
ಅಕಾಶವೇ ಹೊದಿಕೆ, ಭೂಮಿಯೇ ಹಾಸಿಕೆ ಕುಡಿಯಲು ನೀರಿಲ್ಲ, ಉಣ್ಣಲು,ಕೂಳಿಲ್ಲ, ತುತ್ತು ಅನ್ನಕ್ಕಾಗಿ,ಅಂಗಲಾಚುತ್ತಿರುವ ಅಲೆಮಾರಿಗಳು, ಅಲೆಮಾರಿಗಳ ದುಸ್ಥಿತಿಗೆ,ಮರುಕಪಟ್ಟು,ಸಾರ್ವಜನಿಕರು ನೆರವು ನೀಡಿದರೇ ಜಿಲ್ಲಾಡಳಿತ ಮಾತ್ರ ಕನಿಷ್ಟ ಮಾನವೀಯತೆ ತೋರದೆ ನಿರ್ಲಕ್ಷ್ಯ ಮಾಡಿರುವ ಘಟನೆ, ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೋಕಿನ ಹಂದನಕೆರೆ ಹೋಬಳಿ ಕುಪ್ಪೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗಾಂಧೀನಗರ ಕ್ರಾಸ್ ನಲ್ಲಿ (ಕೈ ಮರ) ನಡೆದಿದೆ.

, ಚಿಕ್ಕನಾಯ್ಕನಹಳ್ಳಿ ಗಾಂಧೀ ನಗರ ಕ್ರಾಸ್ ನಿಂದ (ಕೈ ಮರ)ಕಾಮಸಮುದ್ರಕ್ಕೆ ಹೋಗುವ ರಸ್ತೆಯಲ್ಲಿ ವಾಸವಾಗಿದ್ದ ಸುಮಾರು 15ಕ್ಕೂ ಹೆಚ್ಚು ಕೊರಚ ಜನಾಂಗದ ಅಲೆಮಾರಿ ಕುಟುಂಬಗಳು,ರಸ್ತೆ ಬದಿ ಜೋಪಡಿ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು,ಕೆಲವರು ಕೂದಲು ವ್ಯಾಪಾರ ಮಾಡಿದರೆ, ಕೆಲವರು ಹಂದಿ ಸಾಕಾಣಿಕೆ ಮಾಡಿಕೊಂಡು ಬಡತನದಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದರು,ಆದರೆ ದಿನಾಂಕ 14 .03.2025ರಂದು ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು14 ಗುಡಿಸಲುಗಳು ಸಂಪೂರ್ಣವಾಗಿ ಭಸ್ಮವಾಗಿವೆ, ಗುಡಿಸಲಿನಲ್ಲಿ ವ್ಯಾಪಾರಕ್ಕೆ ಇಟ್ಟಿದ ,ಹಣ, ದವಸಧಾನ್ಯ,ಪಾತ್ರೆ,ಪಡಗ,ಬಟ್ಟೆ ಬರೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಇಡೀ ಕುಟುಂಬಗಳ ಜೀವನ ಸಂಪೂರ್ಣ ಅಕ್ಷರ ಸಹ ನಾಶವಾಗಿದ್ದು, ಜೀವನ ಬೀದಿಗೆ ಬಿದ್ದಿದೆ,ಹುಡಲು ಬಟ್ಟೆಇಲ್ಲ. ತಿನ್ನಲು ಊಟವಿಲ್ಲ, ಹೆಂಗಸರು ಮಕ್ಕಳು,ತುತ್ತು ಅನ್ನಕ್ಕಾಗಿ ಆಹಾಕಾರ ಪಡುತ್ತಿದ್ದಾರೆ,ಮಾನವೀಯ ನೆಲೆಯಲ್ಲಿ ನಿರ್ಗತೀಕರಿಗೆ ಅನ್ನ ,ಆಶ್ರಯ ಸೂರು ನೀಡಬೇಕಾದ ಜಿಲ್ಲಾಡಳಿತ ಕನಿಷ್ಟ ನಿರಾಶ್ರೀತ ಕುಟುಂಬಗಳಿಗೆ ನೆರವೂ ನೀಡಿಲ್ಲ ಎಂದು ಸಾರ್ವಜನಿಕರುಆಕ್ರೋಶ ವ್ಯಕ್ತಪಡಿಸಿದ್ದಾರೆ

ಅಲೆಮಾರಿಗಳು ಗಡಿಸಲು ಬೆಂಕಿಗಾಹುತಿಯಾದ ಸ್ಥಳಕ್ಕೆ ದಲಿತ ಮುಖಂಡರ ಭೇಟಿ :
ಗಾಂಧೀನಗರ ಕ್ರಾಸ್ ಕೈಮರದ ಬಳಿ ಅಗ್ನಿ ಅವಘಡದಲ್ಲಿ ಗುಡಿಸಲು ಸುಟ್ಟು ಹೋಗಿರುವ ಸ್ಥಳಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೋಕು ಸಂಚಾಲಕ ಜಕ್ಕನಹಳ್ಳಿ ಮೋಹನ್,ತಿಪಟೂರು ತಾಲ್ಲೋಕು ಕೊರಚ ಸಮಾಜದ ಅಧ್ಯಕ್ಷ ಮಾರನಗೆರೆ ಸತೀಶ್,ಉಪಾಧ್ಯಕ್ಷ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ನೊಂದಕುಟುಂಬಗಳಿಗೆ ಸಾಂತ್ವಾನ ಹೇಳಿದರು.
ಕೊರಚ ಸಮಾಜದ ಮುಖಂಡ ಸತೀಶ್ ಮಾತನಾಡಿ ಜಿಲ್ಲಾಡಳಿತಕ್ಕೆ ಕನಿಷ್ಠ ಮಾನವೀಯತೆ ಇಲ್ಲವಾಗಿದೆ ಬೆಂಕಿ ಅವಘಡದಲ್ಲಿ ಆಶ್ರಯ ಕಳೆದುಕೊಂಡ ಕುಟುಂಬಗಳು ತುತ್ತು ಊಟಕ್ಕೆ ಆಹಾಕಾರ ಪಡುತ್ತಿದೆ,ಮಾನವೀಯ ನೆಲೆಯಲ್ಲಿ ತುರ್ತಾಗಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು, ಹಾಗೂ ಸರ್ಕಾರ ಕೂಡಲೇ ಅಗತ್ಯ ಜಾಗ ಗುರ್ತಿಸಿ ನಿವೇಷನ ಮನೆ ಹಾಗೂ ಮೂಲಸೌಕರ್ಯ ನೀಡಬೇಕು,ಸರ್ಕಾರ ಅಗತ್ಯ ಸೌಲಭ್ಯ ನೀಡದಿದ್ದರೆ, ಚಿಕನಾಯ್ಕನಹಳ್ಳಿ ತಾಲ್ಲೋಕು ದಲಿತ ಸಂಘಟನೆಗಳು ಹಾಗೂ ಅಲೆಮಾರಿ ಸಂಘಟನೆಗಳು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದರು ತಿಳಿಸಿದರು
ವರದಿ :ಮಂಜುನಾಥ್ ಹಾಲ್ಕುರಿಕೆ