ಮಲ್ಲೂರ್ ತಿಮ್ಮೆಶ್, ಮುನಿಯೂರು ರಂಗಸ್ವಾಮಿ, ದಂಡಿನ ಶಿವರ ಕುಮಾರ್, ಪ್ರಸನ್ನ ಕುಮಾರ್, ಇನ್ನು ಅನೇಕ ಪಕ್ಷದ ಮುಖಂಡರುಗಳು, ತಾಲೂಕು ಆಡಳಿತ ವರ್ಗದ ಸಿಬ್ಬಂದಿಗಳು ಅಧಿಕಾರಿಗಳು ನೂರಾರು ಸಹಕಾರಿಗಳು ಉಪಸ್ಥಿತರಿದ್ದರು.
ವರದಿ, ಮಂಜುನಾಥ್ ಕೆ ಎ ತುರುವೇಕೆರೆ.